Header Ads
Breaking News

ಆಕ್ಸಿ ಬ್ಲೂನಿಂದ 5ಲೀಟರ್ ನೀರಿನ ಬಾಟಲಿ ಮಾರುಕಟ್ಟೆಗೆ ಬಿಡುಗಡೆ

ಆಝಾದ್ ಗ್ರೂಪ್‍ನ ಬ್ಲೂ ಮೂನ್ ಕಂಪೆನಿಯ ವತಿಯಿಂದ ಪ್ರವಾಸೋದ್ಯಮಕ್ಕೆ ಅಮೋಘ ಕೊಡುಗೆಯಾಗಿ ಗಾಂಧಿ ಜಯಂತಿಯ ಪ್ರಯುಕ್ತ ಸ್ವಚ್ಚ ಭಾರತಕ್ಕೆ ಸ್ವಚ್ಚ ನೀರು ಆಕ್ಸಿ ಬ್ಲೂ 5ಲೀಟರ್ ನೀರಿನ ಬಾಟಲಿಯನ್ನು ಮಾರುಕಟ್ಟೆಗೆ ಬಿಡುಗಡೆ ಸಮಾರಂಭ ನಡೆಯಿತು. ಶಾಸಕ ಯುಟಿ ಖಾದರ್, ಚಲನಚಿತ್ರ ನಟ ನಿರ್ದೇಶಕ ದೇವದಾಸ್ ಕಾಪಿಕಾಡ್ ಹಾಗೂ ಸಾಯಿ ಕೃಷ್ಣ ಕುಡ್ಲ ಜೊತೆ ಸೇರಿ ಆಕ್ಸಿ ಬ್ಲೂ 5ಲೀಟರ್ ನೀರಿನ ಬಾಟಲಿಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ನಂತರ ಮಾಜಿ ಸಚಿವ ಯು.ಟಿ ಖಾದರ್ ಮಾತನಾಡಿ ಒಕ್ಸಿ ಬ್ಲೂ ಜನ ಸಮಾನ್ಯರ ಮಧ್ಯೆ ಸಹಕಾರಿ ವಸ್ತುವಾಗಿ ಯಶಸ್ವಿಯಾಗಿ ನೆಲೆನಿಂತು ಗ್ರಾಹಕರ ಮನಗೆದ್ದಿದೆ. ಅರೋಗ್ಯವಂತ ಸಮಾಜ ಬಲಿಷ್ಠವಾದ ಭಾರತ ನಿರ್ಮಾಣಕ್ಕೆ ಇಂತಹ ಸಂಸ್ಥೆಗಳಿಂದ ಸಾಧ್ಯವಿದೆ ಎಂದು ಹೇಳಿದರು. ನಟ ನಿರ್ದೇಶಕ ದೇವದಾಸ್ ಕಾಪಿಕಾಡ್ ಮಾತನಾಡಿ ದೂರ ದೂರ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ 5 ಲೀಟರ್ ನ ನೀರಿನ ಕ್ಯಾಂನ್ ಉಪಯುಕ್ತ. ಮಾರುಕಟ್ಟೆಯಲ್ಲಿ ಅಝಾದ್ ಗ್ರೂಫ್ ಸಂಸ್ಥೆ ಒಕ್ಸಿ ಬ್ಲೂನ 5 ಲೀಟರಿನ ಕ್ಯಾನ್‍ಗೆ ಉತ್ತಮ ಬೇಡಿಕೆ ಇರುತ್ತದೆ. ಈ ಸಂಸ್ಥೆ ಸ್ಥಳೀಯರಿಗೆ ಹೆಚ್ಚಿನ ಜನರಿಗೆ ಉದ್ಯೋಗ ನೀಡುವ ಮೂಲಕ ಹತ್ತಾರು ಕುಟುಂಬಗಳು ಈ ಸಂಸ್ಥೆಯಿಂದಾಗಿ ಬೆಳಗುತ್ತದೆ ಮುಂದೆ ಯಶಸ್ವಿಯಾಗಿ ಮುಂದುರಿಯಲಿ ಎಂದು ಶುಭಹಾರೈಸಿದರು. ಈ ಸಂದರ್ಭ ನಟ, ನಿರ್ದೇಶಕ, ದೇವದಾಸ್ ಕಾಪಿಕಾಡ್, ಸಾಯಿಕೃಷ್ಣ ಆಕ್ಸಿ ಬ್ಲೂ ಮೆನೇಜರ್ ಅಬೂಬಕರ್ ಕೈರಂಗಳ, ಪಾಲುದಾರ ಇಸ್ಮಾಯಿಲ್ ಅಜ್ಜಿನಡ್ಕ, ಬಾತಿಷ್ ಅಜ್ಜಿನಡ್ಕ ಅಶ್ರಫ್ ದೇರಳೆಕಟ್ಟೆ, ಮುನೀರ್, ಫಾರೂಕ್, ಮೂಸಾ ತಳಕ್ಕಳ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *