Header Ads
Header Ads
Header Ads
Header Ads
Header Ads
Header Ads
Breaking News

ಆಗಸ್ಟ್ 10 ಮತ್ತು 11ರಂದು ಪೋಲಿಯೋ ಪ್ಲಸ್, ಮಾಹಿತಿ ಹಕ್ಕು ಕಾಯ್ದೆ, ರೋಟರಿ ಸದಸ್ಯತ್ವ ಅಭಿಯಾನ

ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3181 ಸಮಿತಿ ಮತ್ತು ರೋಟರಿ ಕ್ಲಬ್ ಮಂಗಳೂರು ಸಂಸ್ಥೆಯ ಜಂಟಿ ಆಶ್ರಯದಲ್ಲಿ ಜಿಲ್ಲಾ ಮಟ್ಟದ ರೋಟರಿ ಸದಸ್ಯತ್ವ ಅಭಿವೃದ್ಧಿ ಅಭಿಯಾನ, ಪ್ಲಸ್ ಅಭಿಯಾನ ಮತ್ತು ಮಾಹಿತಿ ಹಕ್ಕು ಕಾಯ್ದೆ ಬಗ್ಗೆ 2 ದಿನದ ಹೊಸ ಚಿಗುರು ಕಾರ್ಯಾಗಾರ ನಗರದ ಕುಲಶೇಖರ ಕೋರ್ಡೆಲ್ ಚರ್ಚ್ ಸಭಾಂಗಣದಲ್ಲಿ ಆಗಸ್ಟ್ 10 ಮತ್ತು 11ರಂದು ನಡೆಯಲಿದೆ.ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ, ಹೊಸಚಿಗುರು ಅಧ್ಯಕ್ಷರು ರೋಟರಿಯನ್ ಡಾ. ರೋಹನ್ ಮೋನಿಸ್ ಅವರು, ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3181ರ ಗವರ್ನರಾದ ಮೈಸೂರಿನ ರೋಟೇರಿಯನ್ ಜೋಸೆಫ್ ಮೆಥ್ಯು ಅವರು ಪೋಲಿಯೋ ಪ್ಲಸ್ ಮಾಹಿತಿ ಹಕ್ಕು ಕಾಯ್ದೆ ಈ ಕಾರ್ಯಗಾರವನ್ನು ಆಗಸ್ಟ್ 10ರಂದು ಸಂಜೆ 5 ಗಂಟೆಗೆ ಉದ್ಘಾಟನೆ ನಡೆಯಲಿದೆ. ಎರಡು ದಿನ ನಡೆಯುವ ಸೆಮಿನಾರ್‍ನಲ್ಲಿ ರೋಟರಿ ಕ್ಲಬ್‍ಗೆ ಯುವ ಜನತೆಯನ್ನು ಸೆಳೆಯುವ ಬಗ್ಗೆ ಹಾಗೂ ಹೊಸ ಕ್ಲಬ್‍ನ್ನು ಪ್ರಾರಂಭಿಸುವ ಬಗ್ಗೆ ತಜ್ಞರು ಮಾಹಿತಿ ನೀಡಲಿದ್ದಾರೆ ಎಂದರು.ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷರಾದ ಡಾ. ರಂಜನ್ ಆರ್.ಕೆ. ರೋ. ಪ್ರಶಾಂತ್ ರೈ, ಅಸಿಸ್ಟೆಂಟ್ ಗವರ್ನರ್ ರೋ. ಸುಮಿತ್ ರಾವ್ ಉಪಸ್ಥಿತಿರದ್ದರು.

Related posts

Leave a Reply

Your email address will not be published. Required fields are marked *