Header Ads
Header Ads
Breaking News

ಅವೈಜ್ಞಾನಿಕ ಸರ್ಕಲ್‌ನಲ್ಲಿ ಸರ್ಕಸ್‌ಗೆ ಸಿಗುವುದೇ ಮುಕ್ತಿ.ಪುತ್ತೂರಿನ ದರ್ಬೆ ಬಪಾಸ್ ಪತ್ರಾವೋ ಸರ್ಕಲ್‌ನ ದುಸ್ಥಿತಿ.

ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಪುತ್ತೂರು ನಗರದಲ್ಲಿನ ವಿವಿಧ ಸರ್ಕಲ್‌ಗಳು ಸುಗಮ ಸಂಚಾರದ ದೃಷ್ಟಿಯಿಂದ ಸವಾಲಾಗಿವೆ ಎನ್ನುವುದು ಹಲವು ವರ್ಷಗಳ ಸಾರ್ವಜನಿಕ ಕೂಗು. ಕೆಲವು ಸರ್ಕಲ್‌ಗಳ ಅಭಿವೃದ್ಧಿಗೆ ನಗರಸಭೆ ಆಡಳಿತ ಮುಂದಾಗಿದೆಯಾದರೂ ಪ್ರಕ್ರಿಯೆ ಮಾತ್ರ ನಿಧಾನಗತಿಯಲ್ಲಿದೆ.ಜಿಲ್ಲಾ ಕೇಂದ್ರವಾಗಿ ಪುತ್ತೂರು ನಗರದ ರಸ್ತೆಗಳಲ್ಲಿ ೧೦ ಕ್ಕೂ ಮಿಕ್ಕಿ ಅವೈಜ್ಞಾನಿಕ ಸರ್ಕಲ್‌ಗಳು ಇವೆ. ಇದರಲ್ಲಿ ದರ್ಬೆ ಬಪಾಸ್‌ನ ಪತ್ರಾವೋ ವೃತ್ತ, ಬೊಳುವಾರುನಲ್ಲಿರುವ ಉಪ್ಪಿನಂಗಡಿ ತಿರುವಿನ ವೃತ್ತದ ಅಭಿವೃದ್ಧಿ, ಮಂಜಲ್ಪಡ್ಪುಯ ಬಪಾಸ್ ವೃತ್ತ ನಿರ್ಮಾಣ, ಬಪಾಸ್‌ನ ಬಪ್ಪಳಿಗೆ ಇರುಗುವಲ್ಲಿನ ಜಂಕ್ಷನ್‌ನಲ್ಲಿ ವೃತ್ತ ನಿರ್ಮಾಣ, ಮುಕ್ರಂಪಾಡಿ -ಮೊಟ್ಟೆತ್ತಡ್ಕ ರಸ್ತೆ ಬಳಿ ವೃತ್ತ ನಿರ್ಮಾಣಕ್ಕೆ ಸೇರಿ ಒಟ್ಟು ೩೦ ಲಕ್ಷ ರೂ.ನ ಯೋಜನೆಯನ್ನು ನಗರಸಭೆ ಆಡಳಿತ ರೂಪಿಸಿದೆ.ಪುತ್ತೂರು – ಸುಳ್ಯ ಹೆದ್ದಾರಿಯ ಸುಳ್ಯ ಕಡೆಯಿಂದ ಪುತ್ತೂರು ನಗರಕ್ಕೆ ಅಥವಾ ಬಪಾಸ್ ಮೂಲಕ ತೆರಳುವ ಬಪಾಸ್‌ನ ಪತ್ರಾವೋ ಸರ್ಕಲ್‌ನಲ್ಲಿ ವಾಹನ ಸಂಚಾರ ನಿಜಕ್ಕೂ ಅಪಾಯಕಾರಿ. ಯಾಕೆಂದರೆ ಬಪಾಸ್ ಮೂಲಕ ಸುಳ್ಯ ಕಡೆಗೆ ತೆರಳುವ ಘನ ವಾಹನಗಳ ಸಹಿತ ಯಾವ ಕಡೆಯಿಂದ ಮುಖ್ಯ ರಸ್ತೆಗೆ ಪ್ರವೇಶಿಸುತ್ತಾರೆ ಎಂಬುದನ್ನು ಊಹಿಸುವುದೂ ಕಷ್ಟ. ಕಾರಣ ಈ ಸರ್ಕಲ್ ಅವೈಜ್ಞಾನಿಕವಾಗಿದೆ. ಇಲ್ಲಿ ಯಾವುದೇ ಸೂಚನಾ ಫಲಕವಾಗಲೀ, ನಿಯಮ ಪಾಲಿಸಬೇಕೆಂಬ ಸೂಚನೆಯಾಗಲಿ ಇಲ್ಲ. ತೀವ್ರ ಪ್ರಮಾಣದ ಅಪಾಯವನ್ನು ಮನಗಂಡು ಇತ್ತೀಚೆಗೆ ಸಂಚಾರ ಪೊಲೀಸ್ ಇಲಾಖೆಯಿಂದ ತಾತ್ಕಾಲಿಕ ತಡೆಗಳನ್ನು ಅಳವಡಿಸಿ ಸ್ವಲ್ಪ ಮಟ್ಟಿಗೆ ವ್ಯವಸ್ಥೆಗೊಳಿಸಲಾಗಿದೆ. ಈ ಸರ್ಕಲ್‌ನ್ನು ವೈಜ್ಞಾನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲು ಸಾರ್ವಜನಿಕ ಒತ್ತಾಯದ ಮೇರೆಗೆ ಅಂದಿನ ಶಾಸಕಿ ಶಕುಂತಳಾ ಶೆಟ್ಟಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಶಾಸಕರ ಸೂಚನೆಯ ಮೇರೆಗೆ ಪುಡಾವು ಸರ್ಕಲ್ ಅಭಿವೃದ್ಧಿಗೆ ಅನುದಾನ ನೀಡುವುದಾಗಿ ತಿಳಿಸಿತ್ತು. ಆದರೆ ನಗರಸಭೆ ಆಡಳಿತ ತಾವೇ ಸರ್ಕಲ್‌ನ ಅಭಿವೃದ್ಧಿ ಮಾಡುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಪುಡಾ ಹಿಂದೆ ಸರಿದಿತ್ತು. ಈ ಪ್ರಕ್ರಿಯೆ ನಡೆದೇ ಒಂದು ವರ್ಷ ಪೂರೈಸಿದೆ.

Related posts

Leave a Reply