Header Ads
Header Ads
Breaking News

ಅವ್ಯವಸ್ಥೆಯ ಆಗರವಾಗಿದೆ ಐತಿಹಾಸಿಕ ಗುಜ್ಜರಕೆರೆ : ಕೆರೆಯ ಆಸುಪಾಸಿನಲ್ಲಿ ಡೆಂಗ್ಯೂ, ಮಲೇರಿಯಾ ಹಾವಳಿ

 ಅದು ಐತಿಹಾಸಿಕ ಬೃಹತ್ತಾಕಾರದ ಕೆರೆ. ನೋಡಲು ಸುಂದರವಾಗಿದ್ದರೂ ಕೆರೆಯಲ್ಲಿ ಡ್ರೈನೇಜ್ ನೀರು ತುಂಬಿ ಮಲೀನಗೊಂಡಿರುವುದು ಮಾತ್ರವಲ್ಲದೆ ಆಳೆತ್ತರಕ್ಕೆ ಗಿಡ, ಪೊದೆಗಳು ಬೆಳೆದು ನಿಂತಿದೆ. ಇದೀಗ ಅಲ್ಲಿಯ ಸುತ್ತಲಿನ ಪರಿಸರದ ನಿವಾಸಿಗಳು ಮಲೇರಿಯಾ ಡೆಂಗ್ಯೂ ಭೀತಿಯನ್ನು ಎದುರಿಸುತ್ತಿದ್ದಾರೆ. ಈ ಕೆರೆಯಿಂದ ಹಲವಾರು ಸಮಸ್ಯೆಗಳನ್ನು ಸ್ಥಳಿಯರು ಅನುಭವಿಸುತ್ತಿದ್ದು ಕೂಡಲೇ ಕೆರೆಯನ್ನು ಅಭಿವೃದ್ಧಿ ಮಾಡಿ ರೋಗದಿಂದ ಮುಕ್ತಿ ಕೊಡಿ ಎಂದು ಅಲ್ಲಿಯ ನಿವಾಸಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ. ಹಾಗಾದರೆ ರೋಗ ಹರಡುವುದಕ್ಕೇ ಆ ಕರೆಯೇ ಕಾರಣನಾ? ಅಷ್ಟಕ್ಕೂ ಆ ಕೆರೆ ಯಾವುದು ಈ ವರದಿ ನೋಡಿ….

 ನಾವೀಗ ಹೇಳ್ತಾ ಇರೋದು ಐತಿಹಾಸಿಕ ಕೆರೆಯ ವಿಚಾರ… ಅದುವೇ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟ ಜಪ್ಪು ಮಾರ್ಕೆಟ್ ಬಳಿಯಿರುವ ಗುಜ್ಜರಕೆರೆ. ಇತಿಹಾಸ ಪ್ರಸಿದ್ಧವಾದ ಈ ಕೆರೆ 3.93 ಎಕರೆ ವಿಸ್ತೀರ್ಣ ಹಾಗೂ ೪೦ ಅಡಿ ಆಳದ ಕೆರೆ. ಒಂದು ಕಾಲದಲ್ಲಿ ಮಂಗಳಾದೇವಿಯ ಜಳಕ ಇಲ್ಲಿ ಆಗುತ್ತಿತ್ತು. ಇಲ್ಲಿನ ಪರಿಸರದ ನೂರಾರು ಎಕರೆ ಕೃಷಿಭೂಮಿಗೆ ನೀರು ಒದಗಿಸುತ್ತಿತ್ತು. ಏತ ನೀರಾವರಿಯೂ ನಿರಾತಂಕವಾಗಿ ನಡೆಯುತ್ತಿತ್ತು. ಸುತ್ತಮುತ್ತಲಿನ ಬಾವಿಗಳಲ್ಲಿ ಜೀವಜಲ ಚಿಮ್ಮುತ್ತಿತ್ತು. ಆದರೆ ಈಗ ಸುಂದರವಾದ ಕೆರೆಯಲ್ಲಿ ಹೂಳು ತುಂಬಿ ಗಿಡಗಂಟಿ, ಪಾಚಿ ಬೆಳೆಯಲಾರಂಭಿಸಿತು. ಕೊಳೆತು ನಾರುತ್ತಿರುವ ಗುಜ್ಜರ ಕೆರೆ ಪರಿಸರಕ್ಕೆ ದುರ್ನಾತ ಬೀರಲಾರಂಭಿತು. ಇದರ ಪರಿಣಾಮವಾಗಿ ಗುಜ್ಜರಕೆರೆ, ಅರಕೆರೆ ಪರಿಸರದ ಬಾವಿಗಳ ನೀರು ಕಲುಷಿತಗೊಂಡಿದೆ. ಸ್ಥಳೀಯರು ಈ ಕುರಿತು ಪಾಲಿಕೆಗೆ ಮನವಿ ಮೇಲೆ ಮನವಿ ಸಲ್ಲಿಸಿ ಕೊನೆಗೆ ನ್ಯಾಯಾಲಯದ ಮೊರೆ ಕೂಡ ಹೋಗಿದ್ದರು ಆದರೆ ಇದುವರೆಗೆ ಗುಜ್ಜರ ಕೆರೆಯ ಪರಿಸ್ಥಿತಿ ಹಾಗೆಯೇ ಇದೆ.

