Header Ads
Header Ads
Breaking News

ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ಜರುಗಿದ ಬ್ಯಾಡ್ಮಿಂಟನ್ ಕೂಟ:ಆಳ್ವಾಸ್ ವಿದ್ಯಾರ್ಥಿಗಳಿಂದ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ

ಮೂಡುಬಿದಿರೆ: ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ಜರುಗಿದ 64ನೇ ರಾಷ್ಟ್ರೀಯ ಪದವಿಪೂರ್ವ ಕಾಲೇಜುಗಳ ಬಾಲ್‌ಬ್ಯಾಡ್ಮಿಂಟನ್‌ಕೂಟ ಹಾಗೂ ಮಚಲಿಪಟ್ನಂನ ಕೃಷ್ಣ ವಿ.ವು ಆಶ್ರಯದಲ್ಲಿ ವಿಜಯವಾಡದಲ್ಲಿ ಜರುಗಿದ ಅಖಿಲ ಭಾರತ ಅಂತರ್ ವಿ.ವಿ ಮಹಿಳಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಅಮೋಘ ಸಾಮರ್ಥ್ಯತೋರಿದ್ದು, ಕರ್ನಾಟಕರಾಜ್ಯ ಹಾಗೂ ಮಂಗಳೂರು ವಿ.ವಿ ತಂಡಗಳು ಚಾಂಪಿಯನ್‌ಶಿಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿವೆ.

64ನೇ ರಾಷ್ಟ್ರೀಯ ಪದವಿಪೂರ್ವ ಕಾಲೇಜುಗಳ ಬಾಲ್‌ಬ್ಯಾಡ್ಮಿಂಟನ್‌ಕೂಟದಲ್ಲಿರಾಜ್ಯತಂಡ12 ವರ್ಷಗಳ ಬಳಿಕ ಚಾಂಪಿಯನ್ ಪಟ್ಟ ಗಳಿಸಿದೆ.ರಾಜ್ಯತಂಡದಲ್ಲಿಆಡಿದ ಪ್ರಮುಖಐದು ಮಂದಿ ಆಟಗಾರರು ಆಳ್ವಾಸ್ ಪದವಿಪೂರ್ವಕಾಲೇಜಿನಲ್ಲಿ ವಿದ್ಯಾರ್ಥಿಗಳು ಎನ್ನುವುದುಗಮನಾರ್ಹ. ಈ ಕೂಟದಲ್ಲಿಕಂಚಿನ ಪದಕ ಪಡೆದರಾಜ್ಯ ಬಾಲಕರತಂಡದಲ್ಲಿಆಡಿದ್ದ ಪ್ರಮುಖಐದು ಮಂದಿ ಆಟಗಾರರು ಆಳ್ವಾಸ್ ವಿದ್ಯಾರ್ಥಿಗಳು.

ಅಂತರ್ ವಿ.ವಿಯಲ್ಲಿದಾಖಲೆಯ ಸಾಧನೆ:
ಆಂಧ್ರಪ್ರದೇಶದ ಮಚಲಿಪಟ್ನಂನ ಕೃಷ್ಣ ವಿ.ವಿಆಶ್ರಯದಲ್ಲಿಜರುಗಿದ ಅಖಿಲ ಭಾರತಅಂತರ್ ವಿ.ವಿ ಮಹಿಳಾ ಬಾಲ್‌ಬ್ಮಾಡಿಂಟನ್‌ಕೂಟದಲ್ಲಿ ಮಂಗಳೂರು ವಿ.ವಿಯು ಸತತ 15ನೇ ಬಾರಿಗೆ ಲೀಗ್‌ಅರ್ಹತೆ ಪಡೆದಿರುವುದಲ್ಲದೆಎಂಟನೇ ಬಾರಿಗೆಚಾಂಪಿಯನ್ ಆಗಿ ಹೊರಹೊಮ್ಮಿದೆ. ವಿಜೇತ ಮಂಗಳೂರು ವಿ.ವಿ ತಂಡದಎಲ್ಲ ಹತ್ತು ಮಂದಿ ಆಟಗಾರ್ತಿಯರು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿಯರು. ಮಂಗಳೂರು ವಿ.ವಿಯೂ ಅಖಿಲ ಭಾರತಅಂತರ್ ವಿ.ವಿಕೂಟದಲ್ಲಿ ನಿರಂತರಐದನೇ ಬಾರಿಗೆ ಚಾಂಪಿಯನ್‌ಶಿಪ್ ಪಡೆಯುತ್ತಿದ್ದು, ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರು ಅಮೋಘ ಸಾಧನೆ ಮಾಡಿರುತ್ತಾರೆ.

Related posts

Leave a Reply