Header Ads
Breaking News

ಅಂತರ್‍ಕಾಲೇಜು ಮಟ್ಟದವೇಟ್ ಲಿಫ್ಟಿಂಗ್ ಸ್ಪರ್ಧೆಯ ಪುರುಷರ ವಿಭಾಗದಸಮಗ್ರ ಪ್ರಶಸ್ತಿಯನ್ನು ಉಜಿರೆಎಸ್.ಡಿ.ಎಂಕಾಲೇಜು ಪಡೆದುಕೊಂಡಿತು

ಮಂಗಳೂರು ವಿಶ್ವವಿದ್ಯಾನಿಲಯದಅಂತರ್‍ಕಾಲೇಜು ಮಟ್ಟದ ವೇಟ್ ಲಿಫ್ಟಿಂಗ್ ಸ್ಪರ್ಧೆಯ ಪುರುಷರ ವಿಭಾಗದಸಮಗ್ರ ಪ್ರಶಸ್ತಿಯನ್ನು ಉಜಿರೆಎಸ್.ಡಿ.ಎಂಕಾಲೇಜು ಪಡೆದುಕೊಂಡಿತು.ಮಹಿಳೆಯರ ವಿಭಾಗದ ಸಮಗ್ರಪ್ರಶಸ್ತಿಯನ್ನು ಮೂಡುಬಿದಿರೆಯ ಆಳ್ವಸ್ ಕಾಲೇಜು ಮುಡಿಗೇರಿಸಿಕೊಂಡಿತು.

ಎಸ್,ಡಿ.ಎಂಕಾಲೇಜಿನತಂಡಕ್ಕೆರೋಲಿಂಗ್‍ಪ್ರೊ. ಅನಗಲ್ಲಿರಿಚಾರ್ಡ್‍ರೆಬೆಲ್ಲೂ ಹೆಸರಿನಟ್ರೋಫಿ ಹಾಗೂ ಆಳ್ವಾಸ್ ಕಾಲೇಜುತಂಡಕ್ಕೆಶಿರ್ವ ಬ್ಲೊಸಮ್ ಮ್ಯಾನ್‍ಶನ್ ಸೆಲೆಸ್ಟಿನ್ ಹೆಸರಿನಟ್ರೋಫಿ ಲಭಿಸಿತು. ಈ ಸ್ಪರ್ಧೆಯರನ್ನರ್‍ಅಪ್ ಪ್ರಾಶಸ್ತ್ಯ (ಪುರುಷ ವಿಭಾಗ) ಮೂಡುಬಿದಿರೆಯ ಆಳ್ವಾಸ್ ಕಾಲೇಜು, ಮಹಿಳಾ ವಿಭಾಗದರನ್ನರ್‍ಅಪ್ ಪ್ರಶಸ್ತಿಯನ್ನು ಉಜಿರೆಯಎಸ್.ಡಿ.ಎಂಕಾಲೇಜಿನತಂಡ ತನ್ನದಾಗಿಸಿಕೊಂಡಿತು.

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದದೈಹಿಕ ಶಿಕ್ಷಣ ವಿಭಾಗದ ಸಹಯೋಗದೊಂದಿಗೆಆಯೋಜಿಸಲಾಗಿದ್ದಎರಡು ದಿನಗಳ ಮಂಗಳೂರು ವಿ.ವಿ ಅಂತರ್‍ಕಾಲೇಜು ಮಟ್ಟದ ವೈಟ್ ಲಿಫ್ಟಿಂಗ್ ಸ್ಪರ್ಧೆ ಸಮಾರೋಪ ಸಮಾರಂಭದಅಧ್ಯಕ್ಷತೆಯನ್ನುಎಸ್.ಡಿ.ಎಂ ಶಿಕ್ಷಣ ಸಂಸ್ಥೆಯಉಪಾಧ್ಯಕ್ಷ ಪ್ರೊ.ಎಸ್ ಪ್ರಭಾಕರ್‍ವಹಿಸಿದ್ದರು. ವಿಜೇತರಿಗೆಟ್ರೋಫಿ ನೀಡಿ ಗೌರವಿಸಿದರು.

ಕೆಲಸದಲ್ಲಿದೃಢತೆಯೊಂದಿಗೆ ಪರಿಶ್ರಮವಿದ್ದರೆ, ಯಶಸ್ಸುಸಿಗುತ್ತದೆ. ದೇಹಾದಾಢ್ರ್ಯತೆಗೆಉತ್ತಮಆರೋಗ್ಯ, ಸಾಧಿಸುವಛಲ, ದೃಢ ಮನಸ್ಸುಇರಬೇಕು. ಆಗ ಮಾತ್ರ ಸಾಧನೆಯಕಡೆಗೆ ಸಾಗಬಹುದುಎಂದರು.ಈ ಬಾರಿ ಪುರುಷರ ವಿಭಾಗದಲ್ಲಿಉಜಿರೆಯಎಸ್.ಡಿ.ಎಮ್‍ಕಾಲೇಜಿನ ಪುರುಷೋತ್ತಮ್‍ಇವರಿಗೆ ಬೆಸ್ಟ್ ಲಿಫ್ಟರ್ ಪ್ರಶಸ್ತಿ ಲಭಿಸಿತು. ಮಹಿಳೆಯರ ವಿಭಾಗದಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಥುರಾಮ್ ಪ್ರಿಯದರ್ಶಿನಿಗೆ ಲಭಿಸಿತು.

ಈ ಬಾರಿ ಸ್ಪರ್ಧೆಯಲ್ಲಿ ವಿಜೇತರಾದವರಜೊತೆಗೆ ಅನೇಕ ದಾಖಲೆಗಳು ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ನಡೆದಿವೆ.ಹಿಂದಿನ ಎಲ್ಲಾ ದಾಖಲೆಗಳನ್ನು ಮೀರಿಸಿ, ಈ ಬಾರಿ ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮಹಿಳೆಯರ 45ಕೆಜಿ ವಿಭಾಗದಲ್ಲಿ ಕಾರ್ಕಳ ಶ್ರೀ ವೆಂಕಟರಮಣ ಮಹಿಳಾಕಾಲೇಜಿನಚೈತ್ರಾ33ಕೆಜಿ ಸ್ನ್ಯಾಚ್ ವಿಭಾಗದಲ್ಲಿದಾಖಲೆ, 38ಕೆಜಿಯಕ್ಲೀನ್‍ಆ್ಯಂಡ್‍ಜರ್ಕ್ ವಿಭಾಗದಲ್ಲಿದಾಖಲೆ, ಒಟ್ಟಾರೆಯಾಗಿ 71ಕೆಜಿ ಭಾರಎತ್ತುವ ಮೂಲಕ ಮೂರರಲ್ಲೂ ಹೊಸ ದಾಖಲೆ ಬರೆದಿದ್ದಾರೆ.ಮೂಡುಬಿದಿರೆ ಆಳ್ವಾಸ್ ಕಾಲೇಜಿನಥುರಾಮ್‍ಪ್ರಿಯದರ್ಶಿನಿ 49ಕೆಜಿ ವಿಭಾಗದಸ್ನ್ಯಾಚ್‍ವಿಭಾಗದಲ್ಲಿ 71ಕೆಜಿ ಭಾರಎತ್ತುವ ಮೂಲಕ ದಾಖಲೆ ಬರೆದಿದ್ದಾರೆ.ಉಜಿರೆಎಸ್.ಡಿ.ಎಂಕಾಲೇಜಿನ ಸಿಂಧು ಜಿ.ಹೆಗ್ಗಡೆ 55ಕೆಜಿ ವಿಭಾಗದ79ಕೆಜಿಕ್ಲೀನ್‍ಆ್ಯಂಡ್‍ಜರ್ಕ್ ವಿಭಾಗದಲ್ಲಿಭಾರಎತ್ತಿದಾಖಲೆ ಮಾಡಿ,ಎರಡು ವಿಭಾಗದಲ್ಲಿ141ಕೆಜಿ ಭಾರಎತ್ತುವ ಮೂಲಕ ಹೊಸ ದಾಖಲೆ ಮಾಡಿದ್ದಾರೆ.ಇದೇಕಾಲೇಜಿನ ಲಕ್ಷ್ಮೀ ಬಿ 59ಕೆಜಿ ವಿಭಾಗದಲ್ಲಿಕ್ಲೀನ್‍ಆ್ಯಂಡ್‍ಜರ್ಕ್ ವಿಭಾದ 88ಕೆಜಿ ಭಾರಎತ್ತುವ ಮೂಲಕ ದಾಖಲೆ ಮಾಡಿ, ಎರಡೂ ವಿಭಾದಲ್ಲಿ 154ಕೆಜಿ ಎತ್ತಿ ಹೊಸ ದಾಖಲೆ ಮಾಡಿದ್ದಾರೆ.ಈ ಕಾಲೇಜಿನಇನ್ನೋರ್ವ ವಿಧ್ಯಾರ್ಥಿ ಶ್ರಾವ್ಯ ಶ್ರೀ ಜೆ.ಆರ್ 64ಕೆಜಿ ವಿಭಾಗದ,ಸ್ನ್ಯಾಚ್ ವಿಭಾಗದಲ್ಲಿ 66ಕೆಜಿ ಎತ್ತಿದಾಖಲೆ ಮಾಡಿ, ಎರಡೂ ವಿಭಾಗದಲ್ಲಿ 149ಕೆಜಿ ಎತ್ತಿದಾಖಲೆಯನ್ನು ಸೃಷ್ಟಿಸಿದ್ದಾರೆ.

ಮೂಡುಬಿದಿರೆ ಆಳ್ವಸ್ ಕಾಲೇಜಿನ ಯಶಸ್ವಿನಿ ವಿ ಭಂಡಾರಿ 76ಕೆಜಿ ವಿಭಾಗ ಮೂರೂ ವಿಭಾಗದಲ್ಲಿ 63ಕೆಜಿಸ್ನ್ಯಾಚ್, 80ಕೆಜಿಕ್ಲೀನ್‍ಆ್ಯಂಡ್‍ಜರ್ಕ್, ಎರಡೂ ವಿಭಾದಲ್ಲಿಒಟ್ಟು 143ಕೆಜಿ ದಾಖಲೆ ಮಾಡಿದ್ದಾರೆ. ಇದೇಕಾಲೇಜಿನ ಅನುಷ ಎಸ್.ಪಿ 81ಕೆಜಿ ವಿಭಾಗದ 70ಕೆಜಿಸ್ನ್ಯಾಚ್‍ನದಾಖಲೆ ಮಾಡಿದ್ದಾರೆ ಹಾಗೂ ಉಷ ಎಸ್,ಆರ್ 87ಕೆಜಿ ವಿಭಾಗದಲ್ಲಿ 67ಕೆಜಿಸ್ನ್ಯಾಚ್, 90ಕೆಜಿಕ್ಲೀನ್‍ಆ್ಯಂಡ್‍ಜರ್ಕ್, ಒಟ್ಟು ಮೂರು ವಿಭಾಗದಲ್ಲಿಯೂ 157ಕೆಜಿ ಎತ್ತಿದಾಖಲೆ ಮಾಡಿದ್ದಾರೆ.

