Header Ads
Breaking News

ಅರಿಯಪ್ಪಾಡಿ ಮಾಡ ಅಂಗಳದಲ್ಲಿ ಚಿನ್ನದ ಪೈರು ; ದಟ್ಟ ಕಾಡನ್ನು ಗದ್ದೆಯಾಗಿಸಿ ಭತ್ತ ಬೆಳೆಸುವ ಸಂಕಲ್ಪ

ಪಾಳು ಬಿದ್ದ ಗದ್ದೆಯಲ್ಲಿ ಮತ್ತೆ ಕೃಷಿ ನಡೆಸುವುದು ಹರ ಸಾಹಸವೇನಲ್ಲ.ಆದರೆ ಬಂಜರು ಭೂಮಿಯನ್ನು ಗದ್ದೆಯಾಗಿಸುವುದು ಸುಲಭದ ಮಾತಲ್ಲ.ಮುಂಡಿತ್ತಡ್ಕದ ಅರಿಯಪ್ಪಾಡಿ ‘ಮಾಡ’ ದ ಗೆಳೆಯರ ಬಳಗ ‘ಮಾಡ’ ದ ಮುಂಭಾಗದ ದಟ್ಟ ಕಾಡನ್ನು ಗದ್ದೆಯಾಗಿಸಿ, ಭತ್ತ ಬೆಳೆಸುವ ಸಂಕಲ್ಪದೊಂದಿಗೆ ಸಾಹಸಿಕ, ಶ್ರಮಭರಿತ ಕಾಯಕ ನಡೆಸಿದ ಗದ್ದೆಯಲ್ಲಿ ಚಿನ್ನದಂತ ಪೈರು ಲಭಿಸಿದೆ.

ಶತಮಾನಗಳ ಹಿಂದೆ ಅರಿಯಪ್ಪಾಡಿಯಲ್ಲಿ ‘ಮಾಡ’ ಇದ್ದು ಸುತ್ತ ಮುತ್ತಲೂ ಅಕ್ಕಿ ಬೆಳೆಯುವ ಗದ್ದೆಗಳ ಊರು ಇದಾಗಿತ್ತೆಂದು ಪ್ರತೀತಿ. ಆದರೆ ಕಾಲಾನಂತರದಲ್ಲಿ ಪಾಳು ಬಿದ್ದು ನಿರ್ನಾಮಗೊಂಡು, ದಟ್ಟಾರಣ್ಯದ ಬನವಾಗಿ ಮಾರ್ಪಟ್ಟಿತ್ತು. ಲಾಕ್ಡೌನ್ ಕಾಲದಲ್ಲಿ ‘ನಾಡ’ ಜನರೆಲ್ಲರೂ ಮನೆಯಲ್ಲೇ ಬಂಧಿಯಾಗಿದ್ದಾಗ ಅರಿಯಪ್ಪಾಡಿ ‘ಮಾಡ’ ದ ತರುಣರ ಸಂಘ ‘ಮಾಡ’ ಪ್ರದೇಶದ ಪೂರ್ವದ ದಟ್ಟ ಕಾನನ ಬರಡು ಬಂಜರು ಭೂಮಿಯನ್ನು ಸಮತಟ್ಟುಗೊಳಿಸಿ ಕೃಷಿಯೋಗ್ಯ ಭೂಮಿಯನ್ನಾಗಿ ಮಾಡಿ ನೇಜಿ ನೆಡುವ ಮೂಲಕ ‘ಮಾಡ’ ವನ್ನು ಪುನರ್ ಸ್ಥಾಪಿಸಿದೆ.ಅರಿಯಪ್ಪಾಡಿ ಪ್ರದೇಶ ಕೃಷಿಯೋಗ್ಯ ಭೂಮಿಯೇನಲ್ಲ.’ಮಾಡ’ ದ ತರುಣರಿಗೆ ಕಾಸರಗೋಡಿನ ರೋಟರಿ ಕ್ಲಬ್ ಸಹಾಯಹಸ್ತದ ನೆರವು ನೀಡಿ ಕೈ ಜೋಡಿಸಿದ್ದು ಪುತ್ತಿಗೆ ಪಂಚಾಯಿತಿ ಕೃಷಿ ಇಲಾಖೆ ಬೆಂಬಲ ಪೆÇ್ರೀತ್ಸಾಹ ನೀಡಿದ ಪರಿಣಾಮ ದಟ್ಟ ಕಾಡು ಕರಗಿ ಬಂಜರು ನೆಲ ಬಂಗಾರದಂತ ಬೆಳೆ ಬೆಳೆಯುವ ಭೂಮಿಯಾಗಿ ಮಾರ್ಪಟ್ಟಿದೆ.

ವೈ.ಮಹಾಲಿಂಗೇಶ್ವರ ಭಟ್, ಕಾಸರಗೋಡು ರೋಟರಿ ಕ್ಲಬ್ ಅಧ್ಯಕ್ಷ ಡಾ.ಜನಾರ್ಧನ ನಾಯ್ಕ್, ಹಲವಾರು ಮಂದಿ ಪಾಲ್ಗೊಂಡರು.

Related posts

Leave a Reply

Your email address will not be published. Required fields are marked *