Header Ads
Breaking News

ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ಕಳ್ಳ..! : ಸಿಸಿ ಕ್ಯಾಮರಾ ಚೆಕ್ ಮಾಡಿದಾಗ ಸಿಕ್ಕಿ ಬಿದ್ದ ಖದೀಮ

ಕಡಬದ ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಕೆಲಸಗಾರನಿಂದಲೇ ಕಳ್ಳತನ ನಡೆದ ಘಟನೆ ನಡೆದಿದೆ. ಮಾಲಿಕನಿಲ್ಲದೆ ವೇಳೆ ಕೆಲಸಗಾರ ಕ್ಯಾಶ್ ಕೌಂಟರ್‍ನಿಂದಲೇ ಹಣ ಎಗರಿಸಿದ್ದಾನೆ. ಕ್ಯಾಶ್ ಕೌಂಟರ್‍ನಲ್ಲಿ ಹಣ ಮಿಸ್ ಆಗ್ತಾ ಇದ್ದ ಬಗ್ಗೆ ಅನುಮಾನಗೊಂಡಿದ್ದ ಮಾಲೀಕ ಅನುಮಾನಗೊಂಡು ಸಿಸಿ ಕ್ಯಾಮರಾ ಚೆಕ್ ಮಾಡಿದಾಗ ಖತರ್ನಾಕ್ ಕಳ್ಳ ಸಿಕ್ಕಿಬಿದ್ದಿದ್ದಾನೆ. ಕಳೆದ 9ತಿಂಗಳಿನಿಂದ ಕೆಲಸಕ್ಕಿದ್ದ ಹೈಫೈ ಚಂದ್ರ, ಖತರ್ನಾಕ್ ಕಳ್ಳ ಅಂತ ತಿಳಿದು ಬಂದಿದೆ. ಕಳೆದ 15 ದಿನಗಳಲ್ಲಿ ಮೂವತ್ತು ಸಾವಿರಕ್ಕೂ ಹೆಚ್ಚು ಹಣ ಎಗರಿಸಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಇದೀಗ ಅಂಗಡಿಯ ಮಾಲೀಕ ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Related posts

Leave a Reply

Your email address will not be published. Required fields are marked *