Header Ads
Breaking News

ಆನ್‍ಲೈನ್‍ನಲ್ಲಿ ಆರ್ಡ್‍ರ್ ಮಾಡಿದ್ದ ಚಿಕನ್ ಖಾದ್ಯದಲ್ಲಿ ಜೀವಂತ ಹುಳು ಪ್ರಕರಣ : ಚಿಕ್‍ಕಿಂಗ್ ಇಟ್ಸ್ ಮೈ ಚಾಯಿಸ್’ ಸಂಸ್ಥೆಗೆ ಅಧಿಕಾರಿಗಳ ದಾಳಿ

ಮಹಿಳೆಯೊಬ್ಬರು ಆನ್‍ಲೈನ್ ಮೂಲಕ ಆರ್ಡರ್ ಮಾಡಿ ಪಡೆದಿದ್ದ ಚಿಕನ್ ಖಾದ್ಯದಲ್ಲಿ ಜೀವಂತ ಹುಳು ಹರಿದಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಮಾಲ್‍ವೊಂದರಲ್ಲಿನ `ಚಿಕ್‍ಕಿಂಗ್ ಇಟ್ಸ್ ಮೈ ಚಾಯಿಸ್’ ಸಂಸ್ಥೆಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದಾಳಿ ಸಂದರ್ಭ ಕಳಪೆ ಗುಣಮಟ್ಟದ ಹಾಗೂ ಅವಧಿ ಮುಗಿದ ಚಿಕನ್ ಐಟಮ್ಸ್ , ಬನ್ ಮುಂತಾದ ಆಹಾರ ಪದಾರ್ಥಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆಹಾರ ಸುರಕ್ಷತೆಗೆ ಸಂಬಂಧಿಸಿದ ಆರು ಮಂದಿ ಅಧಿಕಾರಿಗಳ ತಂಡ ಈ ದಾಳಿ ನಡೆಸಿದೆ. ಅವಧಿ ಮುಗಿದ ಆಹಾರ ಖಾದ್ಯ ಸಹಿತ ವಿವಿಧ ಪದಾರ್ಥಗಳನ್ನು ಡಬ್ಬದಲ್ಲಿ ತುಂಬಿಸಿ ಸೀಲ್ ಮಾಡಿ ಸಾಗಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಲೇಡಿಹಿಲ್‍ನ ಸಲ್ಮಾ ಸಿಮ್ರನ್ ಎಂಬವರು ಶನಿವಾರ ಸಂಜೆ `ಚಿಕ್‍ಕಿಂಗ್’ ಸಂಸ್ಥೆಯಿಂದ ಚಿಕನ್ ಖಾದ್ಯ ಸಹಿತ ಬರ್ಗರ್ ಪಾರ್ಸೆಲ್‍ಗೆ ಆರ್ಡರ್ ಮಾಡಿದ್ದರು. ಬಳಿಕ ರಾತ್ರಿ 8 ಗಂಟೆಯ ಸುಮಾರಿಗೆ ಪಾರ್ಸೆಲ್ ಮನೆಗೆ ಬಂದಿದೆ. ನಂತರ ಸಲ್ಮಾ, ಅವರ ತಾಯಿ, ಮಕ್ಕಳು ಅದೇ ಆಹಾರವನ್ನು ಅಲ್ಪ ಪ್ರಮಾಣದಲ್ಲಿ ಸೇವಿಸಿದ್ದಾರೆ. ಈ ನಡುವೆ ಚಿಕನ್ ಖಾದ್ಯದಲ್ಲಿ ಹುಳು ಕಾಣಿಸಿಕೊಂಡಿದ್ದು, ಕುಟುಂಬವೇ ಆತಂಕ್ಕೀಡಾಗಿತ್ತು. ಈ ಬಗ್ಗೆ ಸಲ್ಮಾ ಅವರು ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ಗ್ರಾಹಕ ನ್ಯಾಯಾಲಯಕ್ಕೂ ದೂರು ನೀಡಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ದಾಳಿ ನಡೆಸಿದ ಬಗ್ಗೆ ಅಧಿಕಾರಿಗಳು ಇಲ್ಲಿಯವರೆಗೆ ಖಚಿತಪಡಿಸಿಲ್ಲ.

Related posts

Leave a Reply

Your email address will not be published. Required fields are marked *