Header Ads
Breaking News

ಅಂಧ ಮಗುವಿಗೆ ವೈದ್ಯಕೀಯ ನೆರವು – ಕುಂದಾಪುರದಲ್ಲಿ ಕಾರ್ಯಾಚರಿಸುತ್ತಿರುವ ಅಮ್ಮ ಪಟಾಕಿ

ಕುಂದಾಪುರ: ದೀಪಾವಳಿ ಹಬ್ಬದ ಪ್ರಯುಕ್ತ ಕುಂದಾಪುರ ನೆಹರು ಮೈದಾನದಲ್ಲಿ ನಡೆಯುತ್ತಿರುವ “ಅಮ್ಮ” ಪಟಾಕಿ ಮೇಳ ಮೂರನೇ ವರ್ಷಕ್ಕೆ ಕಾಲಿಟ್ಟಿದೆ. ಮೂರು ವರ್ಷಗಳಿಂದ ಗ್ರಾಹಕರ ಮನಗೆದ್ದಿರುವ ಅಮ್ಮ ಪಟಾಕಿ ಮೇಳ ಮಾನವೀಯ ಸೇವೆಯಲ್ಲಿಯೂ ಗುರುತಿಸಿಕೊಂಡಿದೆ. ಈ ವರ್ಷ ಮದ್ದುಗುಡ್ಡೆ ನಿವಾಸಿ ಉಮೇಶ ಮತ್ತು ಸುಲೋಚನ ದಂಪತಿಗಳ ಅಂಧ ಮಗುವಿಗೆ ವೈದ್ಯಕೀಯ ನೆರವನ್ನು ಅಮ್ಮ ಪಟಾಕಿ ಮಳಿಗೆಯವರು ನೀಡಿದ್ದಾರೆ.

ಈ ವೈದ್ಯಕೀಯ ನೆರವನ್ನು ಕುಂದಾಪುರದ ಖ್ಯಾತ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಹಸ್ತಾಂತರ ಮಾಡಿದರು.ಈ ಸಂದರ್ಭದಲ್ಲಿ ಕುಂದಾಪುರ ನಗರ ಪ್ರಾಧಿಕಾರ ಮಾಜಿ ಅಧ್ಯಕ್ಷ ವಿಕಾಸ ಹೆಗ್ಡೆ, ಪುರಸಭಾ ಸದಸ್ಯರು ಶ್ರೀಧರ ಶೆರುಗಾರ್, ಅಮ್ಮ ಪಟಾಕಿಯ ಶಶಿ ರಾಜ್ ಪೂಜಾರಿ, ವಿಶ್ವ ರಾಜ್ ಪೂಜಾರಿ, ವಿಜಯ, ಪ್ರಶಾಂತ್ ಕೋಟೇಶ್ವರ, ನಟೇಶ್, ನಾಗೇಶ್ ಉಪಸ್ಥಿತರಿದ್ದರು.ಮುಂದಿನ ವರ್ಷ ದೀಪಾವಳಿ ಸಂಧರ್ಭ ಕ್ಯಾನ್ಸರ್ ಪೀಡಿತರಿಗೆ ನೇರವು ನೀಡುವ ಉದ್ದೇಶ ಅಮ್ಮ ಪಟಾಕಿ ಸಂಸ್ಥೆ ಹೊಂದಿದೆ.
ವರದಿ: ಶ್ರೀಕಾಂತ್ ಹೆಮ್ಮಾಡಿ ಕುಂದಾಪುರ

Related posts

Leave a Reply

Your email address will not be published. Required fields are marked *