Header Ads
Header Ads
Header Ads
Header Ads
Header Ads
Header Ads
Breaking News

ಅ.22ರಿಂದ 25ರವರೆಗೆ ಖಾಝಿ ಸಯ್ಯಿದ್ ಮುಹಮ್ಮದ್ ಉಮರುಲ್ ಫಾರೂಖ್ ಅಲ್ ಬುಖಾರಿ ತಂಙಳ್ ರವರ ನಾಲ್ಕನೇ ಉರೂಸ್ ಮುಬಾರಕ್

ಮಂಜೇಶ್ವರ: ಮಳ್‍ಹರ್ ಸಂಸ್ಥೆಗಳ ಶಿಲ್ಪಿಯೂ, ಹಲವಾರು ಮೊಹಲ್ಲಾಗಳ ಖಾಝಿಯೂ ಆಗಿದ್ದ ಸಯ್ಯಿದ್ ಮುಹಮ್ಮದ್ ಉಮರುಲ್ ಫಾರೂಖ್ ಅಲ್ ಬುಖಾರಿ ತಂಙಳ್‍ರವರ ನಾಲ್ಕನೇ ಉರೂಸ್ ಮುಬಾರಕ್ ಅಗಸ್ಟ್ 22ರಿಂದ 25ರವರೆಗೆ ಮಂಜೇಶ್ವರ ಮಳ್ ಹರ್ ಕ್ಯಾಂಪಸ್‍ನಲ್ಲಿ ನಡೆಯಲಿರುವುದಾಗಿ ಸಯ್ಯದ್ ಅಹ್ಮದ್ ಜಲಾಲುದ್ದೀನ್ ಅಲ್ ಬುಖಾರಿ ತಿಳಿಸಿದರು.

ಮಂಜೇಶ್ವರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 22 ಗುರುವಾರ ಸಂಜೆ 4:30ಕ್ಕೆ ನಡೆಯುವ ಮಖಾಂ ಝಿಯಾರತ್‍ಗೆ ಸಯ್ಯಿದ್ ಅತಾವುಲ್ಲಾ ತಂಙಳ್ ಉದ್ಯಾವರ ನೇತೃತ್ವ ನೀಡಲಿದ್ದಾರೆ. 5 ಗಂಟೆಗೆ ಸ್ವಾಗತ ಸಮಿತಿ ಚೆಯರ್ಮ್ಯಾನ್ ಮುಹಮ್ಮದ್ ಸ್ವಾಲಿಹ್ ಸಅದಿ ತಳಿಪ್ಪರಂಬು ಧ್ವಜಾರೋಹನಗೈಯಲಿದ್ದಾರೆ. 7ಗಂಟೆಗೆ ಉದ್ಘಾಟನಾ ಸಮ್ಮೇಳನದಲ್ಲಿ ಸಯ್ಯಿದ್ ಹಾಮಿದ್ ಇಂಬ್ಬಿಚ್ಚಿಕ್ಕೋಯ ಅಲ್ ಬುಖಾರಿ ಕೊಯಿಲ್ಯಾಂಡಿ ಪ್ರಾರಂಭ ಪ್ರಾರ್ಥನೆ ಮಾಡಲಿದ್ದಾರೆ. ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ಸಅದಿ ಅಲ್ ಬುಖಾರಿಯವರ ಅಧ್ಯಕ್ಷತೆಯಲ್ಲಿ ಸಯ್ಯಿದ್ ಕೆಎಸ್ ಆಟಕ್ಕೋಯ ತಂಙಳ್ ಕೊಂಬೋಳ್ ಉದ್ಘಾಟನೆ ನೆರವೇರಿಸುವರು. ಬುರ್ದಾಮಜ್ಲಿಸ್‍ಗೆ ಸಯ್ಯಿದ್ ತ್ವಾಹ ತಂಙಳ್ ಪೂಕಟೂರ್, ಹಾಫಿಳ್ ಸ್ವಾದಿಕ್ ಅಲಿ ಫಾಳಿಲಿ ಗೂಡಲ್ಲೂರ್ ನೇತೃತ್ವ ನೀಡಲಿದ್ದಾರೆ. ಸ್ವಲಾತ್ ಮಜ್ಲಿಸ್‍ಗೆ ಸಯ್ಯಿದ್ ಅಬ್ದುರ್ರಹ್ಮಾನ್ ಶಹೀರ್ ಅಲ್ ಬುಖಾರಿ ನೇತೃತ್ವ ನೀಡುವರು.

ಆಗಸ್ಟ್ 23 ಕ್ಕೆ ಶುಕ್ರವಾರ 7 ಗಂಟೆಗೆ ನಡೆಯುವ ಜಲ್ಸತ್ತುಲ್ ಮಹಬ್ಬ ಕಾರ್ಯಕ್ರಮದಲ್ಲಿ ಸಯ್ಯಿದ್ ಅಹ್ಮದ್ ಅಲವಿ ಜಲಾಲುದ್ದೀನ್ ಅಲ್ ಹಾದಿ ಪ್ರಾರಂಭ ಪ್ರಾರ್ಥನೆ ನಡೆಸುವರು. ಆಗಸ್ಟ್ 24 ಶನಿವಾರ ಸಂಜೆ 7 ಗಂಟೆಗೆ ಜಲ್ಸತ್ತುನ್ನಸ್ವೀಹ ಕಾರ್ಯಕ್ರಮದಲ್ಲಿ ಸಯ್ಯಿದ್ ಅಶ್ರಫ್ ಅಸ್ಸಖಾಫ್ ತಂಙಳ್ ಆದೂರು ಪ್ರಾರಂಭ ಪ್ರಾರ್ಥನೆ ನಡೆಸುವರು. ಆಗಸ್ಟ್ 25ಕ್ಕೆ ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ನಡೆಯುವ ಖತ್ಮುಲ್ ಖುರಾನ್ ಸಂಗಮಕ್ಕೆ ಸಯ್ಯಿದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಕಾಜೂರು, ಸಯ್ಯಿದ್ ಶಮೀಂ ತಂಙಳ್ ಕುಂಬೋಲ್ ನೇತೃತ್ವ ವಹಿಸುವರು. 7 ಗಂಟೆಗೆ ನಡೆಯುವ ನಿಹಾಯ ಸಮಾರೋಪ ಮಹಾ ಸಮ್ಮೇಳನದಲ್ಲಿ ಸಯ್ಯಿದ್ ಅಲಿ ಬಾಫಖಿ ತಂಙಳ್ ಕೊಲಾಂಡಿ ಪ್ರಾರಂಭ ಪ್ರಾರ್ಥನೆ ನಡೆಸುವರು. ಬದ್ರುಸ್ಸಾದಾತ್ ಸಯ್ಯಿದ್ ಇಬ್ರಾಹೀಂ ಖಲೀಲುಲ್ ಬುಖಾರಿಯವರ ಅದ್ಯಕ್ಷತೆಯಲ್ಲಿ ತಾಜುಶ್ಶರೀಅ ಎಂ ಅಲಿಕುಂಞ ಉಸ್ತಾದ್ ಶಿರಿಯ ಉದ್ಘಾಟಿಸುವರು. ಇಂಡ್ಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಮುಖ್ಯಪ್ರಭಾಷಣೆಗೆಯ್ಯುವರು.
ಸುದ್ದಿಗೋಷ್ಠಿಯಲ್ಲಿ ಹಸನ್ ಕುಂಞ ಮಳ್‍ಹರ್, ಹೈದರ್ ಸಖಾಫಿ ಕುಂಜತೂರು, ಅಬೂಬಕರ್ ಸಿದ್ದೀಖ್ ಸಅದಿ ತೌಡುಗೋಳಿ ಇಬ್ರಾಹಿಂ ಖಲೀಲ್ ಅಹ್ಸನಿ ಪಾಲ್ಗೊಂಡರು.

Related posts

Leave a Reply

Your email address will not be published. Required fields are marked *