Header Ads
Header Ads
Header Ads
Header Ads
Header Ads
Header Ads
Breaking News

ಅ.14ರಂದು ರಾಮಂಜಿಯಿಂದ ಅಷ್ಟಮಿಯ ಸಂದರ್ಭ ವೇಷ ಧರಿಸಿ ಧನ ಸಂಗ್ರಹ

ಕಳೆದ ಆರು ವರ್ಷಗಳಿಂದ ರಾಮಂಜಿ ಅಷ್ಟಮಿಯ ಸಂದರ್ಭದಲ್ಲಿ ವೇಷ ಹಾಕಿ ಧನ ಸಂಗ್ರಹಿಸುತ್ತಿದ್ದು ಈ ಬಾರಿಯೂ ವಿಶಿಷ್ಟ ವೇಷಧರಿಸಿ ಸುಮಾರು 1.50 ಲಕ್ಷ ಹಣ ಸಂಗ್ರಹಿಸಿದ್ದಾರೆ. ಈ ಹಣವನ್ನು ಮೂವರು ಅಶಕ್ತ ಮಕ್ಕಳಿಗೆ ವಿತರಿಸುವ ಕಾರ್ಯಕ್ರಮ ಅಕ್ಟೋಬರ್ 14ರಂದು ನಡೆಯಲಿದೆ.ಈ ಬಗ್ಗೆ ಸುದ್ದಿಗೊಷ್ಟಿಯಲ್ಲಿ ರಾಮಂಜಿ ಆಮಂತ್ರಣ ಪತ್ರಿಕೆ ಸಮರ್ಪಣೆಯನ್ನು ಬಿಡುಗಡೆಗೊಳಿಸಿ ಮಾಹಿತಿ ನೀಡಿದರು. ಕಳೆದ 6 ವರ್ಷಗಳಿಂದ ವೇಷ ಧರಿಸಿ ಬಡ ರೋಗಿಗಳಿಗೆ ಅಶಕ್ತರಿಗೆ ಸಹಾಯ ಮಾಡುತ್ತಿದ್ದು, ಈ ಬಾರಿ ಹಾವುಗಳ ರಾಣಿ ಮೆಡೂಸ ವೇಷ ಧರಿಸಿ ಸುಮಾರು 1.50 ಲಕ್ಷ ರೂ ಹಣ ಸಂಗ್ರಹಿಸಿದ್ದೇವೆ. ಈ ಹಣವನ್ನು ಮೂವರು ಅಶಕ್ತ ಮಕ್ಕಳಿಗೆ ವಿತರಿಸಲಾಗುವುದು. ಈ ಕಾರ್ಯಕ್ರಮ 14ರಂದು ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ನಡೆಯಲಿದ್ದು ನಮ್ಮ ಭೂಮಿ ಸಂಸ್ಥೆಯ ಗಣಪತಿ, ಉಡುಪಿ ಜಿಲ್ಲಾಧಿಕಾರಿ ಜಗದೀಶ್, ಮಂಗಳೂರು ವಿವಿಯ ಕುಲಪತಿ ಡಾ.ಪಿ ಸುಭ್ರಹ್ಮಣ್ಯ ಎಡಪಡಿತ್ತಾಯ, ಉಡುಪಿ ಎಸ್ಪಿ ನಿಶಾ ಜೇಮ್ಸ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಮೋಹನ್ ಸಾಲಿಕೇರಿ, ರಿಯಾನ್ ಶೇಖ್, ಪುರುಷೋತ್ತಮ್ ಕೋಟ್ಯಾನ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *