Header Ads
Breaking News

ಅನಾವಶ್ಯಕ ರಸ್ತೆಗಿಳಿದವರಿಗೆ ಬಿತ್ತು ಲಾಠಿ ರುಚಿ : ಮಾತು ಕೇಳದವರಿಗೆ ದಂಡಂ ದಶಗುಣಂ

ಕುಂದಾಪುರ: ಕಫ್ರ್ಯೂ ಎರಡನೇ ದಿನವಾದ ಬುಧವಾರ ಅನಾವಶ್ಯಕವಾಗಿ ರಸ್ತೆಗಿಳಿದ ವಾಹನ ಸವಾರರಿಗೆ ಕುಂದಾಪುರ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ರಾಜ್ಯ ಕಫ್ರ್ಯೂ ಮೊದಲ ದಿನವಾದ ಮಂಗಳವಾರ ಅನಾವಶ್ಯಕವಾಗಿ ತಿರುಗಾಡುತ್ತಿದ್ದವರಿಗೆ ಪೊಲೀಸರು ಎಚ್ಚರಿಕೆ ನೀಡಿ ಮನೆ ಕಳುಹಿಸಿದ್ದರು. ಆದರೆ ಎರಡನೇ ಮುಂದುವರಿದಿದ್ದರಿಂದ ಪೊಲೀಸರು ಲಾಠಿ ಏಟು ನೀಡಿದ್ದಾರೆ. 

ಹಾಲು, ಔಷಧಿ, ತರಕಾರಿ ದಿನಸಿ ಸೇರಿದಂತೆ ದಿನಬಳಕೆ ವಸ್ತು ಖರೀದಿಸಲು ವಿನಾಯಿತಿ ನೀಡಲಾಗಿತ್ತು. ಆದರೆ ಸರ್ಕಾರ ನೀಡಿರುವ ಈ ವಿನಾಯಿತಿಯನ್ನು ಕೆಲವರು ದುರ್ಬಳಕೆ ಮಾಡಿಕೊಂಡಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಎಎಸ್ಪಿ ಹರಿರಾಮ್ ಶಂಕರ್ ಲಾಠಿ ಚಾರ್ಜ್‍ಗೆ ಆದೇಶ ನೀಡಿದ ಬೆನ್ನಲ್ಲೇ ಕುಂದಾಪುರ ಸಂಚಾರಿ ಪೊಲೀಸರು ಹಾಗೂ ನಗರ ಠಾಣೆಯ ಪೊಲೀಸರ ತಂಡ ಸವಾರರಿಗೆ ಲಾಠಿ ಏಟು ಕೊಟ್ಟು ಮನೆಗೆ ಕಳುಹಿಸಿದ್ದಾರೆ.

ಸ್ವತಃ ಲಾಠಿ ಹಿಡಿದು ಫೀಲ್ಡಿಗಿಳಿದ ಎಎಸ್‍ಪಿ ಹರಿರಾಮ್ ಶಂಕರ್ ಅವರು ಕುಂದಾಪುರದ ಮೀನು ಮಾರ್ಕೇಟ್ ರಸ್ತೆಯಲ್ಲಿದ್ದ ಸಾರ್ವಜನಿಕರನ್ನು ಓಡಿಸಿದರು. ಶಾಸ್ತ್ರೀ ವೃತ್ತದಲ್ಲಿ ಕುಂದಾಪುರ ನಗರ ಠಾಣೆಯ ಪಿಎಸ್‍ಐ ಹರೀಶ್ ಆರ್ ನಾಯ್ಕ್, ಸಂಚಾರಿ ಠಾಣೆಯ ಪಿಎಸ್‍ಐ ಪುಷ್ಪಾ ನೇತೃತ್ವದ ಪೊಲೀಸರ ತಂಡ ಸವಾರರಿಗೆ ಲಾಠಿಯ ರುಚಿ ತೋರಿಸುತ್ತಿದೆ. ಇನ್ನು ಕರ್ತವ್ಯದಲ್ಲಿದ್ದ ಪೊಲೀಸರು, ಪತ್ರಕರ್ತರು, ವೈದ್ಯಕೀಯ ಸಿಬ್ಬಂದಿ, ಮೆಡಿಕಲ್ ಸಿಬ್ಬಂದಿಗಳು ಸೇರಿದಂತೆ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಎಲ್ಲಾ ಕಾರ್ಯಕರ್ತರಿಗೂ ಪಾರಿಜಾತ ಹೊಟೇಲ್‍ನಿಂ ಬಿಸ್ಕೆಟ್, ನೀರು, ಹಣ್ಣು ಹಾಗೂ ಊಟದ ವ್ಯವಸ್ಥೆ ಮಾಡಿದ್ದು, ಸ್ವಯಂಸೇವಕರಾಗಿ ಜೆಸಿಐ ಕುಂದಾಪುರ ಸಿಟಿ ಕಾರ್ಯಕರ್ತರು ಇವೆಲ್ಲವನ್ನೂ ಹಂಚುವ ವ್ಯವಸ್ಥೆ ಮಾಡಿದರು. ಇದು ಕುಂದಾಪುರದಿಂದ ಬೈಂದೂರಿನ ತನಕವೂ ಈ ವ್ಯವಸ್ಥೆ ಮಾಡಲಾಗಿದೆ.

Related posts

Leave a Reply

Your email address will not be published. Required fields are marked *