Header Ads
Breaking News

ಅದಮಾರು ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳ ಎಲ್‌ಕೆಜಿ, ಯುಕೆಜಿ ಬ್ಲಾಕ್‌ಗೆ ಶಿಲಾನ್ಯಾಸ

ಅದಮಾರು ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳ ಚೊಚ್ಚಲ ವಿದ್ಯಾಲಯದಲ್ಲಿ ಸುಮಾರು 2.5ಕೋಟಿ ರೂ. ವೆಚ್ಚದ ಮೂರು ಅಂತಸ್ತಿನ ಪೂರ್ಣಪ್ರಜ್ಞ ಎಲ್‌ಕೆಜಿ, ಯುಕೆಜಿ ಬ್ಲಾಕ್‌ಗೆ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಶಿಲಾನ್ಯಾಸವನ್ನು ನೆರವೇರಿಸಿದರು.

ಇದೇ ವೇಳೆ ಆಶೀರ್ವಚನ ನೀಡಿದ ಅವರು ದೈಹಿಕ, ಆಂತರಿಕ, ಬಾಹ್ಯವಾಗಿ ಉಭಯ ದೃಷ್ಟಿಯಿಂದ ಪಾವಿತ್ರ್ಯತೆ ಕೊಡುವುದು ತಿಳುವಳಿಕೆ. ಹಾಗಾಗಿ ಜ್ಞಾನಿಗಳು ಎಂದಿದ್ದರೂ ಪವಿತ್ರರು. ಮಕ್ಕಳಿಗೆ ಎಳವೆಯಲ್ಲಿಯೇ ಸಂಸ್ಕಾರ ನೀಡಬೇಕು. ದೈಹಿಕ, ಆಂತರಿಕ, ಮಾನಸಿಕ ಆರೋಗ್ಯ ಸಹಿತ ಸರ್ವತೋಮುಖ ಅಭಿವೃದ್ಧಿ ಸಿಗುವುದನ್ನೇ ಶಾಲೆ ಎನ್ನುತ್ತಾರೆ ಎಂದರು.
ಒಳಾಂಗಣ ಕ್ರೀಡಾಂಗಣ, ಎನ್‌ಎಸ್‌ಎಸ್ ಕೊಠಡಿ, ವಿದ್ಯಾರ್ಥಿಗಳಿಗೆ ಅನುಕೂಲವಾಗಬಲ್ಲ ಝೆರಾಕ್ಸ್ ವ್ಯವಸ್ಥೆ, ಗ್ರಂಥಾಲಯ ಸೌಲಭ್ಯಗಳ ಉದ್ಘಾಟನೆ ಮತ್ತು ಶ್ರೀಪಾದರು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೀಡುತ್ತಿರುವ ನೂತನ ಬಸ್ಸೊಂದರ ಹಸ್ತಾಂತರವೂ ಈ ಸಂದರ್ಭದಲ್ಲಿ ನಡೆಯಿತು.
ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ಗೌರವ ಕಾರ್ಯದರ್ಶಿ ನ್ಯಾಯವಾದಿ ಪ್ರದೀಪ್ ಕುಮಾರ್, ಅದಮಾರು ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಂ.ರಾಮಕೃಷ್ಣ ಪೈ ಆಂಗ್ಲ ವಿಭಾಗ ಮುಖ್ಯಸ್ಥೆ ಲಕ್ಷ್ಮೀ ಉಡುಪ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *