Header Ads
Header Ads
Breaking News

ಅತ್ತಾವರದ ಕೆಎಂಸಿಯಲ್ಲಿ ಅತ್ಯಾಧುನಿಕ ಬ್ರಾಕಿಥೆರಫಿ ಚಿಕಿತ್ಸಾ ವಿಭಾಗ ಆರಂಭ: ಶಾಸಕ ವೇದವ್ಯಾಸ ಕಾಮತ್‍ರಿಂದ ಉದ್ಘಾಟನೆ

ವೈದ್ಯಕೀಯ ಚಿಕಿತ್ಸಾ ಲೋಕದಲ್ಲಿ ನಿರಂತರವಾಗಿ ಆಧುನಿಕ ಚಿಕಿತ್ಸಾವಿಧಾನಗಳನ್ನು ಅಳವಡಿಸಿಕೊಂಡು ಬಂದಿರುವ ಕೆಎಂಸಿ ಆಸ್ಪತ್ರೆಯು ಇದೀಗ ಮತ್ತೊಂದು ಆಧುನಿಕ ಚಿಕಿತ್ಸಾ ಸೌಲಭ್ಯವನ್ನು ಆರಂಭಿಸುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಕರಾವಳಿ ಕರ್ನಾಟದಲ್ಲಿ ಇದೇ ಮೊದಲ ಬಾರಿಗೆ ಮಂಗಳೂರಿನ ಅತ್ತಾವರದ ಕೆಎಂಸಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ೩ಡಿ ಹೈಡೋಸ್ ಪ್ರಮಾಣದ ಬ್ರಾಕಿಥೆರಪಿ ಚಿಕಿತ್ಸಾ ಸೌಲಭ್ಯ ಉದ್ಘಾಟನೆಗೊಂಡಿದೆ.

ನಿರಂತರವಾಗಿ ಸಂಶೋಧನೆಗಳಿಗೆ, ಆಧುನಿಕ ಚಿಕಿತ್ಸಾ ವಿಧಾನಗಳಿಗೆ ತೆರೆದುಕೊಳ್ಳುತ್ತಿರುವ ಕೆಎಂಸಿ ಆಸ್ಪತ್ರೆ ಸಮೂಹವು ಇದೀಗ ಮತ್ತೊಂದು ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯವನ್ನು ಅಳವಡಿಸಿಕೊಂಡಿದೆ. ಮಂಗಳೂರಿನ ಅತ್ತಾವರದಲ್ಲಿರುವ ಕೆಎಂಸಿ ಆಸ್ಪತ್ರೆಯಲ್ಲಿ ಇದೀಗ ಅತ್ಯಾಧುನಿಕ ಬ್ರಾಕಿಥೆರಪಿ ಚಿಕಿತ್ಸಾ ಸೌಲಭ್ಯವನ್ನು ಅಳವಡಿಸಿಕೊಳ್ಳಲಾಗಿದೆ. ಆಸ್ಪತ್ರೆಯ ರೇಡಿಯೋಥೆರಪಿ ಮತ್ತು ಆಂಕಾಲಜಿ ವಿಭಾಗವು ಇದೀಗ ವಿವೋ ಡೋಸಿಮೆಟ್ರಿ ತಂತ್ರಜ್ಞಾನದ ಮೂಲಕ ಅತ್ಯಾಧುನಿಕ ತ್ರಿಡಿ ಹೈಡೋಸ್ ಪ್ರಮಾಣದ ಬ್ರಾಕಿಥೆರಪಿ ಚಿಕಿತ್ಸೆಯ ವಿಧಾನವನ್ನು ಆರಂಭಿಸಿದೆ. ಈ ನೂತನ ಸೌಲಭ್ಯವನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್ ಅವರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು.

ಬಳಿಕ ಶಾಸಕರು ಬ್ರಾಕಿಥೆರಪಿ ಚಿಕಿತ್ಸಾ ವಿಧಾನವನ್ನು ವೀಕ್ಷಿಸಿ ಮಾಹಿತಿಯನ್ನು ಪಡೆದುಕೊಂಡರು. ಇದೇ ವೇಳೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, ದೇಶದಲ್ಲೇ ಅತ್ಯುತ್ತಮ ಆಸ್ಪತ್ರೆ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡ ಕೆಎಂಸಿ ಅಸ್ಪತ್ರೆಯಲ್ಲಿ ಇದೀಗ ಕ್ಯಾನ್ಸರ್ ರೋಗಿಗಳಿಗಾಗಿಯೇ ಹೊಸ ಚಿಕಿತ್ಸಾ ವಿಧಾನವನ್ನು ಆರಂಭಿಸಿದ್ದಾರೆ. ಮಂಗಳೂರಿನ ಜನತೆಗೆ ಲಭ್ಯವಾಗುವ ರೀತಿಯಲ್ಲಿ ಕೆಎಂಸಿ ಆಸ್ಪತ್ರೆಯು ನೂತನ ಸೌಲಭ್ಯವನ್ನು ಅಳವಡಿಸಿದ್ದು, ಬಹಳಷ್ಟು ಪ್ರಯೋಜನಕಾರಿ ಎಂದು ಹೇಳಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕೆಎಂಸಿ ಆಸ್ಪತ್ರೆಯ ಮೆಡಿಕಲ್ ಸೂಪರಿಟೆಂಡೆಂಟ್ ಡಾ. ಆನಂದ್ ವೇಣುಗೋಪಾಲ್, ಸಿಇಒ ಸಗೀರ್ ಸಿದ್ದಿಕ್ಕಿ, ಅಸೋಸಿಯೇಟ್ ಡೀನ್ ಡಾ. ನೂತನ್ ಕಾಮತ್, ಎಡಿಶನಲ್ ಡೀನ್ ಡಾ. ಅಲ್‌ಫ್ರೆಡ್ ಅಗಸ್ಟಿನ್ ಮತ್ತಿತರರು ಉಪಸ್ಥಿತರಿದ್ದರು.

ಬ್ರಾಕಿಥೆರಪಿ ವಿಧಾನವು ವಿಕಿರಣ ಚಿಕಿತ್ಸೆಯ ಒಂದು ರೂಪವಾಗಿದ್ದು, ಈ ವಿಧಾನದ ಮೂಲಕ ರೋಗಿಗೆ ನೀಡುವ ವಿಕಿರಣ ಪ್ರಮಾಣ ಮತ್ತು ಚಿಕಿತ್ಸೆಯನ್ನು ಅತ್ಯಂತ ನಿಖರವಾಗಿ ನೀಡಲು ಸಾಧ್ಯವಾಗುತ್ತದೆ. ಬ್ರಾಕಿಥೆರಪಿ ವಿಧಾನವನ್ನು ಟೆಲಿಥೆರಪಿ ಮತ್ತು ಅದರ ಜೊತೆಗೆ ಕೆಲವು ಕಾಯಿಲೆಗಳಿಗೆ ಬಳಸಲಾಗುತ್ತದೆ. ಹೆಚ್ಚಿನ ಪ್ರಮಾಣದ ವಿಕಿರಣವನ್ನು ದೇಹದ ಸಣ್ಣಸಣ್ಣ ಕ್ಯಾನ್ಸರ್ ಇರುವ ಭಾಗಗಳಿಗೆ ನೀಡಲಾಗುತ್ತದೆ. ಇದರಿಂದ ದೇಹದ ಇತರ ಸಾಮಾನ್ಯ ಭಾಗಗಳು ವಿಕಿರಣದಿಂದ ಪಾರಾಗುತ್ತವೆ. ಗರ್ಭಕೋಶ, ಗರ್ಭಕೋಶದ ಬಾಯಿ, ಅನ್ನನಾಳದ ಕ್ಯಾನ್ಸರ್, ತಲೆ ಮತ್ತು ಕುತ್ತಿಗೆಗೆ ಸಂಬಂಧಪಟ್ಟ ಕ್ಯಾನ್ಸರ್ ಮತ್ತು ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್ ಕಾಯಿಲೆಗಳಿಗೆ ಉಪಯೋಗಿಸುತ್ತಾರೆ. ಈ ಚಿಕಿತ್ಸೆಯನ್ನು ರೋಗಿಗೆ ಪ್ರಜ್ಞೆ ಇರುವಾಗಲೇ ನೀಡಲಾಗ್ತಾ ಇದ್ದು ನೋವುರಹಿತವಾಗಿದೆ.

Related posts

Leave a Reply

Your email address will not be published. Required fields are marked *