Header Ads
Header Ads
Breaking News

ಅತ್ತಾವರದ ಕೆಎಂಸಿ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ: ಸುದೀರ್ಘ ಸೇವೆ ಸಲ್ಲಿಸಿದ ಮೂವರು ವೈದ್ಯರಿಗೆ ಸನ್ಮಾನ

ಮಂಗಳೂರಿನ ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆಯನ್ನು ವಿನೂತನವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಆರೋಗ್ಯ ಸೇವೆಯಲ್ಲಿ ಸುದೀರ್ಘವಾಗಿ ತೊಡಗಿಕೊಂಡ ಮೂವರು ವೈದ್ಯರನ್ನು ಸನ್ಮಾನಿಸಲಾಯಿತು.

ಅತ್ತಾವರ ಕೆಎಂಸಿ ಆಸ್ಪತ್ರೆಯ ಸುಶ್ರುತಾ ಹಾಲ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಕೆಎಂಸಿ ಮಂಗಳೂರಿನ ವೈದ್ಯಕೀಯ ಅಧೀಕ್ಷಕರಾದ ಡಾ. ಜಾನ್ ಟಿ. ರಾಮಪುರಮ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಕೇಕ್ ಕತ್ತರಿಸಿ ವಿನೂತನವಾಗಿ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು. ಇದೇ ವೇಳೆ ಮಾತನಾಡಿದ ಡಾ. ಜಾನ್ .ಟಿ. ರಾಮಪುರಮ್ ಅವರು, ಇವತ್ತಿನ ದಿನ ವೈದ್ಯರಿಗೆ ವಿಶೇಷವಾದ ದಿನ ಎಂದ ಅವರು ವೈದ್ಯಕೀಯ ಸೇವೆಯಲ್ಲಿ ತೊಡಗಿಕೊಂಡ ವೈದ್ಯರಿಗೆ ಶುಭಾಶಯಕೋರಿದರು.

ಆನಂತರ ಕೆಎಂಸಿ ಆಸ್ಪತ್ರೆಯ ಎಡಿಶನಲ್ ಡೀನ್ ಡಾ. ಅಲ್‌ಫ್ರೆಡ್ ಅಗಸ್ಟಿನ್ ಅವರು, ಪ್ರತಿಯೊಬ್ಬರೂ ಕೂಡ ತಮ್ಮ ವೃತ್ತಿಯಲ್ಲಿನ ಒತ್ತಡಗಳನ್ನು ಬದಿಗಿಟ್ಟು ಖುಷಿಯಾಗಿರಿ ಎಂದು ಹೇಳಿದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಪಯ್ಯನೂರಿನ ಮಕ್ಕಳ ತಜ್ಞರಾದ ಡಾ. ಎಮ್. ಹರಿದಾಸ್, ಉಪ್ಪಿನಂಗಡಿಯ ಭಟ್ ನರ್ಸಿಂಗ್ ಹೋಮ್‌ನ ವೈದ್ಯರಾದ ಡಾ. ಕೆ.ಜಿ. ಭಟ್, ಮೂಡುಬಿದರೆ ಜಿ.ವಿ. ಪೈ ಮಮೋರಿಯಲ್ ಆಸ್ಪತ್ರೆಯ ವೈದ್ಯರಾದ ಡಾ. ಜಯಗೋಪಾಲ್ ತೋಳ್ಪಾಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿದ ವೈದ್ಯರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ಈ ಸಂದರ್ಭ ಕೆಎಂಸಿ ಆಸ್ಪತ್ರೆಯ ಮೆಡಿಕಲ್ ಸೂಪರಿಟೆಂಡೆಂಟ್ ಡಾ. ಆನಂದ್ ವೇಣುಗೋಪಾಲ್, ಸಿಇಒ ಸಗೀರ್ ಸಿದ್ದಿಕ್ಕಿ, ಅಸೋಸಿಯೇಟ್ ಡೀನ್ ಡಾ. ನೂತನ ಕಾಮತ್, ಎಡಿಶನಲ್ ಡೀನ್ ಡಾ. ಅಲ್‌ಫ್ರೆಡ್ ಅಗಸ್ಟಿನ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *