Header Ads
Breaking News

ಅಕ್ಷಯ ತೃತೀಯದಂದು ಜಲ ಅಕ್ಷಯ ಆಗಲೆಂದು ಪ್ರಾರ್ಥನೆ

ಜೋಸ್ ಆಲೂಕ್ಕಾಸ್ ಆಭರಣ ಮಳಿಗೆ ಮತ್ತು ಉಡುಪಿ ಜಿಲ್ಲಾ ನಾಗರಿಕ ಸಮಿತಿ ವತಿಯಿಂದ, ಕುಡಿಯುವ ನೀರಿನ ಬರ ಎದುರಾದ ಕಾರಣದಿಂದ ’ಮಳೆ ಬರಲಿ, ಜಲ ಅಕ್ಷಯ ಆಗಲೆಂದು’, ರಥಬೀದಿಯ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸುವ ಮೂಲಕ ಅಕ್ಷಯ ತೃತೀಯವನ್ನು ಆಚರಿಸಲಾಯಿತು.

ಚಿತ್ತರಂಜನ್ ಸರ್ಕಲ್ ಸನಿಹದ ಮಾರುತಿ ವಿಥೀಕಾದ ಬಳಿ ತೆರೆದ ಪಾನೀಯ ಕುಟೀರದಲ್ಲಿ, ಅಕ್ಷಯ ತೃತೀಯದ ಪ್ರಯುಕ್ತ ಸಾರ್ವಜನಿಕರಿಗೆ ತಂಪು ಪಾನೀಯ ವಿತರಣೆಯು ನಡೆಯಿತು. ಕಾರ್ಯಕ್ರಮದಲ್ಲಿ ಜೋಸ್ ಆಲೂಕ್ಕಾಸ್ ಚಿನ್ನಾಭರಣ ಸಂಸ್ಥೆಯ ಪ್ರಬಂಧಕ ರಾಜೇಶ್ ಎನ್ ಆರ್, ಸಿಬ್ಭಂದಿಗಳಾದ ಸುರೇಶ್, ರತೀಶ್, ಗೋಪಾಲ್ ಮತ್ತು ನಾಗರಿಕ ಸಮಿತಿಯ ಪದಾಧಿಕಾರಿಗಳಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ಶ್ರೀಮತಿ ವಿನೋದಾ ಕೆ ಸಾಮಗ, ಕು.ಯುಕ್ತ ಕೆ ಸಾಮಗ ಉಪಸ್ಥಿತರಿದ್ದರು.

 

Related posts

Leave a Reply

Your email address will not be published. Required fields are marked *