Header Ads
Header Ads
Breaking News

ಅಗಸ್ಟ್ 24ರಂದು ಇಸ್ಕಾನ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಮಹೋತ್ಸವ

ಇಸ್ಕಾನ್ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಶ್ರೀ ಕೃಷ್ಣ ಜನ್ಮಾಷ್ಠಮಿ ಮಹೋತ್ಸವ ಅಭಿಷೇಕ, ಉಯ್ಯಾಲೆ ಸೇವೆ, ಸಂಕೀರ್ತನೆ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮವು ಮಂಗಳೂರಿನ ಡಾ.ಟಿ.ಎಂ.ಎ ಪೈ ಹಾಲ್‍ನಲ್ಲಿ ನಡೆಯಲಿದೆ ಎಂದು ನಂತೂರಿನ ಇಸ್ಕಾನ್ ರಾಧ ಗೋವಿಂದ ದೇವಸ್ಥಾನದ ನಾಮನಿಷ್ಟದಾಸ್ ಸ್ವಾಮೀಜಿ ಹೇಳಿದರು.ಅವರು, ಮಂಗಳೂರಿನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿ ಅಗಸ್ಟ್ 24ರಂದು ಸಂಜೆ 5 ಗಂಟೆಯಿಂದ ರಾತ್ರಿ 12:30ರ ತನಕ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಅಭಿಷೇಕ, ಉಯ್ಯಾಲೆ ಸೇವೆ, ಸಂಕೀರ್ತನೆ, ಜಪ, ಪ್ರಸಾದ ವಿತರಣೆ ಮಂಗಳೂರಿನ ಡಾ.ಟಿ.ಎಂ.ಎ ಪೈ ಹಾಲ್‍ನಲ್ಲಿ ನಡೆಯಲಿದೆ. ಇನ್ನೂ ಈ ಪುಣ್ಯ ಕಾರ್ಯದಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ವಿನಯ್ ಹೆಗ್ಡೆ ಹಾಗೂ ಅಜೀತ್ ಕುಮಾರ್ ಮಾಲಾಡಿ ಗಣ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಈ ಸಂದರ್ಭ ಶಿವಾಸ್ ದಾಸ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *