Header Ads
Header Ads
Breaking News

ತಿರುಪತಿಯ ತಿರುಮಲದಿಂದ ಹಿಂಬಾಲಿಸಿಕೊಂಡು ಅಯ್ಯಪ್ಪ ಮಾಲಾಧಾರಿಗಳೊಂದಿಗೆ ಮೂಡುಬಿದಿರೆಗೆ ಆಗಮಿಸಿದ ಶ್ವಾನ

ಮೂಡುಬಿದಿರೆಯ ತೋಡಾರು ಪರಿಸರದ ಗ್ರಾಮಸ್ಥ ಅಯ್ಯಪ್ಪ ಮಾಲಾಧಾರಿಗಳು ಶಬರಿಮಲೆಗೆ ಪಾದಯಾತ್ರೆ ಮಾಡುತ್ತಿರುವ ಸಂದರ್ಭದಲ್ಲಿ ಅವರನ್ನು ತಿರುಪತಿಯ ತಿರುಮಲದಿಂದ ಶ್ವಾನವೊಂದು ಹಿಂಬಾಲಿಸಿಕೊಂಡು ಬಂದಿದ್ದು ಮಂಗಳವಾರ ಮೂಡುಬಿದಿರೆಯ ಮಣಿಕಂಠ ಕ್ಷೇತ್ರಕ್ಕೆ ಮಧ್ಯಾಹ್ನದ ವೇಳೆಗೆ ಆಗಮಿಸಿ ಮಿಶ್ರಮಿಸಿ ನಂತರ ಮತ್ತೆ ಭಕ್ತರೊಂದಿಗೆ ಪಾದಯಾತ್ರೆ ಮುಂದುವರೆಸಿದೆ. ಮೂಡುಬಿದಿರೆಯ ಅಯ್ಯಪ್ಪ ಮಂದಿರಕ್ಕೆ ಆಗಮಿಸಿದ ಅಯ್ಯಪ್ಪ ಮಾಲಾಧಾರಿಗಳನ್ನು ಮತ್ತು ಶ್ವಾನವನ್ನು ಮೂಡುಬಿದಿರೆ ಮಣಿಕಂಠ ಕ್ಷೇತ್ರದ ಪ್ರಧಾನರಾದ ರಮೆಶ್ ಶಾಂತಿ ಮತ್ತು ಕ್ಷೇತ್ರದ ಪ್ರಮುಖ ಸುದರ್ಶನ್ ಎಂ ಬರಮಾಡಿಕೊಂಡರು. ಸುದ್ದಿಗಾರ ಜೊತೆ ಮಾತನಾಡಿದ ಸುದರ್ಶನ್ ಎಂ., 18 ವರ್ಷಗಳಿಂದ ಅಶೋಕ್ ಗುರುಸ್ವಾಮಿ ನೇತೃತ್ವದಲ್ಲಿ ಪಾದಾಯಾತ್ರೆ ನಡೆಸುತ್ತಿದ್ದಾರೆ. ನ.೩೦ರಂದು ತಿರುಪತಿಯಲ್ಲಿ ಮಾಲೆಧಾರಣೆ ಮಾಡಿದ್ದಾರೆ ಎಂದರು.ವ್ರತಧಾರಿ ರಾಜೇಶ್ ಮಾತನಾಡಿ, ಆಯೋದ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಬೇಕು. ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶ ನಿರ್ಬಂಧಿಸುವ ಕುರಿತ ಸಂಕಲ್ಪದಿಂದ ವ್ರತಧಾರಿಗಳು ಅಯೋಧ್ಯೆ ಹಾಗೂ ತಿರುಪತಿಯಿಂದ ಶಬರಿಮಲೆಗೆ ಪಾದಯಾತ್ರೆ ಮಾಡುತ್ತಿದ್ದಾರೆ ಎಂದರು. ಶ್ವಾನಕ್ಕೆ ಸಣ್ಣ ಪುಟ್ಟ ಗಾಯಗಳಾಗಿದ್ದು ಸುದರ್ಶನ್ ಅವರು ಅದಕ್ಕೆ ಮದ್ದು ಹಚ್ಚಿ ಉಪಚಾರ ಮಾಡಿದ್ದಾರೆ. ಮಧ್ಯಾಹ್ನದ ವೇಳೆ ಮಲಗಿ ನಿದ್ದೆ ಮಾಡುತ್ತಿದ್ದ ಶ್ವಾನ ಅಯ್ಯಪ್ಪ ಮಾಲಾಧಾರಿಗಳು ಹೊರಡುವ ಸಮಯ ಎಚ್ಚರಗೊಂಡು ಅವರೊಂದಿಗೆ ಹೆಜ್ಜೆ ಹಾಕುತ್ತಾ ಸಾಗಿದೆ.

 

Related posts

Leave a Reply

Your email address will not be published. Required fields are marked *