Header Ads
Breaking News

ಅಲ್ಲಿಪಾದೆಯಲ್ಲಿ ಜನರು ಸಹಬಾಳ್ವೆ ಹಾಗೂ ನ್ಯಾಯಯುತವಾಗಿ ಬದುಕುತ್ತಿದ್ದಾರೆ : ಪ್ರಸನ್ನ ಎಂ.ಎಸ್. ಹೇಳಿಕೆ

ಬಂಟ್ವಾಳ: ಅಲ್ಲಿಪಾದೆ ಪರಿಸರ ಹೆಚ್ಚು ಶಾಂತಿಯುತವಾಗಿದೆ. ಇಲ್ಲಿ ಎಲ್ಲಾ ವರ್ಗದ ಜನರಿದ್ದರೂ ಸಹಬಾಳ್ವೆ ಹಾಗೂ ನ್ಯಾಯಯುತವಾಗಿ ಬದುಕುತ್ತಿದ್ದಾರೆ. ಆದ್ದರಿಂದ ಇಲ್ಲಿ ಸಂಘರ್ಷಗಳು ಕಡಿಮೆ ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರಸನ್ನ ಎಂ.ಎಸ್. ಹೇಳಿದರು. ಸಂತ ಜೋನರ ಹಿ.ಪ್ರಾ.ಶಾಲೆ ಹಾಗೂ ಸಂತ ಅಂತೋನಿಯವರ ಆಂಗ್ಲ ಮಾಧ್ಯಮ ಶಾಲೆ ಅಲ್ಲಿಪಾದೆ ಆಶ್ರಯದಲ್ಲಿ ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ, ರಿಕ್ಷಾ ಚಾಲಕರು ಮತ್ತು ಮಾಲಕರು ಅಲ್ಲಿಪಾದೆ ಇವರ ಸಹಯೋಗದಲ್ಲಿ ನಡೆದ ರಸ್ತೆ ಸುರಕ್ಷ ಅಭಿಯಾನ ಹಾಗೂ ಹಿರಿಯ ರಿಕ್ಷಾ ಚಾಲಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಲ್ಲಿಪಾದೆ ಚರ್ಚ್‌ನ ಧರ್ಮಗುರುಗಳಾದ ವಂ. ಫಾ| ಫೆಡ್ರಿಕ್ ಮೊಂತೆರೋ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭ ಸಂತ ಜೋನರ ಹಿ.ಪ್ರಾ.ಶಾಲೆ ಮುಖ್ಯ ಶಿಕ್ಷಕಿ ಅಂಜಲೀನಾ, ಸಂತ ಅಂತೋನಿಯವರ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಲವೀನಾ ವೇಗಸ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *