Header Ads
Breaking News

ಆಧಾರ್ ಟೋಕನ್ ಪಡೆಯಲುಬಿ.ಸಿ.ರೋಡಿನ ಎಸ್‍ಬಿಐ ಬ್ಯಾಂಕ್ ಮುಂಭಾಗ ಜನಸರತಿ ಅಧಿಕಾರಿಗಳ ವಿರುದ್ಧ ಅಸಮಾಧಾನ

ಬಂಟ್ವಾಳ: ಆಧಾರ್ ಟೋಕನ್ ಪಡೆಯಲು ಬಿ.ಸಿ.ರೋಡಿನ ಎಸ್‍ಬಿಐ ಬ್ಯಾಂಕ್ ಮುಂಭಾಗ ಮುಂಜಾನೆಯಿಂದ ಸರತಿ ಸಾಲಿನಲ್ಲಿ ಕಾಯುತ್ತಿದ್ದ ದೃಶ್ಯ ಕಂಡು ಬಂದಿದೆ. ಆಧಾರ್ ಕಾರ್ಡ್ ಪಡೆಯಲು ಹಾಗೂ ಆಧಾರ್ ತಿದ್ದುಪಡಿ ಮಾಡಲು ಕೇವಕ ಟೋಕನ್ ಪಡೆಯಲು ಜನ ಬೆಳಗ್ಗಿನಿಂದಲೇ ಕಾಯುತ್ತಿದ್ದರೂ ಬ್ಯಾಂಕ್ ಬೆಳಿಗ್ಗೆ 10 ಗಂಟೆಯವರೆಗೂ ಬಾಗಿಲು ತೆರೆದಿಲ್ಲ. ಇದರಿಂದ ಆಕ್ರೋಶಿತರಾದ ಜನ ಬ್ಯಾಂಕ್ ಅಧಿಕಾರಿಗಳ ವಿರುದ್ದ ಅಸಮಧಾನ ವ್ಯಕ್ತ ಪಡಿಸಿದ್ದಾರೆ.

ಟೋಕನ್ ಪಡೆದು ಮತ್ತೆ ಕೆಲಸಕ್ಕೆ ಹೋಗಬಹದು ಎಂದು ಕೊಂಡು ಅನೇಕ ಮಂದಿ ಬೆಳಿಗ್ಗೆ 6 ಗಂಟೆಯಿಂದಲೇ ಸರತಿ ಸಾಲಿನಲ್ಲಿ ಕಾಯಲಾರಂಭಿಸಿದ್ದಾರೆ. ಟೋಕನ್ ನೀಡುವುದಾಗಿ ಹೇಳಿದ್ದರೂ ಕೂಡ ಬ್ಯಾಂಕ್ ಅಧಿಕಾರಿಗಳು ಎಂದಿನಂತೆ 10 ಗಂಟೆಯ ಬಳಿಕವೇ ಬಾಗಿಲು ತೆರೆದುದ್ದರಿಂದ ಸಣ್ಣ ಮಕ್ಕಳನ್ನು ಹಿಡಿದುಕೊಂಡಿದ್ದ ಮಹಿಳೆಯರು, ವೃದ್ದರು ತೊಂದರೆ ಪಡುವಂತಾಯಿತು.

ಸಾಮಾಜಿಕ ಕಾರ್ಯಕರ್ತ ಪ್ರಭಾಕರ ದೈವಗುಡ್ಡೆ ಮಾತನಾಡಿ ಬಂಟ್ಬಾಳ ತಾಲೂಕಿನಲ್ಲಿ 5 ಕಡೆಗಳಲ್ಲಿ ಮಾತ್ರ ಆಧಾರ್ ಟೋಕನ್ ನೀಡುವ ಕೇಂದ್ರಗಳಿದ್ದು ತಾಲೂಕಿನ ಲಕ್ಷಾಂತರ ಮಂದಿ ಈ ಕೇಂದ್ರಗಳನ್ನು ಆಶ್ರಯಿಸಬೇಕಿರುವುದರಿಂದ ತೊಂದರೆ ಪಡುವಂತಾಗಿದೆ. ಜನಪ್ರತಿನಿಧಿಗಳು ತಕ್ಷಣ ಸ್ಪಂದಿಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿದ್ದಾರೆ.

Related posts

Leave a Reply

Your email address will not be published. Required fields are marked *