Header Ads
Header Ads
Breaking News

ಪಡುಬಿದ್ರಿ: ಅಕ್ರಮವಾಗಿ ಸಾಗಿಸುತ್ತಿದ್ದ ಕೋಣ ವಶ

ಹಿಂದೂ ಪರ ಸಂಘಟನೆಗಳ ಖಚಿತ ಮಾಹಿತಿಯ ಮೇರೆಗೆ ಹೆದ್ದಾರಿಯಲ್ಲಿ ಕಾದು ಕುಳಿತು ಪಡುಬಿದ್ರಿ ಪೊಲೀಸರು, ರಾತ್ರಿ ಅಕ್ರಮವಾಗಿ ಕೋಣ ಸಾಗಿಸುತ್ತಿದ್ದ ವಾಹನ ಸಹಿತ ಅದಕ್ಕೆ ಬೆಂಗಾವಲಾಗಿ ಬಂದ ಓಮ್ನಿ ಹಾಗೂ ಅದರಲ್ಲಿದ್ದ ನಾಲ್ವರನ್ನು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ.

ಈ ಬಗ್ಗೆ ಮಾತನಾಡಿದ ಹಿಂದೂ ಪರ ಸಂಘಟನೆಯ ಕಾರ್ಯಕರ್ತ ಮನೋಹರ್, ಕದ್ದು ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದ ಜಾಲವೊಂದು ಸಕ್ರಿಯವಾಗಿರುವುದು ನಮ್ಮ ಗಮನಕ್ಕೆ ಬಂದಿದೆ, ಈ ಬಗ್ಗೆ ಜಿಲ್ಲಾ ಎಸ್ಪಿಯವರಿಗೂ ನಮ್ಮ ಜಿಲ್ಲಾ ಸಂಘಟನೆಯ ಮೂಲಕ ಮನವಿಯೊಂದನ್ನು ನೀಡಿದ್ದೇವೆ ಎಂದ್ರು. ರಾಜಕೀಯ ರಕ್ಷಣೆ ಹೊಂದಿರುವ ಕಸಾಯಿಖಾನೆಯ ರೂವಾರಿಗಳನ್ನು ಏನೂ ಮಾಡಲಾಗದೆ ಇಂದಿಗೂ ಅಕ್ರಮವಾಗಿ ಕಸಾಯಿಖಾನೆ ನಡೆಯುತ್ತಿದೆ. ಈ ಬಗ್ಗೆ ಜಿಲ್ಲಾ ಎಸ್ಪಿಯವರು ತೀರ ನಿಗಾ ವಹಿಸುವಂತ್ತೆ ಹಿಂದೂ ಸಂಘಟನೆಯ ಮುಖಂಡ ರಾಜೇಶ್ ಕೋಟ್ಯಾನ್ ಒತ್ತಾಯಿಸಿದ್ದಾರೆ.

ಇಂದಿನ ಪ್ರಕರಣದಲ್ಲಿ ಯಾವುದೇ ರಾಜಕೀಯ ಪ್ರವೇಶಿಸಿ ಪ್ರಕರಣ ತಿರುಚಲು ಯತ್ನಿಸಿದರೆ ಅವರ ವಿರುದ್ಧವೇ ಹೋರಾಟ ನಡೆಸ ಬೇಕಾದೀತು ಎಂಬುದಾಗಿ ಪಡುಬಿದ್ರಿ ಹಿಂದೂಪರ ಸಂಘಟನೆಯ ಮುಖಂಡ ಅಜೀತ್ ಶೆಟ್ಟಿ ಎಚ್ಚರಿಸಿದ್ದಾರೆ. ಇದೀಗ ಅರೋಪಿಗಳು ಹಾಗೂ ಕೋಣಗಳು ಸಹಿತ ಎರಡೂ ವಾಹನಗಳು ಪಡುಬಿದ್ರಿ ಪೊಲೀಸರ ವಶದಲ್ಲಿದೆ.

Related posts

Leave a Reply

Your email address will not be published. Required fields are marked *