Header Ads
Breaking News

ಅಕ್ಟೋಬರ್ 10 ಮತ್ತು 11ರಂದು ಉಡುಪಿ ರಾಜಾಂಗಣದಲ್ಲಿ ನೃತ್ಯೋತ್ಸವ ಕಾರ್ಯಕ್ರಮ

ಸೃಷ್ಟಿ ನೃತ್ಯ ಕಲಾ ಕುಟೀರ(ರಿ) ಉಡುಪಿ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಮಠ ಪರ್ಯಾಯ ಪಲಿಮಾರು ಮಠದ ಸಹಯೋಗದಲ್ಲಿ ಅಕ್ಟೋಬರ್ 10 ಮತ್ತು 11ರಂದು ಎರಡು ದಿನಗಳ ಕಾಲ ಉಡುಪಿ ರಾಜಾಂಗಣದಲ್ಲಿ ನೃತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ. ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಸೃಷ್ಟಿ ನೃತ್ಯ ಕಲಾ ಕುಟೀರದ ಅಧ್ಯಕ್ಷೆ ಡಾ. ಮಂಜರಿ ಚಂದ್ರ ಪುಷ್ಪರಾಜ್ ಮಾಹಿತಿ ನೀಡಿದರು.ಈ ಭರತನಾಟ್ಯ ಉತ್ಸವವನ್ನು ಪರ್ಯಾಯ ಮಠಾದೀಶ ವಿದ್ಯಾದೀಶ ತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತುಳಸಿ ದೇವಾಡಿಗ, ಮೇಜರ್ ಸಿ ರಾಜಶೇಖರ್, ಎಮ್.ಎಸ್ ವಿಷ್ಣು ಪದ್ಮಲತಾ ಉಪಸ್ಥಿತರಿರಲಿದ್ದಾರೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಟಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರ್, ಅಕ್ಷತಾ ಪವನ್, ವಿನೋದಾ, ಪುಪ್ಷ್ಪರಾಜ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *