Header Ads
Header Ads
Header Ads
Breaking News

ಸುಳ್ಯದಲ್ಲಿ ಡಾ.ಶಿಶಿಲರ ಆತ್ಮಕಥನ ’ಬೊಗಸೆ ತುಂಬ ಕನಸು’ ಕೃತಿ ಬಿಡುಗಡೆ

ಆದರ್ಶಗಳ ಬದ್ದತೆಯ ಮೂಲಕ ನನಸುಗಳನ್ನು ಕಟ್ಟಿ ಅದನ್ನು ಕೃತಿಗಳ ಮೂಲಕ ಬರಹಗಳ ರುಪಕ್ಕೆ ಇಳಿಸಿದ ಶಿಶಿಲರ ಕೃತಿಗಳು ಹೋರಾಟದ ಮನೋಭಾವನೆಗಳನ್ನು ವೃದ್ದಿಸುತ್ತದೆ. ಆತ್ಮಕಥನಗಳು ಒಬ್ಬ ಯಶಸ್ವಿ ಸಾಧಕನ ಬದುಕನ್ನು ಆತ್ಮಾವಲೋಕನ ಮಾಡಲು ಸಾಧ್ಯವಾಗುತ್ತದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಹೇಳಿದರು.

ಅವರು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜು ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಮೈಸೂರು ರಾಜ್ ಪ್ರಕಾಶನ ಪ್ರಕಟಿಸಿದ ವಿಶ್ರಾಂತ ಪ್ರಾಂಶುಪಾಲ, ಹಿರಿಯ ಸಾಹಿತಿ ಡಾ.ಬಿ.ಪ್ರಭಾಕರ ಶಿಶಿಲ ರ ಆತ್ಮಕಥನ ’ಬೊಗಸೆ ತುಂಬ ಕನಸು’ ಕೃತಿ ಬಿಡುಗಡೆಗೊಳಿಸಿ ಮಾತನಾಡಿ ಆದರ್ಶಗಳ ಮೂಲಕ ಕನಸು ಕಟ್ಟಿಕೊಂಡು ಬದುಕು ನಡೆಸಿದ ಶಿಶಿಲರು ಆತ್ಮಕಥನದ ಮೂಲಕ ಅದನ್ನು ಆತ್ಮಾವಲೋಕನ ಮಾಡಿಕೊಂಡಿದ್ದಾರೆ. ಬದ್ದತೆ ಇರುವ ಛಲಗಾರ ಕೇವಲ ಕನಸು ಕಟ್ಟಿ ಬಿಟ್ಟಿಲ್ಲ. ಬದಲಾಗಿ ಬರಹದ ಮೂಲಕ ಅದನ್ನು ಕೃತಿ ರೂಪದಲ್ಲಿ ಹೊರತಂದಿದ್ದಾರೆ. ವೃತ್ತಿ, ಪ್ರವೃತ್ತಿ, ಬದುಕು, ಬರಹಗಳಲ್ಲಿ ಹೋರಾಟದ ಮನೋಧರ್ಮವನ್ನು ಎತ್ತಿ ಹೊಡಿದ ಶ್ರೇಷ್ಠ ವಿದ್ಯಾಂಸ ಶಿಶಿಲರು ಎಂದು ಹೇಳಿದರು.

ದೆಹಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಕನ್ನಡ ಪೀಠದ ಸ್ಥಾಪಕಾಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಕೃತಿ ಪರಿಚಯ ಮಾಡಿ ಮಾತನಾಡಿ ಭಾಷೆಗಳ ಬೆಳವಣಿಗೆಗ ಸಾಹಿತ್ಯ ಕೃತಿಗಳ ಕೊಡುಗೆ ಅನನ್ಯ. ಸಾಹಿತ್ಯ ಕೃಷಿಯಲ್ಲಿ ಶಿಶಿಲರದ್ದು ಭಿನ್ನವಾದ ವ್ಯಕ್ತಿತ್ವ. ಸಣ್ಣ ಸಮುದಾಯಗಳ ಸಣ್ಣ ಸಣ್ಣ ಸಂಗತಿಗಳೂ ಆತ್ಮಕಥನದಲ್ಲಿ ದಾಖಲಾಗುವುದರಿಂದ ದೊಡ್ಡ ವ್ಯಕ್ತಿಗಳಾಗುತ್ತಾರೆ ಎಂದು ಹೇಳಿದ ಅವರು ದೇಶದಲ್ಲಿ ಕೇವಲ 22 ಭಾಷೆಗಳು ಮಾತ್ರ ಮಾನ್ಯತೇ ಪಡೆದ ಭಾಷೆಗಳು ಎಂದು ಗುರುತಿಸಿಕೊಂಡಿದೆ. ಇನ್ನೂ ಕೂಡಾ 19000 ಭಾಷೆಗಳು ದೇಶದಲ್ಲಿ ಮಾನ್ಯತೇ ಸಿಗದೇ ಅಳಿವಿನ ಅಂಚಿನಲ್ಲಿದೆ. ಇವುಗಳಲ್ಲಿ ಸಾಹಿತ್ಯ ಕೃಷಿಗಳು ಮೂಡಿಬರಬೇಕು. ಈ ಮೂಲಕ ಭಾಷೆಗಳ ಬೆಳವಣಿಗೆ ಆಗಬೇಕು ಎಂದು ಹೇಳಿದರು.

ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ವಹಿಸಿದ್ದರು. ಉಜಿರೆ ಎಸ್‌ಡಿಎಂಸಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಮುಖ್ಯ ಅತಿಥಿಗಳಾಗಿದ್ದರು. ಅಕಾಡೆಮಿ ನಿರ್ದೇಶಕರುಗಳಾದ ಶ್ರೀಮತಿ ಶೋಭಾ ಚಿದಾನಂದ ಮತ್ತು ಆರ್ಕಿಟೆಕ್ಟ್ ಅಕ್ಷಯ ಕುರುಂಜಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್, ಪದವಿ ಕಾಲೇಜು ಪ್ರಾಂಶುಪಾಲ ಡಾ.ಗಿರಿಧರ ಗೌಡ, ಹಿರಿಯ ವಿದ್ಯಾರ್ಥಿ ಸಂಘದ ಮಾರ್ಗದರ್ಶಕಿ ಪ್ರೊ.ರತ್ನಾವತಿ ಕೇರ್ಪಳ , ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಪೂವಪ್ಪ ಗೌಡ, ವಿದ್ಯಾರ್ಥಿ ನಾಯಕ ಕೃಷ್ಣಪ್ರಸಾದ್ ಉಪಸ್ಥಿತರಿದ್ದರು.

 

Related posts

Leave a Reply

Your email address will not be published. Required fields are marked *