Header Ads
Header Ads
Breaking News

ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ನಡೆದ ಅತ್ಯಾಚಾರ ಪ್ರಕರಣ : ಕಾಂಗ್ರೆಸ್ ಸಮಿತಿಯಿಂದ ವತಿಯಿಂದ ವಿನೂತನ ಪ್ರತಿಭಟನೆ

ಮಂಜೇಶ್ವರ: ಕೇರಳದಲ್ಲಿ ಇಬ್ಬರು ಅಪ್ರಾಪ್ತ ವಯಸ್ಕ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತರಿಗೆ ನ್ಯಾಯ ದೊರಕಿಸಬೇಕು. ಇಲ್ಲವಾದಲ್ಲಿ ಕೇರಳ ಮುಖ್ಯಮಂತ್ರಿ ರಾಜೀನಾಮೆಯನ್ನು ನೀಡಬೇಕೆಂದು ಆಗ್ರಹಿಸಿ ಮಂಜೇಶ್ವರ ಮಾಂಙಲ ಕಾಂಗ್ರೆಸ್ ಸಮಿತಿ ಮೇಣದ ಬತ್ತಿಯನ್ನು ಹೊತ್ತಿಸಿ ಪ್ರತಿಭಟನೆಯನ್ನು ನಡೆಸಿತು.

ಪ್ರಕರಣದಲ್ಲಿ ಪೊಲೀಸರು ನಡೆಸಿದ್ದ ಆರಂಭಿಕ ತನಿಖೆಯಲ್ಲಿ ಹಲವಾರು ಲೋಪಗಳಿದ್ದವು ಆದರೆ ಈಗ ಸರಕಾರ ಹಾಗು ಪೊಲೀಸರು ಜೊತೆಯಾಗಿ ಸೇರಿಕೊಂಡು ಪ್ರಕರಣವನ್ನು ಬುಡಮೇಲು ಗೊಳಿಸಲು ಪ್ರಯತ್ನಿಸುತ್ತಿರುವುದಾಗಿ ಪ್ರತಿಭಟನಾ ನಿರತರು ಆರೋಪಿಸಿದರು. ಮಂಜೇಶ್ವರ ಮಂಡಲ ಕಾಂಗ್ರೆಸ್ ಅಧ್ಯಕ್ಷ ಸುಕುಮಾರ ಶೆಟ್ಟಿ, ನೇತಾರರಾದ ಇಬ್ರಾಹಿಂ ಐಆರ್ ಡಿಪಿ, ಇರ್ಷಾದ್ ಮಂಜೇಶ್ವರ ಮೊದಲಾದವರು ಹಾಜರಿದ್ದರು.

Related posts

Leave a Reply

Your email address will not be published. Required fields are marked *