
ಎಲೆ ಹಳದಿ ರೋಗದಿಂದ ಅಡಿಕೆ ತೋಟ ನಾಶ ಹೊಂದಿದವರಿಗೆ ಮತ್ತು ಪರ್ಯಾಯ ಬೆಳೆ ಅಳವಡಿಸಿಕೊಳ್ಳಲು ಒಂದು ಬಾರಿಯ ಪರಿಹಾರವಾಗಿ ಬಜೆಟ್ನಲ್ಲಿ 25 ಕೋಟಿ ರೂ ಪ್ಯಾಕೇಜ್ ಘೋಷಿಸಬೇಕು, ಎಲೆ ಹಳದಿ ರೋಗ ನಿವಾರಣೆಗೆ ಉನ್ನತ ಮಟ್ಟದ ಸಂಶೋಧನೆಗೆ ನಿರ್ದೇಶನ ನೀಡಬೇಕು ಎಂದು ಸಚಿವರು ಮತ್ತು ಶಾಸಕರನ್ನು ಒಳಗೊಂಡ ನಿಗೋಗವು ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದೆ. ಸಚಿವರಾದ ಅಂಗರಾ, ಕೋಟಾ ಶ್ರೀನಿವಾಸ್ ಪೂಜಾರಿ ಮತ್ತು ಆರ್ ಶಂಕರ್ ಅವರ ನೇತೃತ್ವದಲ್ಲಿ ಕರಾವಳಿ, ಮಲೆನಾಡಿನ ಶಾಸಕರ ನಿಯೋಗ ಸಿಎಂವನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.