Header Ads
Breaking News

ಅಧಾರ್ ಕಾರ್ಡ್ ಅದಾಲತ್‍ : ಒಂದೇ ದಿನದಲ್ಲಿ ಸಾವಿರಕ್ಕೂ ಅಧಿಕ ಟೋಕನ್ ವಿತರಣೆ

ಕಾರ್ಕಳ : ಗಾಂಧಿ ಜಯಂತಿ ಪ್ರಯುಕ್ತ ಅಂಚೆ ಇಲಾಖೆಯ ಸಿಬ್ಬಂದಿಯು ವಿದ್ಯಾರ್ಥಿ, ಹಿರಿಯನಾಗರಿಕರ ಹಿತಾಸಕ್ತಿಯಲ್ಲಿ ಅದಾರ್ ಕಾರ್ಡ್ ಅದಾಲತ್‍ನಲ್ಲಿ ಬಾರಿ ಜನ ಸಾಗರವೇ ಹರಿದು ಬಂದಿತ್ತು ಮಾತ್ರವಲ್ಲದೆ ಒಂದೇ ದಿನದಲ್ಲಿ 1000ಕ್ಕೂ ಅಧಿಕ ಟೋಕನ್ ವಿತರಣೆಯಾಗಿದೆ. ಕಾರ್ಕಳ ಗಾಂಧಿ ಮೈದಾನದ ಅಂಚೆ ಕಚೇರಿಯಲ್ಲಿ ಗಾಂಧಿಜಯಂತಿ ಪ್ರಯಕ್ತ ಅದಾರ್ ಕಾರ್ಡ್ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಸರಕಾರದ ಯಾವುದೇ ಸವಲತ್ತು ಪಡೆಯುವಲ್ಲಿ ಅಧಾರ್ ಕಾರ್ಡ್‍ನ ಅಗತ್ಯವಿದ್ದು ಬಹುತೇಕ ಮಂದಿ ಈಗಾಗಲೇ ಅದಾರ್ ಕಾರ್ಡ್ ಲಿಂಕ್ ಮಾಡದೇ ಸರಕಾರದ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಸಣ್ಣ ಸಣ್ಣ ಮಕ್ಕಳು, ಶಾಲಾ ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಅಧಾರ್ ಕಾರ್ಡ್ ತಿದ್ದಪಡಿ ಹಾಗೂ ಹೊಸ ಅದಾರ್ ಕಾರ್ಡ್ ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆದಾಟ ನಡೆಸುತ್ತಿದ್ದಾರೆ. ಶಾಲಾ ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಕೂಲಿ ಕಾರ್ಮಿಕರಿಗೆ, ಹಿರಿಯ ನಾಗರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರಕಾರಿ ರಜೆಯ ಸಂದರ್ಭದಲ್ಲಿ ನೋಡಿ ಇಂದು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಂಚೆ ಇಲಾಖೆಯ ಸಿಬ್ಬಂದಿ ಆಶಾ ಪೂಜಾರ್ತಿ ಹೇಳಿದ್ದಾರೆ.

Related posts

Leave a Reply

Your email address will not be published. Required fields are marked *