ಕಳೆದ ಅದೇಷ್ಟೋ ವರುಷಗಳಿಂದ ಗುಜ್ಜರ ಕರೆಗೆ ಅಭಿವೃದ್ಧಿಗೆ ರಕ್ಷಣಾ ವೇದಿಕೆ ಮತ್ತು ಇತರ ಸಂಘಟನೆಗಳು ಹೋರಾಟ ನಡೆಸಿಕೊಂಡು ಬಂದರೂ ಏನೂ ಪ್ರಯೋಜನವಿಲ್ಲದಂತಾಗಿದೆ. ಸ್ಥಳೀಯ ವಸತಿ ಸಮುಚ್ಚಯದ ಡ್ರೈನೇಜ್ ನೀರೆಲ್ಲಾ ಕೆರೆ ಸೇರುತ್ತಿದೆ. ಇದರಿಂದಾಗಿ ಐತಿಹಾಸಿಕ ಗುಜ್ಜರ ಕೆರೆಯನ್ನು ಶುದ್ಧ ನೀರಿನ ಸೆಲೆಯಾಗಿ ಮತ್ತು ವಿಹಾರ ತಾಣವಾಗಿ ವೈಜ್ಞಾನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಸರಕಾರ ಸಣ್ಣ ನೀರಾವರಿ ಇಲಾಖೆ ಮೂಲಕ 1 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದೆ. ಕಾಮಗಾರಿಯ ಟೆಂಡರ್ ಪ್ರಕ್ರಿಗೆ ಪ್ರಗತಿಯಲ್ಲಿದ್ದು, ಶೀಘ್ರ ಕಾಮಗಾರಿ ಆರಂಭವಾಗಲಿದೆ. ಈ ಬಾರಿ ವೈಜ್ಞಾನಿಕ ರೀತಿಯಲ್ಲಿ ಯೋಜನೆ ರೂಪಿಸಲಾಗಿದ್ದು, ಮೊದಲು ಹೂಳೆತ್ತುವ ಕಾಮಗಾರಿ ನಡೆಯಲಿದೆ. ಹೊರಪ್ರದೇಶದಿಂದ ಕೆರೆಗೆ ಬರುವ ಒಳಚರಂಡಿ ಅಥವಾ ಚರಂಡಿ ನೀರಿಗೆ ತಡೆ, ಒತ್ತುವರಿಯಾದ ಕೆರೆಯ ಜಾಗದ ಮರು ವಶಕ್ಕೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಕೆರೆಯ ಸುತ್ತಲು ಸುಂದರವಾದ ಗಾರ್ಡನ್ ನಿರ್ಮಾಣವಾಗಲಿದೆ ಎಂಬ ಊಹಾಪೋಹಗಳು ಕೇಳಿ ಬರುತ್ತಿದೆ.

Related posts

Leave a Reply

Your email address will not be published. Required fields are marked *