ಪುರುಷರ ವಿಭಾಗದ ಭಾರಎತ್ತುವ ಸ್ಪರ್ಧೆಯಲ್ಲಿ ಮೂಡುಬಿದಿರೆ ಆಳ್ವಸ್ ಕಾಲೇಜಿನ ನಾಗರಾಜ್ 55ಕೆಜಿ ವಿಭಾಗದಲ್ಲಿಸ್ನ್ಯಾಚ್‍ವಿಭಾಗದ 95ಕೆಜಿ ಹಾಗೂ ಕ್ಲೀನ್‍ಆ್ಯಂಡ್‍ಜರ್ಕ್ ವಿಭಾಗದ 112ಕೆಜಿ ಒಟ್ಟಾರೆಯಾಗಿ 207 ಕೆಜಿ ಭಾರಎತ್ತುವ ಮೂಲಕ ಮೂರರಲ್ಲಿದಾಖಲೆ ಸೃಷ್ಟಿಸಿದ್ದಾರೆ.

ಉಜಿರೆಎಸ್.ಡಿ.ಎಸ್‍ಕಾಲೇಜಿನ ಪುರುಷೋತ್ತಮ್ 61ಕೆಜಿ ವಿ. ಮೂರರಲ್ಲಿಯೂ 111ಕೆಜಿಸ್ನ್ಯಾಚ್,141ಕೆಜಿಕ್ಲೀನ್‍ಆ್ಯಂಡ್‍ಜರ್ಕ್,ಒಟ್ಟಾರೆಯಾಗಿ 252ಕೆಜಿ ಭಾರಎತ್ತಿ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.ಇದೇಕಾಲೇಜಿನರಜತ್‍ರೈ 73ಕೆಜಿ ವಿಭಾದಲ್ಲಿ 112ಕೆಜಿಸ್ನ್ಯಾಚ್, 140ಕೆಜಿಕ್ಲೀನ್‍ಆ್ಯಂಡ್‍ಜರ್ಕ್, ಒಟ್ಟಾರೆಯಾಗಿ 252ಕೆಜಿ ಎತ್ತಿ ಮೂರು ವಿಭಾಗದಲ್ಲೂದಾಖಲೆ ಮಾಡಿದ್ದಾರೆ. ಹಾಗೂ ಶಿವಪ್ರಕಾಶ್ 89ಕೆಜಿ ವಿಭಾಗದಲ್ಲಿ 130ಕೆಜಿಸ್ನ್ಯಾಚ್, 170ಕೆಜಿಕ್ಲೀನ್‍ಆ್ಯಂಡ್‍ಜರ್ಕ್, ಒಟ್ಟಾರೆ 300ಕೆಜಿ ಭಾರಎತ್ತಿ ಮೂರು ವಿಭಾಗದಲ್ಲಿ ಸಾಧನೆ ಮಾಡಿದ್ದಾರೆ.ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಪ್ರತ್ಯುಶ್ 102ಕೆಜಿ ವಿಭಾಗದಲ್ಲಿ 100ಕೆಜಿಸ್ನ್ಯಾಚ್. ವಿಭಾಗದಲ್ಲಿ ವಿಶೇಷ ದಾಖಲೆ ಮಾಡಿದ್ದಾರೆ.

ವಿಶ್ವವಿದ್ಯಾಲಯದ ವ್ಯಾಪ್ತಿಯ 13 ಕಾಲೇಜುಗಳಿಂದ 170ಕ್ಕೂ ಅಧಿಕಯುವಕಯುವತಿಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.ಮಂಗಳೂರು ವಿ.ವಿಕ್ರೀಡಾ ಸಹಾಯಕ ನಿರ್ದೇಶಕ ಹರಿದಾಸ್‍ರೈ, ಎಸ್.ಡಿ.ಎಮ್‍ಕ್ರೀಡಾ ಮಂಡಳಿಯ ಕಾರ್ಯದರ್ಶಿ ರಮೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನುಧರ್ಮೇಂದ್ರ ನಿರೂಪಿಸಿ ವಂದಿಸಿದರು.
ವರದಿ: ಚೈತ್ರಾ
ಚಿತ್ರ: ಅಖಿಲೇಶ್

Related posts

Leave a Reply

Your email address will not be published. Required fields are marked *