Header Ads
Breaking News

ಅಪ್ರಾಪ್ತ ಬಾಲಕನಿಗೆ ಲೈಂಗಿಕ ದೌರ್ಜನ್ಯ : ಉಸ್ತಾದ್ ವಿರುದ್ದ ದೂರು ಆರೋಪಿ ಬಂಧನ

ಪುತ್ತೂರು : ಮದ್ರಸ ಶಾಲೆಯೊಂದರ ಅಪ್ರಾಪ್ತ ವಿದ್ಯಾರ್ಥಿಯೊಬ್ಬನಿಗೆ ಅದೇ ಮದ್ರಸದ ಗುರುಗಳಾದ ಉಸ್ತಾದ್ ಒಬ್ಬರು ಅಸಹಜ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ಪುತ್ತೂರು ನಗರ ಠಾಣೆಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪುತ್ತೂರು ಮಹಿಳಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಪುರುಷರಕಟ್ಟೆಯಲ್ಲಿರುವ ಹಿಮಾಯುತುಲ್ ಇಸ್ಲಾಂ ಮದರಸದಲ್ಲಿ ಉಸ್ತಾದರಾಗಿರುವ ಅನ್ವರ್ ಮೌಲವಿ ಎಂಬವರು ವಿದ್ಯಾರ್ಥಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ತಡವಾಗಿ ಮನೆಯವರ ಗಮನಕ್ಕೆ ಬಂದಿದ್ದು, ಈ ಹಿನ್ನಲೆಯಲ್ಲಿ ನೊಂದ ವಿದ್ಯಾರ್ಥಿ ತಡವಾಗಿ ದೂರು ನೀಡಿದ್ದಾನೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Related posts

Leave a Reply

Your email address will not be published. Required fields are marked *