Header Ads
Header Ads
Breaking News

ಆಕರ್ಷಕ ಬೋರ್ಡರ್ ಎಕ್ಸ್‌ಪೋ 2019ಕ್ಕೆ ಚಾಲನೆ

ಮಂಜೇಶ್ವರ: ಮೊದಲ ಬಾರಿಗೆ ಕೇರಳ ಕರ್ನಾಟಕದ ಗಡಿ ಪ್ರದೇಶವಾದ ತಲಪಾಡಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಉದ್ಯಾವರದ ಎ.ಎಚ್.ಎಸ್ ಗೆಳೆಯರ ತಂಡದ ಪ್ರಾಯೋಜಕತ್ವದಲ್ಲಿ ವಸ್ತುಗಳ ಪ್ರದರ್ಶನ, ಮನರಂಜನೆ ಹಾಗೂ ಮಾರಾಟ ಹಬ್ಬಗಳ ಒಂದು ತಿಂಗಳ ಬೋರ್ಡರ್ ಎಕ್ಸ್‌ಪೋ 2019 ಕ್ಕೆ ಚಾಲನೆ ದೊರಕಿದೆ.

ಸಣ್ಣ ದರದಲ್ಲಿ ಪ್ರವೇಶಾತಿಯನ್ನು ಹೊಂದಿರುವ ಬೋರ್ಡರ್ ಎಕ್ಸ್‌ಪೋ 2019 ವಿವಿಧ ರೀತಿಯ ವಿನ್ಯಾಸಗಳನ್ನು ಹೊಂದಿದ್ದು, ಮಕ್ಕಳಿಗೆ ಹಾಗೂ ಹಿರಿಯರಿಗೆ ಮನರಂಜನೆಯನ್ನು ನೀಡುತ್ತಿದೆ. ಬೋರ್ಡರ್ ಎಕ್ಸ್‌ಪೋ’ಗೆ ಅಮೋಘ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನರ ಅಗತ್ಯತೆಯನ್ನು ಮನಗಂಡು ಉತ್ತಮ ಗುಣಮಟ್ಟದ ಉತ್ಪನ್ನಗಳು ಹಾಗೂ ಸೇವೆ ಗ್ರಾಹಕರಿಗೆ ಲಭ್ಯವಾಗಬೇಕೆಂಬ ನಿಟ್ಟಿನಲ್ಲಿ ಮೇಳ ಆಯೋಜಿಸಲಾಗಿರುವುದಾಗಿ ಆಯೋಜಕರು ತಿಳಿಸಿದ್ದಾರೆ.
ಕಾಸರಗೋಡು ಹಾಗೂ ಮಂಗಳೂರಿನಲ್ಲಿ ಈ ತನಕ ಪ್ರದರ್ಶನಗೊಳ್ಳದ ಚಾಂತಾರ ಮನರಂಜನೆ ಇಲ್ಲಿಯ ವಿಶೇಷತೆಯಾಗಿದೆ. ಜೊತೆಗೆ ಐಸ್ ವರ್ಲ್ಡ್, ಸೆಲ್ಫಿಯು ಪಾಯಿಂಟ್, ಜಾನ್ ಫಿಲ್, ಕೊಲಂಬೊಸ್, ಡ್ರಾಗನ್ ರೈಲು, ಬ್ರೇಕ್ ಡ್ಯಾನ್ಸ್, ಮಕ್ಕಳ ವಾಟರ್ ಬೋಟ್, ಮಿನಿ ಟ್ರೈನ್. ಬೋನ್ಸಿ ಜಂಪಿಂಗ್, ಆಹಾರ ಮಳಿಗೆ, ಫರ್ನಿಚರ್ ಮಳಿಗೆ, ಫ್ಯಾನ್ಸಿ ಮಳಿಗೆ, ವಸ್ತ್ರಗಳ ಮಳಿಗೆ, ಚಪ್ಪಲಿ ಮಳಿಗೆ, ಟಾಯ್ಸ್ ಮಳಿಗೆ ಸೇರಿದಂತೆ ವಿವಿಧ ವಿನ್ಯಾಸಗಳ ಆಕರ್ಷಕ ವಿವಿಧ ರೀತಿಯ ಮಳಿಗೆಗಳನ್ನು ಒಳಗೊಂಡಿದೆ.
ಬೋರ್ಡರ್ ಎಕ್ಸ್‌ಪೋ 2019ಕ್ಕೆ ಮಂಜೇಶ್ವರ ಬ್ಲಾಕ್ ಪಂಚಾಯತು ಅಧ್ಯಕ್ಷ ಎಕೆಎಂ ಅಶ್ರಫ್ ರಿಬ್ಬನ್ ಕತ್ತರಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಉತ್ಸಾಹಿ ತರುಣರ ಮುತುವರ್ಜಿಯಿಂದ ಇಂದು ಗಡಿನಾಡು ಪ್ರದೇಶ ಕಂಗೊಳಿಸವಂತಾಗಿದೆ. ಸಣ್ಣ ದರದಲ್ಲಿ ಪ್ರವೇಶಾತಿಯನ್ನು ನೀಡಿ ಊರವರಿಗೆ ಮನರಂಜನೆಯನ್ನು ಸಮರ್ಪಿಸಿರುವ ಇದರ ಆಯೋಜಕರಾದ ತರುಣರ ಸೇವೆ ನಿಜಕ್ಕೂ. ಶ್ಲಾಘನೀಯ.
ಮುಖ್ಯ ಅತಿಥಿಯಾಗಿ ಆಗಮಿಸಿದ ಸಿಪಿಐ ಜಿಲ್ಲಾ ನೇತಾರ ಬಿವಿ ರಾಜನ್ ಮಾತಾನಾಡಿ  ಊರ ಯುವಕರ ಉತ್ಸಾಹದಿಂದ ಆಯೋಜಿಸಿರುವ ಈ ಬೋರ್ಡರ್ ಎಕ್ಸ್‌ಪೋ ದಲ್ಲಿ ಪಾಲ್ಗೊಂಡದರಲ್ಲಿ ಅತೀವ ಸಂತೋಷವಿದೆ. ಇಂದು ಆಧುನಿಕ ಜಗತ್ತಿನಲ್ಲಿ ಮನರಂಜನೆಗಾಗಿ ಜನರು ಮುಗಿ ಬೀಳುತ್ತಿರುವ ಕಾಲವಾಗಿದೆ. ಕಾಲಕ್ಕನುಸಾರವಾಗಿ ಇಂದು ಈ ಬೋರ್ಡರ್ ಎಕ್ಸ್‌ಪೋ ಗಡಿನಾಡ ಪ್ರದೇಶದಲ್ಲಿ ಸಜ್ಜಾಗಿದೆ ಎಂದು ಹೇಳಿ ಶುಭವನ್ನು ಹಾರೈಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಇನ್ನೊಬ್ಬ ಮುಖ್ಯ ಅತಿಥಿ ಎಸ್‌ಡಿಪಿಐ ಪಕ್ಷದ ನೇತಾರ ಇಕ್ಬಾಲ್ ಹೊಸಂಗಡಿ ಮಾತನಾಡಿ  ಜನರ ಅಗತ್ಯತೆಯನ್ನು ಮನಗಂಡು ಗಡಿನಾಡ ಜನರಿಗೆ ಒಂದು ತಿಂಗಳ ಹಬ್ಬವನ್ನೇ ತರುಣರು ಸಮರ್ಪಿಸಿದ್ದಾರೆ. ಇದಕ್ಕೆ ಗಡಿನಾಡ ಜನತೆ ಉತ್ತಮವಾದ ಪ್ರೋತ್ಸಾಹವನ್ನು ನೀಡಬೇಕಾಗಿದೆ ಎಂದು ಹೇಳಿ ಎಲ್ಲಾ ರೀತಿಯ ಶುಭವನ್ನು ಹಾರೈಸಿದರು.
ಈ ಸಂದರ್ಭ ವೇದಿಕೆಯಲ್ಲಿ ಬ್ಲಾಕ್ ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮುಸ್ತಫಾ ಉದ್ಯಾವರ , ಅಬ್ದುಲ್ಲಾ ಗುಡ್ಡಕ್ಕೇರಿ, ಹಮೀದ್ ಹೊಸಂಗಡಿ, ಮುಸ್ತಫಾ ಕಡಂಬಾರ್, ಹನೀಫ್ ಪಿ.ಎ, ದಯಾಕಾರ ಮಾಡ, ಬೋರ್ಡರ್ ಎಕ್ಸ್‌ಪೋ ಪಾಲುದಾರರಾದ ಅಲಿಕುಟ್ಟಿ, ಅಫಿಜ್, ಹನೀಫ್, ಶಾನವಾಜ್, ಹಕೀಮ್, ಸಲೀಮ್ ಸೇರಿದಂತೆ ಹಲವು ಗಣ್ಯರು ಉಪಸ್ಥರಿದ್ದರು. ಅತಿಥಿಗಳನ್ನು ವೇದಿಕೆಯಲ್ಲಿ ಸಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

Related posts

Leave a Reply

Your email address will not be published. Required fields are marked *