Header Ads
Header Ads
Breaking News

ಆರ್‌ಪಿ ಪ್ರೆಸೆಂಟ್ಸ್ ದೇಶಗಾದ್ ’ಸೈನಿಕ’ ,ಜುಲೈ 18ರಂದು ತುಳು ಟೆಲಿ ಮೂವಿ ರಿಲೀಸ್

ತುಳು ಕಿರುಚಿತ್ರ ವೀಕ್ಷಕರಿಗೆ ಸಿಹಿ ಸುದ್ದಿ. ತುಳುನಾಡ ಕಲಾಭ್ರಹ್ಮೆ ಜಿ.ಎ ಬೋಳೂರು ಅವರ ನಿರ್ದೇಶನದ ಆರ್.ಪಿ. ಪ್ರೆಸೆಂಟ್ಸ್ ದೇಶಗಾದ್ ಸೈನಿಕ ಎಂಬ ಕಿರು ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಜುಲೈ 18ರಂದು ಮಂಗಳೂರಿನ ಡಾನ್ ಬಾಸ್ಕೋ ಹಾಲ್‌ನಲ್ಲಿ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ವಕ್ರತುಂಡ ಮಹಾಕಾಯ ಸಿನಿ ಕ್ರಿಯೇಷನ್ಸ್ ಈಗಾಗಲೇ ತುಳು ಟೆಲಿ ಮೂವಿಸ್‌ನ್ನು ನಿರ್ಮಿಸಿ ಜನಮಾನಸದಲ್ಲಿ ಹೆಸರು ಗಳಿಸಿದ್ದು ಮಾತ್ರವಲ್ಲ, ತುಳು ರಂಗಭೂಮಿಗೆ ಹೊಸ ಕಲಾವಿದರನ್ನು ಪರಿಚಯಿಸಿರುವುದು ಹೆಮ್ಮೆಯ ವಿಚಾರ. ಇದೀಗ ಇನ್ನೊಂದು ತುಳು ಟೆಲಿ ಮೂವಿಯನ್ನು ನಿರ್ಮಿಸಿ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಶ್ರೀ ವಾಸುದೇವ ಪೊನ್ನಕ್ಕ ಪ್ರತಿಷ್ಟಾನ ರಿಜಿಸ್ಟ್ರಾರ್ ನಂತೂರು, ಪದವು ವಕ್ರತುಂಡ ಮಹಾಕಾಯ ಸಿನಿ ಕ್ರಿಯೇಷನ್ಸ್ ತುಳು ಟಿಲಿ ಮೂವಿಸ್ ದೇಶಗಾದ್ ಸೈನಿಕ ಎಂಬ ಕಿರು ಚಿತ್ರವನ್ನು ರಚಿಸಿದ್ದಾರೆ. ರಜನಿ ಮೋಹನ್ ಪ್ರಸಾದ್ ನಿರ್ಮಾಣದ ಚಿತ್ರವಾಗಿದ್ದು, ತುಳುನಾಡ ಕಲಾಭ್ರಹ್ಮೆ ಜಿ.ಎ ಬೋಳೂರು ಅವರು ಕಥೆ-ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ನಿದೇರ್ಶನ ಮಾಡಿರುವ ಚಿತ್ರವಾಗಿದೆ. ಸಂಕಲನಕಾರರಾಗಿ ಸುರೇಂದ್ರ ಪಣಿಯೂರು, ಸಂಗೀತವನ್ನು ಸಂದೇಶ ಬಾಬಣ್ಣ ಅವರು ನೀಡಿದ್ದಾರೆ. ಈಗಾಗಲೇ ಕಿರು ಚಿತ್ರದ ಟ್ರೇಲರ್‌ಗೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಟೆಲಿ ಮೂವಿ ಬಿಡುಗಡೆಗೆ ಸಿನಿ ರಸಿಕರು ಕಾತರದಿಂದ ಕಾಯುತ್ತಿದ್ದಾರೆ.

Related posts

Leave a Reply

Your email address will not be published. Required fields are marked *