Breaking News

ಅರೆಮರ್‍ಲೆರ್ ತುಳು ಸಿನಿಮಾ ಕರಾವಳಿ ಜಿಲ್ಲೆಯಲ್ಲಿ ಚಿತ್ರ ಬಿಡುಗಡೆ

 

ಚಂಡಿಕೋರಿ ಮತ್ತು ಬರ್ಸ ಚಿತ್ರದ ನಂತರ ಬೊಳ್ಳಿ ಮೂವೀಸ್ ಲಾಂಛನದಲ್ಲಿ ಮೂಡಿಬರುತ್ತಿರುವ ಅರೆಮರ್‍ಲೆರ್ ಚಿತ್ರವು ಇಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾದ್ಯಂತ ಬಿಡುಗಡೆಗೊಂಡಿತು.

ಮಂಗಳೂರಿನ ಪ್ರಭಾತ್ ಚಿತ್ರಮಂದಿರದಲ್ಲಿ ಅರೆಮರ್‍ಲೆರ್ ಚಿತ್ರಕ್ಕೆ ವಿದ್ಯುಕ್ತವಾಗಿ ಚಾಲನೆ ದೊರಕಿತು. ಕರಾವಳಿ ಕಾಲೇಜಿನ ಚೇರ್‌ಮೆನ್ ಗಣೇಶ್ ರಾವ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಅರೆಮರ್‍ಲೆರ್ ಚಿತ್ರಕ್ಕೆ ಶುಭ ಹಾರೈಸಿದರು.
ಅನಂತರ ಡೆನ್ನಿಸ್ ಡೇಸಾ ಮಾತನಾಡಿ, ದೇವದಾಸ್ ಕಾಪಿಕಾಡ್ ತುಳುವಿಗೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದ ಅವರು ಚಿತ್ರಕ್ಕೆ ಶುಭ ಹಾರೈಸಿದರು.

ಅನಂತರ ಚಿತ್ರದ ನಿರ್ದೇಶಕ ದೇವದಾಸ್ ಕಾಪಿಕಾಡ್ ಮಾತನಾಡಿ ನಮ್ಮ ಚಿತ್ರಕ್ಕೆ ಎಲ್ಲರೂ ಸಹಕಾರ ನೀಡಿದ್ದಾರೆ ಎಂದು ತಿಳಿಸಿದ ಅವರು ತುಳು ಚಿತ್ರರಂಗ ಮುಂದಿನ ದಿನಗಳಲ್ಲಿ ಸಮೃದ್ದಿಯಾಗಿ ಬೆಳೆಯಲು ಶ್ರಮಿಸುವುದಾಗಿ ಹೇಳಿದರು.

ಇದು ಹೊಂದು ಹಾಸ್ಯ ಭರಿತ ಮನೋರಂಜನಾತ್ಮಕ ಹಾಗೂ ಕುಟುಂಬ ಸಮೇತರಾಗಿ ನೋಡಬಹುದಾದ ಚಿತ್ರ ಚಿತ್ರದಲ್ಲಿ ೪ ಹಾಡುಗಳಿದ್ದು ದೇವದಾಸ್ ಕಾಪಿಕಾಡ್, ಸುಪ್ರಿಯಾ ಲೋಹಿತ್, ನಕುಲ್ ಅಭ್ಯಂಕರ್, ಅರ್ಜುನ್ ಕಾಪಿಕಾಡ್, ಹಾಡಿರುತ್ತಾರೆ.
ಈ ಸಂದರ್ಭ ಅರೆಮರ್‍ಲೆರ್ ಚಿತ್ರತಂಡದ ಕಲಾವಿದರು ಉಪಸ್ಥಿತರಿದ್ದರು

Related posts

Leave a Reply