Header Ads
Breaking News

ಅಪಘಾತಕ್ಕೆ ಕಾರಣವಾಗುತ್ತಿದೆ ಕಾಡು ಪೊದೆಗಳಿಂದ ತುಂಬಿಕೊಂಡಿರುವ ರಸ್ತೆ

ಮಂಜೇಶ್ವರ ಗ್ರಾಮ ಪಂಚಾಯತ್‍ನ ಆರನೇ ವಾರ್ಡು ಗುಡ್ದೆ ಶಾಲೆಯಿಂದ ಚೌಕಿ ತನಕ ಇರುವ ರಸ್ತೆಯ ಇಕ್ಕಡೆಗಳಲ್ಲಿ ಕಾಡು ಪೊದರುಗಳು ತುಂಬಿಕೊಂಡಿದ್ದು, ಇದು ಅಪಘಾತಕ್ಕೆ ಕಾರಣವಾಗುತ್ತಿದೆ. ವಾಹನಗಳಿಗೆ ಮಾತ್ರವಲ್ಲದೆ ಕಾಲ್ನಡಿಗೆ ಯಾತ್ರಿಕರಿಗೂ ಈ ರಸ್ತೆ ಬದಿಯಿಂದ ನಡೆಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ತುಂಬಿ ಕೊಂಡಿರುವ ಕಾಡು ಪೊದರುಗಳಿಂದಾಗಿ ಬೀದಿ ನಾಯಿಗಳು ಕೂಡಾ ಪಕ್ಕನೆ ರಸ್ತೆಗೆ ಬರುತ್ತಿರುವುದು ಅಪಘಾತಕ್ಕೆ ಕಾರಣವಾಗುತ್ತಿದೆ. ಇಲ್ಲಿರುವ ಸರಕಾರಿ ಶಾಲೆಗಳ ಹಾಗೂ ಅಂಗನವಾಡಿಗಳ ಸೂಚನಾ ಫಲಕಗಳು ಕೂಡಾ ಕಾಡು ಪೊದರುಗಳಿಂದ ಆವರಿಸಿಕೊಂಡಿದೆ. ರಸ್ತೆ ಬದಿಗಳಲ್ಲಿ ಬೆಳೆದು ನಿಂತಿರುವ ಕಾಡು ಪೊದರುಗಳನ್ನು ತೆರವುಗೊಳಿಸುವಂತೆ ಸ್ಥಳೀಯ ವಾರ್ಡು ಸದಸ್ಯೆಯಲ್ಲಿ ಊರವರು ಹಲವು ಸಲ ವಿನಂತಿಸಿಕೊಂಡರೂ ಸದಸ್ಯೆ ಇತ್ತ ಕಡೆ ತುರುಗಿಯೂ ನೋಡಲಿಲ್ಲವೆಂಬ ಅರೋಪ ಕೇಳಿ ಬಂದಿದೆ.

Related posts

Leave a Reply

Your email address will not be published. Required fields are marked *