Breaking News

ಆತ್ಮಸಾಕ್ಷಿಯಿಲ್ಲದ ಕಲ್ಲಡ್ಕ ಪ್ರಭಾಕರ ಭಟ್, ಕಲ್ಲಡ್ಕದಲ್ಲಿಯೇ ಹೆಚ್ಚಿನ ಸಂಘರ್ಷ-ದಿವ್ಯಪ್ರಭಾ ಚಿಲ್ತಡ್ಕ

ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರು ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಬಿಜೆಪಿ ನಾಯಕ ರಾಜೇಶ್ ನಾಯ್ಕರನ್ನು ಬಂಧಿಸುವಂತೆ ಹೇಳಿರುವ ಮಾಹಿತಿ ಸರಿಯಾಗಿದೆ. ಕೋಮು ಸಂಘರ್ಷಕ್ಕೆ ಪ್ರಯತ್ನಿಸುವ ಯಾರನ್ನೇ ಆದರೂ ಬಂಧಿಸುವ ಅಧಿಕಾರ ಪೋಲೀಸರಿಗಿದೆ ಎಂದು ದಿವ್ಯಪ್ರಭಾ ಚಿಲ್ತಡ್ಕ ಹೇಳಿಕೆ ನೀಡಿದ್ದಾರೆ.
ದ. ಕ. ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಉಸ್ತುವರಿ ಸಚಿವರು ಕೋಮು ಗಲಭೆಗೆ ಕಾರಣವಾಗುತ್ತಿರುವುವರನ್ನು ಬಂಧಿಸುವಂತೆ ಪೋಲೀಸ್ ವರಿಷ್ಠಾಧಿಕಾರಿಯವರಿಗೆ ಹೇಳಿರುವುದು ತಪ್ಪಲ್ಲ. ಕಲ್ಲಡ್ಕದಲ್ಲಿಯೇ ಹೆಚ್ಚು ಕೋಮು ಸಂಘರ್ಷವಾಗುತ್ತಿರುವುದರಿಂದ ಈ ರೀತಿ ಹೇಳಿದ್ದಾರೆ ಎಂದು ರಾಜ್ಯ ಸಮಾಜ ಕಲ್ಯಾಣ ಅಧ್ಯಕ್ಷೆ ಶ್ರೀಮತಿ ದಿವ್ಯಪ್ರಭಾ ಚಿಲ್ತಡ್ಕ ಹೇಳಿಕೆ ನೀಡಿದ್ದಾರೆ. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ ಬೇರೆ ಕಡೆಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿಲ್ಲ.
ಎಲ್ಲಾ ಕಡೆಯೂ ಎಲ್ಲಾ ಧರ್ಮದವರೂ ಇದ್ದಾರೆ. ಆದರೆ ಕಲ್ಲಡ್ಕದಲ್ಲಿಯೇ ಹೆಚ್ಚಿನ ಸಂಘರ್ಷಗಳು ನಡೆಯುತ್ತಿದೆ. ಇದು ಕಲ್ಲಡ್ಕ ಪ್ರಭಾಕರ ಭಟ್ ಕುಮ್ಮುಕ್ಕಿನಿಂದಲೇ ನಡೆಯುತ್ತಿದೆ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ೮ ವಿಧಾನಸಭಾ ಕ್ಷೇತ್ರದ ೭ ಕಡೆಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಆಡಳಿತಕ್ಕೆ ಬರಬೇಕು ಎನ್ನುವ ದುರುದ್ದೇಶದಿಂದ ಇಂತಹ ಗಲಾಭೆ ಸೃಷ್ಠಿಸುತ್ತಿದ್ದಾರೆ. ಎಂದರಲ್ಲದೆ ರಾಮನ ಭಕ್ತನಾಗಿರುವ ಕಲ್ಲಡ್ಕ ಪ್ರಭಾಕರ ಭಟ್‌ರವರಿಗೆ ಆತ್ಮ ಸಾಕ್ಷಿಯಿದ್ದರೆ ಈ ಬಗ್ಗೆ ರಾಮ ದೇವಾಲಯಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಸವಾಲನ್ನ ಎಸೆದಿದ್ದಾರೆ.

Related posts

Leave a Reply