
ಸಚಿವ ಸ್ಥಾನ ಕೈ ತಪ್ಪಿದ ಶಾಸಕರ ಅಸಮಾಧಾನಕ್ಕೆ ಮಾಜಿ ಸಚಿವ ಯು.ಟಿ.ಖಾದರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಆಡಳಿತ ಪಕ್ಷದ ಸದಸ್ಯರೇ ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಸುನೀಲ್ ಕುಮಾರ್ ಅವರು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಸಚಿವ ಸ್ಥಾನಕ್ಕಾಗಿ ಬ್ಲ್ಯಾಕ್ ಮೇಲ್ ನಡೆದಿದೆ ಅಂತಾ ತಿಳಿಸಿದ್ದಾರೆ.ಇನ್ನೊಬ್ಬ ಶಾಸಕರು ಸಚಿವ ಸ್ಥಾನದ ಮಾನದಂಡದ ಬಗ್ಗೆ ಸಿಎಂ ಅವರನ್ನು ಏಕವಚನದಲ್ಲಿ ಪ್ರಶ್ನಿಸುತ್ತಾರೆ. ಮುಖ್ಯಮಂತ್ರಿ ಅವರಿಗೆ ಪಕ್ಷದ ಸದಸ್ಯರೇ ಅವಮಾನ ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿಗೆ ಇರುವ ಅದೇ ಗೌರವ ಸಿಎಂಗೂ ಸಿಗಬೇಕಲ್ವೇ ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರು ಇದಕ್ಕೆ ಸ್ಪಷ್ಟತೆ ನೀಡಬೇಕೆಂದರು.
ಶಾಸಕ ಮುನ್ನಿರತ್ನ ಅವರಿಗೆ ಸಚಿವ ಸ್ಥಾನ ಕೈತಪ್ಪಿದ ಬಗ್ಗೆ ಶಾಸಕ ಯು.ಟಿ.ಖಾದರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.ಕಾಂಗ್ರೆಸ್ ಬಿಟ್ಟು ಅನ್ಯ ಪಕ್ಷಕ್ಕೆ ಹೋದವರು, ನೆಮ್ಮದಿಯಿಂದ ಇರಲ್ಲ. ಅದು ಯಾರೇ ಇರಲಿ ಅವರು ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಅವರು ಬಿಜೆಪಿಯಲ್ಲಿ ನಮ್ಮಲ್ಲಿ ಇರಲು ಸಾಧ್ಯವೇ ಇಲ್ಲ. ಡಾ| ಸುಧಾಕರ್ ಅವರು ನಮ್ಮಲ್ಲಿ ಇರುತ್ತಿದ್ರೆ ಮೂರು ಖಾತೆ ಸಿಗುತ್ತಿತ್ತು. ಬಿಜೆಪಿಯಲ್ಲಿ ಎರಡು ಖಾತೆಯಷ್ಟೇ ಸಿಕ್ಕಿದೆ ಅಂತಾ ಹೇಳಿದ್ರು.ಇನ್ನು ಪಕ್ಷ ಬಿಟ್ಟು ಹೋದವರನ್ನು ವಾಪಸ್ ಕರೆ ತರುವ ವಿಚಾರ ಪಕ್ಷದ ರಾಜ್ಯಾಧ್ಯಕ್ಷ , ವಿಪಕ್ಷ ನಾಯಕರ ಅದನ್ನ ತೀರ್ಮಾನ ಮಾಡ್ತಾರೆ, ಅವರು ತೆಗೆದುಕೊಳ್ಳುವ ತೀರ್ಮಾನ ನಾವು ಬದ್ಧರಾಗಿರುತ್ತೇವೆ ಎಂದು ಅವರು ಹೇಳಿದರು.