Header Ads
Header Ads
Breaking News

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ: ದುಬೈಯಿಂದ ಊರಿಗೆ ಬರುವ ವೇಳೆ ಪೊಲೀಸರ ಸೆರೆ

ಮಂಜೇಶ್ವರ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳಕ್ಕೆತ್ನಿಸಿದ ಪ್ರಕರಣದ ಆರೋಪಿಯನ್ನು ದುಬೈಯಿಂದ ಊರಿಗೆ ಬರುವ ವೇಳೆ ಮಂಗಳೂರು ವಿಮಾನ ನಿಲ್ದಾಣದಿಂದ ಅಧಿಕಾರಿಗಳು ವಶಕ್ಕೆ ತೆಗೆದು ಮಂಜೇಶ್ವರ ಪೊಲೀಸರರಿಗೆ ಹಸ್ತಾಂತರಿಸಿದ್ದಾರೆ.ಮಂಜೇಶ್ವರ ಕೊಪ್ಪಳ ಜಾರ ಹೌಸಿನ ಅಲ್ ಫಾಝ್ (22) ಬಂಧಿತ ಆರೋಪಿ. ಈತನ ವಿರುದ್ದ ಮಂಜೇಶ್ವರ ಪೊಲೀಸರು ಲುಕ್ ಔಟ್ ನೋಟೀಸ್ ಬಿಡುಗಡೆಗೊಳಿಸಿದ್ದರು. ಸೆಪ್ಟಂಬರ್ 26 ರಂದು ಮಂಜೇಶ್ವರ ವಿದ್ಯುತ್ ಸೆಕ್ಷನ್ ಕಚೇರಿಯ ಸಮೀಪದ ರಸ್ತೆಯಲ್ಲಿ ಬಂಧಿತ ಆರೋಪಿ ತನ್ನ ಗೆಳೆಯನೊಂದಿಗೆ ಅಪ್ರಪ್ತ ಬಾಲಕಿಯನ್ನು ಕಾರಿನಲ್ಲಿ ಕೂಡಿ ಹಾಕಿ ಕಿರುಕುಳಕ್ಕೆತ್ನಿಸಿರುವುದಾಗಿ ಆರೋಪದಂತೆ ಮಂಜೇಶ್ವರ ಪೊಲೀಸರು ಪೊಕ್ಸೋ ಕಾಯ್ದೆಯಂತೆ ಪ್ರಕರಣ ದಾಖಲಿಸಿದ್ದರು.ಈತನಿಗೆ ಸಹಾಯ ಮಾಡಿದನೆಂಬ ದೂರಿನಲ್ಲಿ ಹೊಸಬೆಟ್ಟು ನಿವಾಸಿ ಮೊಹಮ್ಮದ್ ರಾಫಿ ಅಲಿಯಾಸ್ ಆಫಿ ಎಂಬತನ ವಿರುದ್ದವೂ ಪ್ರಕರಣ ದಾಖಲಿಸಿದ  ಆತನಿಗಾಗಿ ಶೋಧ ನಡೆಸುತಿದ್ದಾರೆ,

 

Related posts

Leave a Reply