Header Ads
Header Ads
Breaking News

‘ಆಟಿದ ಪೊರ್ಲು’ ಆಚರಣೆ ಬಗ್ಗೆ ಶಕುಂತಳಾ ಶೆಟ್ಟಿ ವ್ಯಖ್ಯಾನ. ಪ್ರಕೃತಿ ಆರಾಧಿಸುವ-ಹಿರಿಯರ ಗೌರವಿಸುವ ಸಂಸ್ಕೃತಿ ಇದೆ.

ಪುತ್ತೂರು: ಪ್ರಕೃತಿಯನ್ನು ಆರಾಧಿಸುವ ಹಾಗೂ ಹಿರಿಯರಿಗೆ ಗೌರವ ನೀಡುವ ಸಂಸ್ಕೃತಿ ನಮ್ಮದಾಗಿದ್ದು, ಆಟಿ ತಿಂಗಳಲ್ಲಿ ಗುಡ್ಡದ ದೈವಗಳಿಗೆ ಬಡಿಸುವ ಅಗೇಲು ಸೇವೆ ಪ್ರಕೃತಿಗೆ ಸಲ್ಲುವ ಮತ್ತು ಹಿರಿಯರಿಗೆ ಬಡಿಸುವ ಕಾರ್ಯಕ್ರಮ ಹಿರಿಯರನ್ನು ಸ್ಮರಿಸುವ ಸಂಸ್ಕೃತಿಯಾಗಿದೆ ಎಂದು ಶಾಸಕಿ ಶಕುಂತಳಾ ಶೆಟ್ಟಿ ಅವರು ಹೇಳಿದರು.ಪುತ್ತೂರಿನ ಸಮರ್ಪಣಾ ಮಹಿಳಾ ವೇದಿಕೆ,ವಜ್ರಮಾತ ಮಹಿಳಾ ಘಟಕ ಮತ್ತು ಸ್ವಾಭಿಮಾನಿ ಸ್ತ್ರೀ ಶಕ್ತಿ ಸಂಘದ ಸಂಯುಕ್ತ ಆಶ್ರಯದಲ್ಲಿ ಶನಿವಾರ ಪುತ್ತೂರಿನ ಸ್ವಾಭಿಮಾನಿ ವೇದಿಕೆಯ ಸಭಾಭವನದಲ್ಲಿ ನಡೆದ ‘ಆಟಿದ ಪೊರ್ಲು’ ಕಾರ್ಯಕ್ರಮವನ್ನು ಚೆನ್ನೆಮಣೆ ಆಟ ಆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಈ ಹಿಂದೆ ಜನತೆ ಪಾಲಿಗೆ, ಅದರಲ್ಲೂ ಮುಖ್ಯವಾಗಿ ಬಡವರ ಪಾಲಿಗೆ ಆಟಿ ತಿಂಗಳು ಅತ್ಯಂತ ಕಷ್ಟದ ದಿನಗಳಾಗಿತ್ತು. ಬೇಸಾಯ, ಎಡಬಿಡದೆ ಸುರಿಯುವ ಮಳೆ, ಆಹಾರದ ಸಮಸ್ಯೆಯ ಬೇನೆ, ಜೇಜಾರಿನ ನಡುವೆಯೂ ಒಂದಿಷ್ಟು ಕುಸಲ್ ತೋರಿಸುವ ಕೆಲಸಗಳು ಈ ಹಿಂದೆ ಆಟಿ ತಿಂಗಳಲ್ಲಿ ನಡೆಯುತ್ತಿತ್ತು. ಆದರೆ ಈಗ ಕಷ್ಟದ ಪರಿಸ್ಥಿತಿ ಇಲ್ಲ. ಇದರಿಂದಾಗಿ ಇಂದಿನ ಯುವ ಸಮುದಾಯಕ್ಕೆ ಆಟಿಯ ಮಹತ್ವ ತಿಳಿದಿಲ್ಲ. ಈ ಹಿನ್ನಲೆಯಲ್ಲಿ ಇಂದು ಎಲ್ಲಾ ಕಡೆಗಳಲ್ಲಿ ಆಟಿಯ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಆಟಿಯ ಕೂಟ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.ಮಹಿಳೆಯರಿಗೆ ಆಟಿಯ ತಿಂಡಿ ತಿನಿಸುಗಳ ಸ್ಫರ್ಧೆ, ಮಕ್ಕಳಿಗೆ ನೃತ್ಯ ಮತ್ತು ಗಾಯನ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ‘ಆಟಿ ಕಲೆಂಜ’ ನಲಿಕೆ ವಿಶೇಷ ಆಕರ್ಷಣೆಯಾಗಿತ್ತು.ಸ್ವಾಭಿಮಾನಿ ವೇದಿಕೆ ಸೊಸೈಟಿಯ ನಿರ್ದೇಶಕರಾದ ಎಂ.ಬಿ. ವಿಶ್ವನಾಥ ರೈ, ಸಂಜೀವ ನಾಯಕ್ ಕಲ್ಲೇಗ, ಅಜಿತ್ ಕುಮಾರ್ ಜೈನ್, ಸಮರ್ಪಣಾ ಮಹಿಳಾ ವೇದಿಕೆಯ ಅಧ್ಯಕ್ಷೆ ಗಂಗಾರತ್ನ.ವಿ ರೈ, ವರಮಹಾಲಕ್ಷ್ಮೀ ಪೂಜಾ ಸೇವಾ ಸಮಿತಿಯ ಅಧ್ಯಕ್ಷೆ ಶುಭಮಾಲಿನಿ ಮಲ್ಲಿ, ಶಾರದಾ ಕೇಶವ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply