Header Ads
Breaking News

ಆಯುಷ್ಮಾನ್ ಕಾರ್ಡ್ ನೋಂದಣಿ ಅಭಿಯಾನ-ಶಾಸಕ ಡಾ.ವೈ ಭರತ್ ಶೆಟ್ಟಿ ಅವರಿಂದ ಚಾಲನೆ

ಕೇಂದ್ರ ಸರಕಾರದ ಪ್ರಧಾನಿ ನರೇಂದ್ರ ಮೋದಿಯವರ ಯೋಜನೆಯನ್ನು ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಯಾವುದೇ ಜಾತಿ, ಮತ, ಧರ್ಮ, ಪಕ್ಷ ಎಂದು ನೋಡದೇ ಎಲ್ಲಾ ಫಲಾನುಭವಿಗಳಿಗೆ ಒದಗಿಸುವ ಮಾದರಿ ಕೆಲಸವನ್ನು ಮಾಡುತ್ತಿರುವುದು ಅಭಿನಂದನೀಯ ಕೆಲಸ ಎಂದು ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಹೇಳಿದರು.


ಅವರು ಬಿಜೆಪಿ ಯುವ ಮೋರ್ಚಾ ಮಂಗಳೂರು ಉತ್ತರ ಮಂಡಲ , ಭಾರತೀಯ ಜನತಾ ಸ್ಥಾನೀಯ ಸಮಿತಿ ವಾರ್ಡ್  ನೀರುಮಾರ್ಗ, ಮಾತೃ ಶ್ರೀ ಪ್ರೆಂಡ್ಸ್ ಸರ್ಕಲ್ ಮಾಡ್ರಬೈಲ್ ರಂಗಪಾದೆ ಇದರ ಜಂಟಿ ಆಶ್ರಯದಲ್ಲಿ ಆಯುಷ್ಮಾನ್ ಕಾರ್ಡ್ ನೊಂದಣಿ ಅಭಿಯಾನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಧ್ಯಮ ವರ್ಗದವರಿಗೆ, ಕೆಳ ಮಧ್ಯಮವರ್ಗದವರಿಗೆ ಜೀವನದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ತೊಂದರೆ ಅಥವಾ ಅಪಘಾತಗಳು ಸಂಭವಿಸಿದಾಗ ಆಸ್ಪತ್ರೆಯ ಬಿಲ್ ತುಂಬುವ ಹೊರೆ ಆಯುಷ್ಮಾನ್ ಕಾರ್ಡ್ ನಿಂದ ಕಡಿಮೆಯಾಗುತ್ತದೆ ಎಂದು ಶಾಸಕರು ಹೇಳಿದರು. ಕಾರ್ಯಕ್ರಮದಲ್ಲಿ ಯುವ ಮೋರ್ಚಾ ಉತ್ತರ ಮಂಡಲ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ, ಮಂಗಳೂರು ಉತ್ತರ ಮಂಡಲ ಅಕ್ರಮ-ಸಕ್ರಮ ಸಮಿತಿ ಸದಸ್ಯರಾದ ಶ್ರೀಮತಿ ಪವಿತ್ರ ಮಂಡಲ ಉಪಾಧ್ಯಕ್ಷ ಹಾಗೂ ಮಹಾಶಕ್ತಿ ಕೇಂದ್ರ ಪ್ರಭಾರಿ ಲಕ್ಷ್ಮಣ್ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *