Header Ads
Header Ads
Breaking News

ಆರ್ಥಿಕ ನೀತಿ ಗೊತ್ತಿಲ್ಲದ ಪ್ರಧಾನಿಯಿಂದ ದೇಶ ತತ್ತರ:ಮೂಡ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಹೇಳಿಕೆ

ಉಳ್ಳಾಲ: ದೇಶದಾದ್ಯಂತ ಲಾಭ ಗಳಿಸಿ ಸೇವೆ ನಡೆಸುತ್ತಿದ್ದಂತಹ ವಿಜಯ ಬ್ಯಾಂಕ್ ತುಳುನಾಡಿಗೆ ಕೀರ್ತಿಯನ್ನು ತಂದು ಕೊಟ್ಟಿತ್ತು. ಆದರೆ ಆರ್ಥಿಕ ನೀತಿ ಗೊತ್ತಿಲ್ಲದ ಪ್ರಧಾನಿ ಮೋದಿಯವರಿಂದಾಗಿ ದೇಶ ಆರ್ಥಿಕತೆಯಲ್ಲಿ 10 ವರ್ಷ ಹಿಂದೆ ಹೋಗಿದೆ ಎಂದು ಮೂಡ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಹೇಳಿದ್ದಾರೆ.
ಕಾಂಗ್ರೆಸ್ ಮಂಜನಾಡಿ ವಲಯ ವತಿಯಿಂದ ವಿಜಯ ಬ್ಯಾಂಕ್ ಕಲ್ಕಟ್ಟ ಶಾಖೆ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಹೊಟೇಲ್, ಅಂಗಡಿಗಳಲ್ಲಿ ಶೇ.75 ವ್ಯಾಪಾರ ಕಡಿಮೆಯಾಗಿದೆ ಅನ್ನುತ್ತಿದ್ದಾರೆ ವ್ಯಾಪಾರಸ್ಥರು. ಯೋಜನೆಯನ್ನು ಜಾರಿಗೆ ತರಬೇಕಾದಲ್ಲಿ ಪ್ರಧಾನಿ ಯೋಚಿಸಬೇಕಿತ್ತು. ಸರ್ವಾಧಿಕಾರದ ನಿರ್ಧಾರದಿಂದಾಗಿ ದೇಶದ ಜನ ಕಂಗಾಲಾಗುವಂತಾಗಿದೆ ಎಂದರು.ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್ ಮಾತನಾಡಿ, ದೇಶಕ್ಕೆ ಬಂಟ ಸಮುದಾಯದ ಕೊಡುಗೆ ಅಪಾರ. ಇಂತಹ ಬಂಟ ಸಮುದಾಯದ ಹಿರಿಯರೇ ಸ್ಥಾಪಿಸಿದ ವಿಜಯ ಬ್ಯಾಂಕ್ ಅನ್ನು ಬಂಟ ಪುತ್ರನೇ ನಾಶಗೊಳಿಸುತ್ತಿರುವುದು ವಿಪರ್‍ಯಾಸ. ಈ ಬಾರಿ ವಿಜಯ ಬ್ಯಾಂಕ್ ವಿಲೀನಗೊಳಿಸುವ ಮೂಲಕ ಜಿಲ್ಲೆಗೆ ಅವಮಾನಗೊಳಿಸಲು ಮುಂದಾದ ಸಂಸದರನ್ನು ಜಿಲ್ಲೆಯ ಜನ ಮರು ಆಯ್ಕೆ ನಡೆಸುವುದಿಲ್ಲ ಎಂದರು.

ದ.ಕ ಕಾಂಗ್ರೆಸ್ ಅಲ್ಪ ಸಂಖ್ಯಾತ ಅಧ್ಯಕ್ಷ ಎನ್.ಎಸ್ ಕರೀಂ, ಉಳ್ಳಾಲ ನಗರ ಸಭೆ ಮಾಜಿ ಸದಸ್ಯ ದಿನೇಶ್ ರೈ, ದ.ಕ ಕಾಂಗ್ರೆಸ್ ಅಲ್ಪ ಸಂಖ್ಯಾತ ಅಧ್ಯಕ್ಷ ಎನ್.ಎಸ್ ಕರೀಂ, ಟಿ.ಎಸ್ ಅಬೂಬಕರ್, ಅಹಾರ ಇಲಾಖೆಯ ನಿರ್ದೇಶಕ ಜ ಟಿ.ಎಸ್ ಅಬ್ದುಲ್ಲ, ಮಂಜನಾಡಿ ಗ್ರಾ.ಪಂ ಅಧ್ಯಕ್ಷ ಮಹಮ್ಮದ್ ಮೋನು, ಸದಸ್ಯ ಇಸ್ಮಾಯಿಲ್ ದೊಡ್ಡಮನೆ, ಕುಂಞ ಬಾವ ಹಾಜಿ ಕಲ್ಕಟ್ಟ, ಕಿನ್ಯ ಗ್ರಾ.ಪಂ ಉಪಾಧ್ಯಕ್ಷ ಸಿರಾಜ್ ಕಿನ್ಯ, ಸದಸ್ಯ ಫಾರೂಕ್ ಕಿನ್ಯ, ಉದ್ಯಮಿ ಶರೀಫ್ ನಾಟೆಕಲ್ ಉಪಸ್ಥಿತರಿದ್ದರು.

Related posts

Leave a Reply