Header Ads
Header Ads
Breaking News

ಅಮಿತ್ ಷಾ ಬಂದಿರೊದು ಸಿದ್ದರಾಮಯ್ಯ ಕೆಳಗೆ ಇಳಿಸೋಕೆ ೧೮ ರಾಜ್ಯಗಳಿಗೆ ಷಾ ಭೇಟಿ ನೀಡಿ, ಸಿ‌ಎಂಗಳನ್ನ ಕೆಳಗೆ ಇಳಿಸಿದ್ದಾರೆ ಮಂಗಳೂರಿನಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ

ಆಂಕರ್ : ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ರಾಜ್ಯಕ್ಕೆ ಆಗಮಿಸುತ್ತಿರುವುದರಿಂದ ಸಿ‌ಎಂ ಸಿದ್ದರಾಮಯ್ಯ ಸ್ಥಾನಕ್ಕೆ ಕುತ್ತು ಬರಲಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಹೇಳಿದ್ರು. ಈ ಕುರಿತು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವ್ರು, ಅಮಿತ್ ಷಾ ಬಂದಿರೊದು ಸಿದ್ದರಾಮಯ್ಯ ಕೆಳಗೆ ಇಳಿಸೋಕೆ, ಈಗಾಗಲೇ ೧೮ ರಾಜ್ಯಗಳಿಗೆ ಈಗಾಗಲೇ ಷಾ ಭೇಟಿ ನೀಡಿದ್ದಾರೆ. ಎಲ್ಲಾ ಕಡೆ ಮುಖ್ಯಮಂತ್ರಿಗಳನ್ನ ಕೆಳಗೆ ಇಳಿಸಿದ್ದಾರೆ. ಈ ಕೂಡಲೇ ಸಿದ್ದರಾಮಯ್ಯ ಸಿ‌ಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದರು. ಡಿಕೆಶಿ ಅಥವಾ ದಲಿತ ರಾಜ್ಯದ ಮುಖ್ಯಮಂತ್ರಿ ಮಾಡಬೇಕೆಂದರು ಎಂದ್ರು.
ಇನ್ನೂ ರಾಜ್ಯದಲ್ಲೇ ಭೀಕರ ಬರಗಾಲವಿದೆ. ಸಿ‌ಎಂ ಸಿದ್ದರಾಮಯ್ಯ ಬರಪೀಡಿತ ಪ್ರದೇಶಗಳಿಗೆ ಭೇಟಿ ನಿಡೋಕೆ ಸಮಯವಿಲ್ಲ. ಹಗಲಿನಲ್ಲಿ ನಿಮ್ಮಗೆ ಸಮಯ ಇರಲ್ಲ, ರಾತ್ರಿ ನಿಮಗೆ ಸಮಯ ಇರಲ್ಲ. ರಾತ್ರಿ ಇಸ್ಪೀಟ್ ಆಡ್ತೀರಾ ಎಂದು ಸಿ‌ಎಂ ಸಿದ್ದರಾಮಯ್ಯನವರನ್ನು ಪೂಜಾರಿ ತರಾಟೆಗೆ ತೆಗೆದುಕೊಂಡರು.

Related posts

Leave a Reply