Header Ads
Breaking News

ಆಯುಷ್ಮಾನ್ ಕಾರ್ಡ್ ವಿತರಣಾ ಅಭಿಯಾನ : ಬನ್ನೂರು ಶ್ರೀ ಶಿವಪಾರ್ವತಿ ಮಂದಿರದಲ್ಲಿ ಆಯೋಜನೆ

ಪುತ್ತೂರು: ಧಾರ್ಮಿಕ ವಿಚಾರ ಸೇರಿದಂತೆ ಸಮಾಜ ಸೇವೆಯಲ್ಲೂ ನಿರಂತರ ಕಾರ್ಯಚಟುವಟಿಕೆ ನಡೆಸುತ್ತಿರುವ ಬನ್ನೂರು ಅಯೋಧ್ಯಾನಗರ ಶ್ರೀ ಶಿವಪಾರ್ವತಿ ಮಂದಿರ ಕೇಂದ್ರ ಸರಕಾರದ ಯೋಜನೆಯಾದ ಆಯುಷ್ಮಾನ್ ಕಾರ್ಡ್ ನೋಂದಾವಣೆ ಮತ್ತು ಕಾರ್ಡ್ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮಂದಿರದ ವಠಾದಲ್ಲಿ ಮಂದಿರದ ಅಧ್ಯಕ್ಷ ವಿಶ್ವನಾಥ ಗೌಡ ಅವರ ನೇತ್ರತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.ನಗರಸಭಾ ಸದಸ್ಯೆ ಮೋಹಿನಿ ವಿಶ್ವನಾಥ ಗೌಡ ಅವರಿಂದ ಉಚಿತ ಆಯು ಷ್ಮಾನ್ ಕಾರ್ಡ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಂದಿರದ ಗೌರವಾಧ್ಯಕ್ಷ ಉದಯ ಕುಮಾರ್, ನಗರಸಭಾ ಸ್ಥಳೀಯ ಸದಸ್ಯರಾದ ಮೋಹಿನಿ ವಿಶ್ವನಾಥ ಗೌಡ, ಗೌರಿ ಬನ್ನೂರು, ಉಪಸ್ಥಿತರಿದ್ದರು. ಮಂದಿರದ ಕಾರ್ಯದರ್ಶಿ ದಯಾನಂದ ಸ್ವಾಗತಿಸಿ ವಂದಿಸಿದರು. ಸುದ್ದಿ ಸೆಂಟರ್ ಸಂಸ್ಥೆಯ ಸೇವಾ ಕೇಂದ್ರ ಕಾರ್ಡ್ ವಿತರಣೆಯ ಸಹಯೋಗ ನೀಡಿದರು.

Related posts

Leave a Reply

Your email address will not be published. Required fields are marked *