Header Ads
Header Ads
Header Ads
Header Ads
Header Ads
Header Ads
Breaking News

ಅರೆಬರೆಯಾಗಿ ಕಾಮಗಾರಿ ಪರಿಣಾಮ ಉಡುಪಿ ಟು ಮಣಿಪಾಲ ಹೆದ್ದಾರಿ ಕೆಸರುಮಯ : ವಾಹನ ಸವಾರರೇ ಎಚ್ಚರ!ಎಚ್ಚರ!

ಉಡುಪಿಯ ಇಂದ್ರಾಳಿ ರೈಲ್ವೆ ಬ್ರಿಜ್ ಬಳಿ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಸರ್ಕಸ್ ಮಾಡಿಕೊಂಡು ಸಂಚರಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಇದಕ್ಕೆ ಕಾರಣ ಉಡುಪಿ ಟು ಹೆಬ್ರಿ ಹೆದ್ದಾರಿಯ ಅರೆಬರೆ ಕಾಮಗಾರಿಯ ಎಫೆಕ್ಟ್. ಅರೆಬರೆ ಕಾಮಗಾರಿ ವಾಹನ ಸವಾರರಿಗೆ ತೊಂದರೆ ಒಡ್ಡುತ್ತಿದೆ.

ಹೌದು, ಈ ಬಾರಿಯ ಭಾರಿ ಮಳೆಗೆ ರಸ್ತೆಗಳು ಸಂಪೂರ್ಣ ಹಾಳಾಗಿದೆ. ಅಲ್ಲಲ್ಲಿ ಹೊಂಡಗುಂಡಿಗಳೇ ಕಾಣಸಿಗುತ್ತವೆ. ಕಾಮಗಾರಿಯ ನಿಜಸ್ವರೂಪ ಬಯಲಾಗುತ್ತಿದೆ. ಬಹುಬೇಡಿಕೆಯ ಮಲ್ಪೆ ಮೊಳಕಾಲ್ಮೂರಿನಿಂದ ತೀರ್ಥಹಳ್ಳಿಯ ತನಕ ರಸ್ತೆಯ ಅಗಲೀಕರಣ ಕಾರ್ಯಕ್ಕೆ ಚಾಲನೆ ಏನೋ ದೊರಕಿದೆ. ಆದ್ರೆ ಕಾಮಗಾರಿ ಆರಂಭವಾಗಿರೋದು ಉಡುಪಿ ನಗರದಿಂದ ಈಗಾಗಲೇ ಉಡುಪಿ ನಗರದಿಂದ ಹಿಡಿದು ಪರ್ಕಳ ತನಕ ರಸ್ತೆ ಅಗಲೀಕರಣ ಕಾರ್ಯ ಪ್ರಗತಿಯಲ್ಲಿದೆ. ಭೂ ಸ್ವಾಧೀನದ ನಂತರ ಕಾಮಗಾರಿ ಆರಂಭ ಆಗಿರೋದು ಫೆಬ್ರವರಿಯಿಂದ ಆದ್ರೆ ಇದುವರೆಗೆ ಎಲ್ಲಾ ಕಾಮಗಾರಿ ಪೂರ್ಣವಾಗಿಲ್ಲ. ಅಲ್ಲಲ್ಲಿ ಚರಂಡಿ ಕೂಡಾ ಅರೆ ಬರೆ ಕಾಮಗಾರಿ ನಡೆಸಲಾಗಿದೆ.

ಇಂದ್ರಾಳಿ ಬಳಿಯ ರೈಲ್ವೆ ಬ್ರಿಜ್ ಬಳಿ ಅಗಲೀಕರಣ ಪ್ರಕ್ರೀಯೆ ಸೇರಿದಂತೆ ಎಲ್ಲಾ ಕಾಮಗಾರಿಗಳು ಅರ್ಧಂಬರ್ದವಾಗಿದೆ. ಇದರಿಂದ ರಸ್ತೆ ಎಲ್ಲಾ ಕೆಸರುಮಯವಾಗಿದ್ದು ಅಲ್ಲಲ್ಲಿ ಹೊಂಡದಲ್ಲಿ ನೀರು ತುಂಬಿದೆ. ರಸ್ತೆ ಕೆಸರುಮಯವಾಗಿದ್ದರಿಂದ ದ್ವಿಚಕ್ರ ವಾಹನ ಸವಾರರಿಗೆ ತೊಂದರೆ ಆಗುತ್ತಿದ್ದು ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಇನ್ನು ಎಂಜಿಎಂ ಕಾಲೇಜು ಮಣಿಪಾಲದ ಹಲವು ಕಡೆ ಅರೆ ಬರೆ ಕಾಮಗಾರಿಯ ಎಹೆಕ್ಟ್ ಕಾಣ ಸಿಗುತ್ತಿದೆ. ಈಗಾಗಲೇ ಸುರಿದಿರುವ ಭಾರಿ ಮಳೆಗೆ ಡಾಮರೀಕರಣಗೊಳ್ಳದ ಕೇವಲ ತೇಪೆ ಹಾಕಿದ್ದ ರಸ್ತೆಗಳಲ್ಲಿ ಕೇವಲ ಗುಂಡಿಗಳು ಕಾಣಸಿಗುತ್ತಿವೆ.

ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯಲ್ಲಿ ನೀರು ಹರಿದಿದ್ದು ತೇಪೆ ಹಾಕಿದ್ದ ಜಾಗದಲ್ಲಿ ಕೇವಲ ಜಲ್ಲಿಕಲ್ಲುಗಳು ಕಾಣ ಸಿಗುತ್ತವೆ. ರಸ್ತೆಯೆಲ್ಲ ಜಲ್ಲಿಕಲ್ಲಿನಿಂದ ತುಂಬಿ ಹೋಗಿದ್ದು ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಶಾಲಾಕಾಲೇಜಿನ ಮಕ್ಕಳು ಪಾದಾಚಾರಿಗಳು ಕಷ್ಟದಿಂದ ನಡೆದಾಡಬೇಕಾಗಿದೆ ಇನ್ನೂ ರಾತ್ರಿಯ ವೇಳೆ ಸಾರ್ವಜನಿಕರು ,ವಾಹನಸವಾರರು ಬಹಳ ಜಾಗರೂಕರಾಗಿ ಇದ್ದಲ್ಲಿ ಮುಂದೆ ಆಗುವ ಅವಘಡವನ್ನು ಕಡಿಮೆಗೊಳಿಸಬಹುದು ವಿನಹ ಸದ್ಯದ ಮಟ್ಟಿಗೆ ಬೇರೆ ಯಾವುದೆ ಪರ್ಯಾಯ ಕ್ರಮ ಜಾರಿಯಾಗಿರುವುದಿಲ್ಲ. ಮುಂಜಾನೆ ಮತ್ತು ಸಂಜೆ ಹೊತ್ತು ಅರೆಬರೆ ಕಾಮಗಾರಿಯಿಂದಾಗಿ ಟ್ರಾಫಿಕ್ ಜಾಮ್ ಕೂಡಾ ಆಗುತ್ತಿದೆ. ಒಟ್ಟಾರೆ ಅರೆಬರೆ ಕಾಮಗಾರಿಯ ವಿರುದ್ದ ಸ್ಥಳೀಯರೂ ಸಹ ಹಿಡಿಶಾಪ ಹಾಕುತ್ತಿದ್ದಾರೆ.

Related posts

Leave a Reply

Your email address will not be published. Required fields are marked *