Header Ads
Breaking News

ಅಂತರ್-ಕಾಲೇಜು ವೈಟ್ ಲಿಫ್ಟಿಂಗ್ ಸ್ಪರ್ಧೆ

 ಜಾಗತಿಕ ಮಟ್ಟದಕ್ರೀಡಾರಂಗದಲ್ಲಿ ಗುರುತಿಸಿಕೊಳ್ಳುವ ದೃಢಸಂಕಲ್ಪದೊಂದಿಗೆಇದ್ದರೆ ಮಹತ್ವದ ಸಾಧನೆ ಸಾಧ್ಯವಾಗುತ್ತದೆಎಂದುಕಾಮನ್‍ವೆಲ್ತ್‍ಕ್ರೀಡಾಕೂಟದ ವೇಟ್‍ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಅಂತರರಾಷ್ಟ್ರೀಯಖ್ಯಾತಿಯಕ್ರೀಡಾಪಟು, ಚಂಡೀಗಢ ವಾಯುಪಡೆಯಕಿರಿಯ ವಾರೆಂಟ್‍ಅಧಿಕಾರಿಗುರುರಾಜ್ ಪೂಜಾರಿಅಭಿಪ್ರಾಯಪಟ್ಟರು.

ಉಜಿರೆಯಶ್ರೀ ಧರ್ಮಸ್ಥಳ ಮಂಜುನಾಥೇಶ್ವರಕಾಲೇಜುಹಾಗೂ ಮಂಗಳೂರು ವಿಶ್ವವಿದ್ಯಾನಿಲಯದದೈಹಿಕ ಶಿಕ್ಷಣ ವಿಭಾಗದಸಹಯೋಗದೊಂದಿಗೆಇಂದ್ರಪ್ರಸ್ಥಸಭಾಂಗಣದಲ್ಲಿಎರಡು ದಿನಗಳ ಮಂಗಳೂರು ವಿ.ವಿ ಅಂತರ್‍ಕಾಲೇಜು ಮಟ್ಟದ ವೈಟ್ ಲಿಫ್ಟಿಂಗ್ ಸ್ಪರ್ಧೆಯನ್ನುಗುರುವಾರ ಉದ್ಘಾಟಿಸಿ ಮಾತನಾಡಿದರು.

ಕ್ರೀಡಾಕ್ಷೇತ್ರದಲ್ಲಿತಮ್ಮನ್ನುತಾವು ಗುರುತಿಸಿಕೊಂಡು ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದವರಿಗೆಉದ್ಯೋಗ ಅವಕಾಶಗಳು ಅರಸಿಕೊಂಡು ಬರುತ್ತವೆ. ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಸಾಧನೆ ಮಾಡಿದವರಿಗೆರೈಲ್ವೆ ಇಲಾಖೆ, ವಾಯುಸೇನೆ, ಅಂಚೆ ವಿಭಾಗದಲ್ಲಿ ಹಾಗೂ ಇನ್ನಿತರ ಸರ್ಕಾರಿಉದ್ಯೋಗಾವಕಾಶ ಲಭಿಸುತ್ತದೆ. ಒಮ್ಮೆ ಸರ್ಕಾರಿಉದ್ಯೋಗದೊರೆತರೆ ನಮ್ಮಜೀವನಒಂದುಉತ್ತಮ ಮಾರ್ಗದಲ್ಲಿ ನೆಲೆಗೊಳ್ಳುತ್ತದೆಎಂದರು.

ಶ್ರದ್ಧೆ, ಛಲ, ಇದ್ದರೆ ಮಾತ್ರ ಸಾಧನೆಯಹಾದಿ ಕ್ರಮಿಸಲು ಸಾಧ್ಯ. ಸಾಧನೆಯಒಂದೊಂದು ಹೆಜ್ಜೆಯತರುವಾಯಉನ್ನತ ಸಾಧನೆಯ ಕನಸುಗಳನ್ನು ಇರಿಸಿಕೊಳ್ಳಬೇಕು. ಕ್ರೀಡಾಲೋಕದಲ್ಲಿ ಸಾಧಿಸುವ ಕನಸುಳ್ಳವರು ಅಂತರರಾಷ್ಟ್ರೀಯ ಮಟ್ಟದಲ್ಲಿಗಮನಾರ್ಹ ಸಾಧನೆಯಕಡೆಗೆಗಮನಹರಿಸಬೇಕುಎಂದು ಹೇಳಿದರು.

ಈ ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದಎಸ್.ಡಿ.ಎಂಕಾಲೇಜಿನ ಪ್ರಾಂಶುಪಾಲ ಡಾ. ಸತೀಶ್ಚಂದ್ರಎಸ್ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಯುವಕ, ಯುವತಿಯರಿಗೆ ಫಿಟ್‍ನೆಸ್ ಬಗ್ಗೆ ಹೆಚ್ಚು ಕಾಳಜಿ ಇದೆ. ಆರೋಗ್ಯಪೂರ್ಣದೇಹದಲ್ಲಿ, ಆರೋಗ್ಯ ಪೂರ್ಣ ಮನಸಿರಲು ಸಾಧ್ಯ, ಆರೋಗ್ಯಪೂರ್ಣ ವ್ಯಕ್ತಿಗಳಿಂದ ಆರೋಗ್ಯಪೂರ್ಣದೇಶವನ್ನುನಿರ್ಮಿಸಲು ಸಾಧ್ಯ. ಆದ್ದರಿಂದ ನಾವು ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಲಿಷ್ಠರಾಗಿರಬೇಕುಎಂದರು.

ಮೊದಲ ಬಾರಿಗೆಎಸ್.ಡಿ.ಎಂಅಂತರ್‍ಕಾಲೇಜಿನಲ್ಲಿ ಭಾರಎತ್ತುವ ಸ್ಪರ್ಧೆಯನ್ನು1881-82ರಲ್ಲಿ ಪರಿಚಯಿಸಿದ ಪುತ್ತೂರಿನಉದಯ ಭಟ್ ಮತ್ತುಕ್ರೀಡಾಸಾಧಕಗುರುರಾಜ ಪೂಜಾರಿಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮಂಗಳೂರು ವಿ.ವಿ. ವ್ಯಾಪ್ತಿಯ13 ಕಾಲೇಜುಗಳ 170 ಕ್ಕೂ ಅಧಿಕ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು. ಈ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ವಿಜೇತರಾದವರಿಗೆಪ್ರೊ. ಅನಗಲ್ಲಿರಿಚಾರ್ಡ್‍ರೆಬೆಲ್ಲೂಟ್ರೋಫಿ, ಹಾಗೂ ಮಹಿಳೆಯರ ವಿಭಾಗದಲ್ಲಿ ವಿಜೇತರಾದವರಿಗೆ ಶಿರ್ವ ಬ್ಲೊಸಮ್ ಮ್ಯಾನ್‍ಶನ್ ಸೆಲೆಸ್ಟಿನ್ ಟ್ರೋಫಿ ನೀಡಲಾಗುವುದು.
ಎಸ್.ಡಿ.ಎಂಕಾಲೇಜಿನದೈಹಿಕ ಶಿಕ್ಷಣ ತರಬೇತುದಾರರಮೇಶ್ ಹೆಚ್, ಹಾಗೂ ಐಟಿ ಕಾಲೇಜಿನಕ್ರೀಡಾ ನಿರ್ದೇಶಕರಾಜೇಂದ್ರ ಪ್ರಸಾದ್ ಉಪಸ್ಥಿತರಿದ್ದರು. ಡಾ.ಕುಮಾರ ಹೆಗಡೆಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

ವರದಿ: ಚೈತ್ರಾ
ಚಿತ್ರ: ಅಖಿಲೇಶ್

Related posts

Leave a Reply

Your email address will not be published. Required fields are marked *