Header Ads
Breaking News

ಅನ್ನದಾನ ಬಳಿಕ ಯುವಕರಿಂದ ರಕ್ತದಾನ : ಉಡುಪಿಯ ಯುವಕರ ಸೇವಾಕಾರ್ಯಕ್ಕೆ ಮೆಚ್ಚುಗೆ

ಅನ್ನದಾನ ಮುಗಿದ ನಂತರ ಇದೀಗ ರಕ್ತದಾನದ ಸರದಿ. ಲಾಕ್ ಡೌನ್ ನಿಂದ ನೊಂದ ಸಾವಿರಾರು ಜೀವಗಳಿಗೆ ಅನ್ನದಾನ ಮಾಡಿದ್ದ ಯುವಕರು ರಕ್ತದಾನ ಮಾಡುವ ಮೂಲಕ ಜನಸೇವೆಯಲ್ಲಿ ತೊಡಗಿದೆ. ಪವಿತ್ರ ರಂಝಾನ್ ತಿಂಗಳ ಉಪವಾಸದ ನಡುವೆಯೂ 36 ಮಂದಿ ಮುಸ್ಲಿಂ ಯುವಕರ ತಂಡ ರಕ್ತದಾನ ಮಾಡುವ ಮೂಲಕ ಮಾನವೀಯ ಕಾರ್ಯ ಮಾಡಿದೆ.

ಲಾಕ್ ಡೌನ್ ಸಮಯದಲ್ಲಿ ನಿರಂತರ 40 ದಿನಗಳ ಕಾಲ ಸುಮಾರು 63,000 ಕ್ಕೂ ಹೆಚ್ಚಿನ ಜನರಿಗೆ ಉಚಿತ ಊಟ ಹಂಚಿದ್ದನ್ನು ಇಲ್ಲಿ ಸ್ಮರಿಸಬಹುದು.ಈ ಸೇವಾ ಕಾರ್ಯದ ನೇತೃತ್ವ ವಹಿಸಿದ್ದು ಎ.ಕೆ.ಸ್ಪೋಟ್ರ್ಸ್ ನ ಮಾಲಕರಾದ ಮಹಮ್ಮದ್ ಶೀಷ್ . ನಿನ್ನೆ ಮಣಿಪಾಲದ ಕೆಎಂಸಿ ಯಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಜನ ಜಂಗುಳಿ ತಪ್ಪಿಸಲು ಹಾಗೂ ಉಪವಾಸ ನಿರತ ಮುಸ್ಲಿಂ ಬಾಂಧವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಜೆ 4 ಗಂಟೆಗೆ ಹಾಗೂ ರಾತ್ರಿ 8 ಗಂಟೆಗೆ ಎರಡು ತಂಡಗಳನ್ನು ರಚಿಸಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ತೆರಳಿ ಸುಮಾರು 68 ಜನರು ರಕ್ತದಾನ ಮಾಡಿದರು. ಗಮನಾರ್ಹ ಸಂಗತಿ ಎಂದರೆ ಲಾಕ್ ಡೌನ್ ಸಂದರ್ಭ ಉಡುಪಿ ಮತ್ತು ಮಣಿಪಾಲದಲ್ಲಿ ತೀವ್ರ ರಕ್ತದ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಈ ಸಮಾಜ ಸೇವಕರ ತಂಡ ರಕ್ತದಾನ ಶಿಬಿರ ಏರ್ಪಡು ಮಾಡಿತ್ತು. ಈ ಯುವಕರ ಸೇವಾಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Related posts

Leave a Reply

Your email address will not be published. Required fields are marked *