

ಮೂಡುಬಿದಿರೆ: ಇಲ್ಲಿನ ಅಳಿಯೂರಿನ ಯುವಕನೋರ್ವ ಮನೆ ಸಮೀಪದ ಪಾಳುಬಿದ್ದ ಕಟ್ಟಡದಲ್ಲಿ ಅತ್ಮಹತ್ಯೆ ಮಾಡಿಕೊಂಡಿದ್ದಾನೆ.ಅಳಿಯೂರಿನ ನಿವಾಸಿ ತಿಮ್ಮಪ್ಪ ದೇವಾಡಿಗ ಎಂಬವರ ಪುತ್ರ ಸಂದೀಪ್( 22) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಶಿರ್ತಾಡಿ ಪೇಟೆಯ ಮೆಡಿಕಲ್ ನಲ್ಲಿ ಉದ್ಯೋಗಿಯಾಗಿದ್ದು, ಕೆಲಸ ಮುಗಿದ ಬಳಿಕ ಸಾಯಂಕಾಲ ನಾಲ್ಕು ಗಂಟೆಗೆ ಮನೆಗೆ ಬಂದಿದ್ದ. ಬಳಿಕ ಮನೆ ಪರಿಸರದಲ್ಲಿ ಸುತ್ತಾಡಿ ಬರುವೆನ್ನೆಂದು ಹೇಳಿ ಹೋಗಿದ್ದ. ರಾತ್ರಿ ವೇಳೆಗೆ ಸಂದೀಪ್ ಮನೆಗೆ ಬಾರದಿರುವುದನ್ನು ಕಂಡು, ಮನೆಯವರು ಮನೆ ಸಮೀಪ ಹುಡುಕಾಡಿದಾಗ ಪಾಳು ಬಿದ್ದ ಕಟ್ಟಡದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಮೂಡುಬಿದಿರೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.