Header Ads
Breaking News

ಅತ್ತೂರು ಸಂತ ಲಾರೆನ್ಸ್ ಬಸಿಲಿಕದಲ್ಲಿ ವಾರ್ಷಿಕ ಮಹೋತ್ಸವ : ಇಂದು ಸಂಪನ್ನಗೊಳ್ಳಲಿರುವ 11 ದಿನಗಳ ವಾರ್ಷಿಕ ಮಹೋತ್ಸವ

ಅತ್ತೂರು ಸಂತ ಲಾರೆನ್ಸ್ ಬಸಿಲಿಕದ 11 ದಿನಗಳ ವಾರ್ಷಿಕ ಮಹೋತ್ಸವ ಇಂದು ಸಂಜೆ ಸಂಪನ್ನಗೊಳ್ಳಲಿದೆ. ಇಂದು ಬೆಳಿಗ್ಗೆ ಮಂಗಳೂರಿನ ಧರ್ಮಾಧ್ಯಕ್ಷರಾದ ರೇ. ಡಾ. ಪೀಟರ್ ಪೌಲ್ ಸಲ್ಡಾನ್ಹಾ ಬಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿ ರೇ. ಫಾದರ್ ಚೇತನ್ ಮಾಧ್ಯಮದೊಂದಿಗೆ ಮಾತನಾಡಿ, ಈ ಸಲ ಭಕ್ತಾದಿಗಳು ಸಂತೆಗಾಗಿ ಬಂದಿಲ್ಲ, ಸಂತರಿಗಾಗಿ ಬಂದಿದ್ದಾರೆ.

ಯಾವುದೇ ಅಡಚಣೆ ಇಲ್ಲದೆ ಭಕ್ತರು ಸಂತ ಲಾರೆನ್ಸ್ ಸರಿಗೆ ಭಕ್ತಿ ನಮನಗಳು ಸಲ್ಲಿಸಿದ್ದಾರೆ. ನಾವು ಉತ್ಸವವನ್ನು ಐದು ದಿನಗಳಿಂದ 11ದಿನಗಳವರೆಗೆ ವಿಸ್ತರಿಸಿದ್ದೇವೆ. ಈ ಸಲ ಭಕ್ತಾದಿಗಳು ಸಮಯಕ್ಕೆ ಸರಿಯಾಗಿ ಬಂದು ಬಲಿ ಪೂಜೆಗಳಿಗೆ ಪಾಲ್ಗೊಂಡಿದ್ದಾರೆ ಎಂದ್ರು.

Related posts

Leave a Reply

Your email address will not be published. Required fields are marked *