Header Ads
Breaking News

ಅಕ್ರಮ ಮದ್ಯ ಸಾಗಾಟ ಪ್ರಕರಣ : ವಾಹನ ಸಹಿತ ಮದ್ಯ ವಶಪಡಿಸಿಕೊಂಡು ಅಬಕಾರಿ ಪೊಲೀಸರು

ಹಾಸನದ ಬೇಲೂರಿನಲ್ಲಿ ಅಕ್ರಮ ಮದ್ಯ ಸಾಗಾಟದ ಅಡ್ಡಕ್ಕೆ ಅಬಕಾರಿ ಪೊಲೀಸರು ದಾಳಿ ನಡೆಸಿ ಟಿವಿಎಸ್ ವಾಹನ ಸಹಿತ ಮದ್ಯ ವಶಪಡಿಸಿಕೊಂಡ ಘಟನೆ ನಡೆದಿದೆ.ಅಬಕಾರಿ ಉಪ ಆಯುಕ್ತರು ಹಾಸನ ಜಿಲ್ಲೆ ಹಾಗೂ ಅಬಕಾರಿ ಉಪಾಧೀಕ್ಷಕರು ಹಾಸನ ಉಪವಿಭಾಗಗಳ ಮಾರ್ಗದರ್ಶನದಂತೆ ಪತ್ತೆ ಹಚ್ಚಲಾಗಿದೆ. ಸುಮಾರು ಐದು ಲೀಟರ್ ಕಳ್ಳಬಟ್ಟಿ ಸಾರಾಯಿ ಪತ್ತೆಯಾಗಿದ್ದು ವಾಹನ ಸಹಿತ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.ದಾಳಿಯ ವೇಳೆ ಬೇಲೂರು ವಲಯ ಅಬಕಾರಿ ನಿರೀಕ್ಷಕರಾದ ಕೇಶವಮೂರ್ತಿ ಎಂ.ಕೆ ಅಬಕಾರಿ ಉಪನಿರೀಕ್ಷಕರಾದ ಸ್ವರ್ಣ ಶ್ರೀ ವಿ. ಅಬಕಾರಿ ರಕ್ಷಕರುಗಳಾದ ನವೀನ್ ಕುಮಾರ್, ಪ್ರತಾಪ್ ಜಿ ಆರ್, ಮಲ್ಲಿಕಾರ್ಜುನ ಕಲಬುರ್ಗಿ, ಪ್ರದೀಪ್ ಆರ್ ಹಾಗೂ ವಾಹನ ಚಾಲಕರಾದ ವಿಶ್ವನಾಥ್ ಹಾಜರಿದ್ದರು.

Related posts

Leave a Reply

Your email address will not be published. Required fields are marked *