Header Ads
Header Ads
Header Ads
Header Ads
Header Ads
Header Ads
Breaking News

ಅಕ್ಟೋಬರ್ 11 ರಂದು ಕರಾವಳಿಯಲ್ಲಿ ದೇವರು ಬೇಕಾಗಿದ್ದಾನೆ ಚಿತ್ರ ಬಿಡುಗಡೆಗೆ

ಹೊರಿಜೋನ್ ಮೂವೀಸ್ ಬ್ಯಾನರ್ ಅಡಿ ನಿರ್ಮಾಣವಾದ ದೇವರು ಬೇಕಾಗಿದ್ದಾರೆ ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು ಆಕ್ಟೋಬರ್ 11ರಂದು ಕರಾವಳಿಯ ಮಲ್ಟಿಫ್ಲೆಕ್ಸ್ ಸೇರಿದಂತೆ ರಾಜ್ಯದ ವಿವಿಧೆಡೆ ಬಿಡುಗಡೆ ಆಗಲಿದೆ ಎಂದು ಚಿತ್ರದ ಕಥೆ ಚಿತ್ರ ಕಥೆ ಹಾಗೂ ನಿರ್ದೇಶಕ ಕೇಂಜ ಚೇತನ್ ಕುಮಾರ್ ತಿಳಿಸಿದ್ದಾರೆ.ರಸ್ತೆ ಅಪಘಾತದಲ್ಲಿ ತನ್ನ ಕುಟುಂಬದವರನ್ನು ಕಳೆದುಕೊಂಡ ಆರು ತಿಂಗಳ ಮಗುವನ್ನು ಊರಿನ ಮುಖ್ಯಸ್ಥ ಸಾಕುವುದು ಮತ್ತು ಮಗು ದೊಡ್ದದಾದಾಗ ತನ್ನ ತಂದೆ ತಾಯಿ ದೇವರ ಬಳಿ ಇದ್ದಾರೆ ಎಂದು ತಿಳಿದು ದೇವರನ್ನು ಹುಡುಕಿಕೊಂಡು ಹೋಗುವುದು ಕಥೆಯ ಸಾರಾಂಶವಾಗಿದೆ. ಒಟ್ಟು 33 ದಿನಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದ್ದು ಚಿಕ್ಕಬಳ್ಳಾಪುರದ ಬಳಿಯ ಗುಡಿ ಬಂಡೆ, ಬೆಂಗಳೂರು ಸೇರಿದಂತೆ ವಿವಿದೆಡೆ ಚಿತ್ರದ ಚಿತ್ರೀಕರಣ ನಡೆಸಲಾಗಿದ್ದು ಚಿತ್ರದಲ್ಲಿ ಬಾಲ ನಟನಾಗಿ ಮಾಸ್ಟರ್ ಅನೂಪ್ ನಟಿಸಿದ್ದು ಚಿತ್ರಕ್ಕೆ ಜೀವ ತುಂಬಿದ್ದಾನೆ. ಎಸ್.ಶಿವರಾಂ, ಪ್ರಸಾದ್ ವಷಿಷ್ಟ, ಸತ್ಯನಾಥ್, ಆಟೋ ನಾಗರಾಜ್, ನಾಗೇಶ್ ಕಾರ್ತಿಕ್ ಮುಂತಾದವರು ತಾರಾಗಣದಲಿದ್ದಾರೆ. ಚಿತ್ರಕ್ಕೆ ಛಾಯಾಗ್ರಹಣ ವನ್ನು ರುದ್ರಮುನಿ, ಸಂಗೀತವನ್ನು ಜುವೇನ್ ಸಿಂಗ್, ಸಾಹಿತ್ಯ ವಿಜಯ್ ವಿಶ್ವಮಣಿ ಮಾಡಿದ್ದು ಒಟ್ಟು 60ಲಕ್ಷರೂ ವೆಚ್ಚದಲ್ಲಿ ಚಿತ್ರ ನಿರ್ಮಾಣವಾಗಿದೆ ಎಂದರು.

Related posts

Leave a Reply

Your email address will not be published. Required fields are marked *