Header Ads
Header Ads
Breaking News

ಅಡ್ಡೂರಿನಲ್ಲಿ ಅನಧಿಕೃತ ಮರಳು ಅಡ್ಡೆಗೆ ದಾಳಿ : ಮೂರು ಲಾರಿ ಸಹಿತ ಬೋಟ್‌ಗಳ ವಶ

ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಅಡ್ಡೂರಿನಲ್ಲಿರುವ ಅನಧಿಕೃತ ಮರಳು ಅಡ್ಡೆಗೆ ಇಂದು ಮುಂಜಾನೆ ಮಂಗಳೂರು ಸಹಾಯಕ ಆಯುಕ್ತರ ನೇತೃತ್ವದ ತಂಡ ದಾಳಿ ನಡೆಸಿದೆ.

ಖಚಿತ ಮಾಹಿತಿ ಮೇರೆಗೆ ಸಹಾಯಕ ಆಯುಕ್ತರು ಬಜ್ಪೆ ಪೊಲೀಸರೊಂದಿಗೆ ಮುಂಜಾನೆ ಸುಮಾರು 3 ರಿಂದ 5ರ ಮಧ್ಯೆ ದಾಳಿ ನಡೆಸಿ, ಮರಳು ತುಂಬಿದ ಎರಡು ಲಾರಿ ಮತ್ತು ಮರಳು ಸಾಗಾಟಕ್ಕೆ ಬಳಸುತ್ತಿದ್ದ ಲಾರಿಯೊಂದನ್ನು ವಶಪಡಿಸಿಕೊಂಡಿದ್ದಾರೆ.20ಕ್ಕೂ ಹೆಚ್ಚು ಮರಳು ಬೋಟ್‌ಗಳನ್ನು ಪೊಲೀಸರು ವಶಪಡಿಸಕೊಂಡಿದ್ದಾರೆ. ಪಣಂಬೂರು ಎಸಿಪಿ ಶ್ರೀನಿವಾಸ ಗೌಡ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಫಲ್ಗುಣಿ ನದಿಯಿಂದ ಅಕ್ರಮ ಮರಳನ್ನು ಲಾರಿಯಲ್ಲಿ ಹೇರಿಕೊಂಡು ಅಡ್ಡೂರು ಮತ್ತು ಮುತ್ತೂರು ಗ್ರಾಮದ ಪ್ರದೇಶಗಳಲ್ಲಿ ಶೇಖರಿಸಿಡುತ್ತಿದ್ದರು ಎನ್ನಲಾಗಿದೆ.

Related posts

Leave a Reply