Header Ads
Header Ads
Breaking News

ಅಮೃತ ವಿದ್ಯಾಲಯಂನಲ್ಲಿ ವಿಶಿಷ್ಟವಾಗಿ ಗುರುಪೂರ್ಣಿಮೆ ಆಚರಣೆ : ಹೆತ್ತವರ ಪಾದಪೂಜೆಯನ್ನು ನೆರವೇರಿಸಿದ ವಿದ್ಯಾರ್ಥಿಗಳು

ಮಂಗಳೂರಿನ ಪ್ರಸಿದ್ಧ ಶಿಕ್ಷಣ ಪೈಕಿಗಳಲ್ಲಿ ಒಂದಾಗಿರುವ ಅಮೃತ ವಿದ್ಯಾಲಯಂನಲ್ಲಿ ಗುರು ಪೂರ್ಣಿಮೆಯನ್ನು ವಿಶಿಷ್ಠ ರೀತಿಯಲ್ಲಿ ಆಚರಿಸಲಾಯ್ತು. ವಿದ್ಯಾರ್ಥಿಗಳಿಂದ ಭಜನೆ, ಭರತನಾಟ್ಯ, ನೃತ್ಯ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು.

ಗುರುವಿಗೆ ವಿಶೇಷ ಸ್ಥಾನಮಾನ ನೀಡಿರುವ ಭಾರತದಲ್ಲಿ ಆಷಾಢ ಶುದ್ಧ ಹುಣ್ಣಿಮೆಯ ದಿನವಾದ ಗುರುಪೂರ್ಣಿಮೆಯನ್ನ ಅತ್ಯಂತ ಶ್ರದ್ಧಾಭಕ್ತಿಪೂರ್ವಕವಾಗಿ ಆಚರಣೆ ಮಾಡಲಾಗುತ್ತದೆ. ದೇಶದೆಲ್ಲೆಡೆ ಜಾತಿ, ಮತ, ಪಂಥಗಳ ಭೇದವಿಲ್ಲದೆ ಸಂಭ್ರಮಾಚರಣೆಯನ್ನು ಕಾಣುತ್ತೇವೆ. ಅಂತೆಯೇ ಮಂಗಳೂರಿನ ಬೋಳೂರಿನಲ್ಲಿರುವ ಅಮೃತ ವಿದ್ಯಾಲಯಂನಲ್ಲಿ ಕೂಡ ಗುರುಪೂರ್ಣಿಮೆಯನ್ನು ಆಚರಿಸಲಾಯಿತು. ಸಂಸ್ಥೆಯ ಅಮೃತೇಶ್ವರಿ ಹಾಲ್‌ನಲ್ಲಿ ನಡೆದ ಗುರುಪೂರ್ಣಿಮೆಯನ್ನು ವಿಶಿಷ್ಠ ರೀತಿಯಲ್ಲಿ ಆಚರಿಸಲಾಯ್ತು. ಕಾರ್ಯಕ್ರಮದಲ್ಲಿ ಅಮೃತಾ ವಿದ್ಯಾಲಯಂನ ಪ್ರಾಂಶುಪಾಲರಾದ ರಾಮಚಂದ್ರ ಭಟ್ ಅವರು ಸ್ವಾಗತಿಸಿದ್ರು.

 ಈ ವೇಳೆ ನಡೆದ ಕಾರ್ಯಕ್ರಮವನ್ನು ಮಂಗಳೂರು ಅಮೃತಾ ವಿದ್ಯಾಲಯಂನ ಸಂಚಾಲಕರಾದ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯಜೀ ಅವರು ಉದ್ಘಾಟಿಸಿದರು. ತದ ಬಳಿಕ ವಿದ್ಯಾರ್ಥಿಗಳಿಂದ ಭಜನೆ, ಭರತನಾಟ್ಯ, ನೃತ್ಯ ಜೊತೆಗೆ ನಾಟಕ ಪ್ರದರ್ಶನ ನಡೆಯಿತು. ತಂದೆತಾಯಿ ತ್ಯಾಗದ ಕುರಿತು ಮನೋಜ್ಞವಾಗಿ ಮೂಡಿದ ಬಂದ ಕಿರುನಾಟಕ ಎಲ್ಲಾರ ಗಮನ ಸೆಳೆಯಿತು. ಇನ್ನು ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯಜೀ ಅವರಿಂದ ಉಪನ್ಯಾಸ ಹಾಗೂ ಭಜನೆ ಕಾರ್ಯಕ್ರಮವೂ ನಡೆಯಿತು.

ಇನ್ನು ಗುರು ಪೂರ್ಣಿಮಾ ಅಂಗವಾಗಿ ಶಾಲಾ ಮಕ್ಕಳಿಂದ ಹೆತ್ತವರ ಪಾದಪೂಜೆ ನೆರವೇರಿತು. ತಮ್ಮ ತಮ್ಮ ಹೆತ್ತವರಿಗೆ ಮಕ್ಕಳು ಆರತಿ ಬೆಳಗಿ, ಹೂವಿನ ಹಾರಹಾಕಿ, ನಮಸ್ಕರಿಸಿ, ಸಿಹಿ ತಿನ್ನಿಸುವ ಮೂಲಕ ಹೆತ್ತವರ ಪಾದಪೂಜೆ ನೆರವೇರಿಸಿ ಅವರಿಂದ ಆರ್ಶೀವಾದವನ್ನು ಪಡೆದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ನಿವೃತ್ತ ಅಧಿಕಾರಿ ಪ್ರಭಾಕರ್ ಶರ್ಮಾ ಅವರು, ಮನೆಯಿಂದಲೇ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಬೇಕು. ಆ ಮೂಲಕ ಉತ್ತಮ ವಿದ್ಯಾರ್ಥಿಗಳಾಗಿ ರೂಪುಗೊಳ್ಳಬೇಕೆಂದರು. 

ಕಾರ್ಯಕಮವನ್ನು ಉಪಪ್ರಾಂಶುಪಾಲರಾದ ಅನುಪಮಾ ರಾವ್ ವಂದಿಸಿದರು. ಒಟ್ಟಿನಲ್ಲಿ ಗುರುಪೂರ್ಣಿಮಾ ದಿನವನ್ನು ವಿಶಿಷ್ಠ ರೀತಿಯಲ್ಲಿ ಆಚರಣೆ ಮಾಡಿದ ಅಮೃತಾ ವಿದ್ಯಾಲಯಂ ಬಗ್ಗೆ ಮಕ್ಕಳ ಹೆತ್ತವರು ಕೂಡ ಸಂತಸ ವ್ಯಕ್ತಪಡಿಸಿದರು.

Related posts

Leave a Reply

Your email address will not be published. Required fields are marked *