Header Ads
Header Ads
Breaking News

ಆಝಾದ್ ಹಾರ್ಡ್‌ವೇರ್ ವತಿಯಿಂದ ಫ್ಯಾಬ್ ಮೀಟ್:ಮಂಗಳೂರಿನ ಹೋಟೆಲ್ ಓಶಿಯನ್ ಪರ್ಲ್‌ನಲ್ಲಿ ಕಾರ್ಯಕ್ರಮ.

ಮನೆ ಎನ್ನುವುದು ಎಲ್ಲರ ಕನಸು. ಮನೆ ಗಟ್ಟಿಯಾಗಿರಬೇಕು ಎಂದರೆ ಮನೆಯ ಛಾವಣಿಯೂ ಗಟ್ಟಿಯಾಗಿರಬೇಕು. ಮನೆಯ ಛಾವಣಿಯನ್ನು ಸುಂದರವಾಗಿ, ಸುರಕ್ಷಿತವಾಗಿ ನಿರ್ಮಿಸಬಲ್ಲಂತಹ ಅತ್ಯಾಧುನಿಕ ವ್ಯವಸ್ಥೆಗಳು ಇಂದು ಲಭ್ಯವಿದೆ. ಇಂತಹ ವ್ಯವಸ್ಥೆಗಳನ್ನು ಕಲ್ಪಿಸುವ ಕಂಪನಿಗಳ ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸುವ ವಿನೂತನ ಕಾರ್ಯಕ್ರಮ ಮಂಗಳೂರಿನಲ್ಲಿ ನಡೆಯಿತು. ಮಂಗಳೂರಿನ ಆಝಾದ್ ಹಾರ್ಡ್‌ವೇರ್ ವತಿಯಿಂದ ಮಂಗಳೂರಿನ ಹೋಟೆಲ್ ಓಶಿಯನ್ ಪರ್ಲ್‌ನಲ್ಲಿ ಫ್ಯಾಬ್ ಮೀಟ್‌ನ್ನು ಹಮ್ಮಿಕೊಳ್ಳಲಾಗಿತ್ತು.ಮಂಗಳೂರಿನ ಆಝಾದ್ ಹಾರ್ಡ್‌ವೇರ್ ಆಶ್ರಯದಲ್ಲಿ ಮಂಗಳೂರಿನ ಪ್ರತಿಷ್ಠಿತ ಓಶಿಯನ್ ಪರ್ಲ್ ಹೋಟೆಲ್‌ನಲ್ಲಿ ಫ್ಯಾಬ್ ಮೀಟ್ ನಡೆಯಿತು. ಕಾರ್ಯಕ್ರಮದಲ್ಲಿ ವಿಸಾಕ ಇಂಡಸ್ಟ್ರೀಸ್, ಅದ್ನಾನ್ ರೂಫಿಂಗ್ಸ್, ಡಿವೈನ್ ಥರ್ಮಲ್ ರ್‍ಯಾಪ್, ಇಂಡಿಗೋ ವರ್ಸಾ ಪ್ಲ್ಯಾಂಕ್ ಕಂಪನಿಗಳು ಪಾಲ್ಗೊಂಡಿದ್ದವು. ಸಂಸ್ಥೆಗಳ ಪ್ರತಿನಿಧಿಗಳು ರೂಫಿಂಗ್ ಕ್ಷೇತ್ರದಲ್ಲಿ ಆಗಿರುವ ಪ್ರಮುಖ ಬದಲಾವಣೆಗಳು, ಬಂದಿರುವ ಹೊಸ ವ್ಯವಸ್ಥೆಗಳು, ಆಧುನಿಕ ತಂತ್ರಜ್ಞಾನಗಳು ಹಾಗೂ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಿದರು.ವಿಸಾಕ ವಿಬೋರ್ಡ್‌ನ ಅಸಿಸ್ಟೆಂಟ್ ರೀಜನಲ್ ಮ್ಯಾನೇಜರ್ ಸತೀಶ್, ವಿಸಾಕ ಬೋರ್ಡ್‌ಗಳ ಆಧುನಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿದರು.  ಅದ್ನಾನ್ ರೂಫಿಂಗ್ಸ್‌ನ ಮಾರ್ಕೆಟಿಂಗ್ ಮ್ಯಾನೇಜರ್ ಅಮಿತ್ ಹಾಗೂ ಜನರಲ್ ಮ್ಯಾನೇಜರ್ ಹರಿಕೃಷ್ಣ ಅವರು ಕೊರೋಶೀಲ್ಡ್ ಸ್ಕ್ರೂಗಳ ದೀರ್ಘಾವಧಿ ಬಾಳ್ವಿಕೆಯ ಬಗ್ಗೆ ವಿವರಿಸಿದರು.  ಡಿವೈನ್ ಥರ್ಮಲ್ ರ್‍ಯಾಪ್‌ನ ಬ್ಯುಸಿನೆಸ್ ಹೆಡ್ ಸಂಜೀವ್ ಅವರು ತಮ್ಮ ಸಂಸ್ಥೆಯ ಥರ್ಮಲ್ ರೂಫಿಂಗ್ ಟೆಕ್ನಾಲಜಿಯ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು. ಜೊತೆಗೆ ಇಂಡಿಗೋ ವರ್ಸಾ ಪ್ಲ್ಯಾಂಕ್‌ನ ಮ್ಯಾನೇಜರ್ ಅಮರ್‌ನಾಥ್ ರೆಡ್ಡಿಯವರು ತಮ್ಮ ಸಂಸ್ಥೆಯ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿದರು.  ಈ ಸಂದರ್ಭ ಮಾತನಾಡಿದ ಆಝಾದ್ ಗ್ರೂಪ್ ಆಫ್ ಕಂಪನೀಸ್‌ನ ಮನ್ಸೂರ್ ಅಹ್ಮದ್ ಅವರು, ಗ್ರಾಹಕರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಈ ಫ್ಯಾಬ್ ಮೀಟ್‌ನ್ನು ಆಯೋಜಿಸಲಾಗಿದೆ. ಗ್ರಾಹಕರಿಗೆ ಬೇಕಾದ ಎಲ್ಲಾ ಸಮಗ್ರ ಮಾಹಿತಿಯನ್ನು ನೀಡುವಲ್ಲಿ ಇದು ಯಶಸ್ವಿಯಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಆಝಾದ್ ಗ್ರೂಪ್ ಆಫ್ ಕಂಪನೀಸ್‌ನ ಅಕೌಂಟೆಂಟ್ ಜಲೀಲ್, ಸಂಸ್ಥೆಗಳ ಡೀಲರ್‌ಗಳು, ಡಿಸ್ಟ್ರಿಬ್ಯೂಟರ್‌ಗಳು ಸೇರಿದಂತೆ ಗ್ರಾಹಕರು ಉಪಸ್ಥಿತರಿದ್ದು ಮಾಹಿತಿ ಪಡೆದುಕೊಂಡರು.

Related posts

Leave a Reply